‘ಸಿಧು ನೇತೃತ್ವದಲ್ಲಿ ಪಂಜಾಬ್ ಚುನಾವಣೆ’ ಹರೀಶ್ ರಾವತ್ ಟ್ವೀಟ್ ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ನಾಯಕ ಸುನಿಲ್ ಜಾಖಡ್

| Updated By: ರಶ್ಮಿ ಕಲ್ಲಕಟ್ಟ

Updated on: Sep 20, 2021 | 11:35 AM

Sunil Jakhar: ಮುಖ್ಯಮಂತ್ರಿಯಾಗಿ ಚರಣ್​​ಜಿತ್ ಸಿಂಗ್ ಛನ್ನಿ ಪ್ರಮಾಣವಚನ ಸ್ವೀಕರಿಸುವ ದಿನದಂದು, ರಾವತ್ ಅವರು "ಸಿಧು ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ" ಎಂಬ ಹೇಳಿಕೆ ಗೊಂದಲಕ್ಕೀಡುಮಾಡಿದೆ. ಇದು ಸಿಎಂ ಅಧಿಕಾರವನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ.

‘ಸಿಧು ನೇತೃತ್ವದಲ್ಲಿ ಪಂಜಾಬ್ ಚುನಾವಣೆ’ ಹರೀಶ್ ರಾವತ್ ಟ್ವೀಟ್ ಪ್ರಶ್ನಿಸಿದ ಕಾಂಗ್ರೆಸ್ ಹಿರಿಯ ನಾಯಕ ಸುನಿಲ್ ಜಾಖಡ್
ಸುನಿಲ್ ಜಾಖಡ್
Follow us on

ಅಮೃತಸರ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಘಟಕದ ಮಾಜಿ ಅಧ್ಯಕ್ಷ ಸುನಿಲ್ ಜಾಖಡ್ (Sunil Jakhar) ಅವರು  ರಾಜ್ಯ ಉಸ್ತುವಾರಿ ಹರೀಶ್ ರಾವತ್ (Harish Rawat) ಅವರು ನವಜೋತ್ ಸಿಂಗ್ ಸಿಧು (Navjot Singh Sidhu) ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದ್ದು ದಿಗ್ಬ್ರಮೆಗೊಳಿಸಿದೆ ಎಂದು ಟ್ವೀಟ್ ಮಾಡಿದ್ದಾರೆ. ಚರಣ್​​ಜಿತ್ ಸಿಂಗ್ ಛನ್ನಿ (Charanjit Singh Channi)  ಅವರು ಪ್ರಮಾಣವಚನ ಸ್ವೀಕರಿಸುವ ದಿನದಂದೇ ರಾವತ್ ಈ ರೀತಿ ಹೇಳಿದ್ದು ಇದು ಹೊಸ ಮುಖ್ಯಮಂತ್ರಿಯ ಅಧಿಕಾರವನ್ನು ದುರ್ಬಲಗೊಳಿಸಬಹುದು ಮತ್ತು ಅವರ ಸ್ಥಾನಕ್ಕೆ ಅವರ ಆಯ್ಕೆಯನ್ನು ಸಮರ್ಥಿಸುವುದಿಲ್ಲ ಎಂದಿದ್ದಾರೆ.

ಮುಖ್ಯಮಂತ್ರಿಯಾಗಿ ಚರಣ್​​ಜಿತ್ ಸಿಂಗ್ ಛನ್ನಿ ಪ್ರಮಾಣವಚನ ಸ್ವೀಕರಿಸುವ ದಿನದಂದು, ರಾವತ್ ಅವರು “ಸಿಧು ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ” ಎಂಬ ಹೇಳಿಕೆ ಗೊಂದಲಕ್ಕೀಡುಮಾಡಿದೆ. ಇದು ಸಿಎಂ ಅಧಿಕಾರವನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ. ಅದೇ ವೇಳೆ ಈ ಸ್ಥಾನಕ್ಕೆ ಅವರ ಆಯ್ಕೆಯ ಕಾರಣವನ್ನು ನಿರಾಕರಿಸುವ ಸಾಧ್ಯತೆಯಿದೆ “ಎಂದು ಜಾಖಡ್ ಟ್ವೀಟ್ ಮಾಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ.


ಭಾನುವಾರ ಕಾಂಗ್ರೆಸ್ ಚರಣ್ ಜಿತ್ ಸಿಂಗ್ ಛನ್ನಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತ್ತು. ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಒಂದು ದಿನದ ನಂತರ ರಾಜ್ಯದಲ್ಲಿ ಮೊದಲ ಬಾರಿ ದಲಿತ ರಾಜಕಾರಣಿಯೊಬ್ಬರನ್ನು ಕಾಂಗ್ರೆಸ್ ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ಸಿಎಂ ಹುದ್ದೆಗೆ ಮುಂಚೂಣಿಯಲ್ಲಿದ್ದವರಲ್ಲಿ ಒಬ್ಬರಾಗಿರುವ ಜಾಖಡ್, ಅಮರಿಂದರ್ ಸಿಂಗ್ ರಾಜೀನಾಮೆ ನೀಡುವ ಕೆಲವು ಗಂಟೆಗಳ ಮೊದಲು ನಾಯಕತ್ವ ಬದಲಾವಣೆ ಸುಳಿವು ನೀಡುವ  ಟ್ವೀಟ್ ಮಾಡಿದ್ದರು. ಪಕ್ಷದ ರಾಜ್ಯ ಘಟಕದೊಳಗಿನ ನಾಯಕತ್ವ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಅವರ “ದಿಟ್ಟ ನಾಯಕತ್ವದ ನಿರ್ಧಾರ” ಗಾಗಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಅವರು ಈ ಟ್ವೀಟ್ ನಲ್ಲಿ ಶ್ಲಾಘಿಸಿದ್ದರು.

ರಾಹುಲ್ ಗಾಂಧಿ ಅವರಿಗೆ ಅಭಿನಂದನೆಗಳು. ಪಂಜಾಬಿ ಆವೃತ್ತಿಯ ಕಗ್ಗಂಟನ್ನು ಬಿಡಿಸಲು ಅಲೆಕ್ಸಾಂಡ್ರಿಯನ್ ಪರಿಹಾರವನ್ನು ಅಳವಡಿಸಿಕೊಂಡಿದ್ದಕ್ಕೆ. ಪಂಜಾಬ್ ಕಾಂಗ್ರೆಸ್ ಅಸ್ತವ್ಯಸ್ತವಾಗಿರುವ ಪರಿಸ್ಥಿತಿಯನ್ನು ಪರಿಹರಿಸುವ ಈ ದಿಟ್ಟ ನಾಯಕತ್ವದ ನಿರ್ಧಾರವು ಕಾಂಗ್ರೆಸ್ ಕಾರ್ಯಕರ್ತರನ್ನು ರೋಮಾಂಚನಗೊಳಿಸುವುದಲ್ಲದೆ, ಅಕಾಲಿಗಳ ಬೆನ್ನು ತಟ್ಟುವಂತೆ ಮಾಡಿದೆ ಎಂದು ಜಾಖಡ್ ಟ್ವೀಟ್ ಮಾಡಿದ್ದರು.


ವರದಿಗಳ ಪ್ರಕಾರ, ಹಿರಿಯ ರಾಜಕಾರಣಿ ಜಾಖಡ್, ಛನ್ನಿಯ ಉಪನಾಯಕನಾಗುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಪಂಜಾಬ್ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಲಿದೆ. ಭಾನುವಾರ ಛನ್ನಿಯ ಹೆಸರನ್ನು ಘೋಷಿಸುವ ಮುನ್ನವೇ, ಹೊಸ ಕ್ಯಾಬಿನೆಟ್ ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿರುತ್ತದೆ ಎಂದು ನಿರ್ಧರಿಸಲಾಯಿತು. ಎಎನ್‌ಐ ವರದಿಯ ಪ್ರಕಾರ ಒಬ್ಬರು ಹಿಂದು ಮತ್ತು ಇನ್ನೊಬ್ಬರು ಸಿಖ್ ಆಗಿರುತ್ತಾರೆ.

ಪಂಜಾಬ್‌ನಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾವತ್ ಹೇಳಿದ್ದರು. “ಇಬ್ಬರು ಉಪಮುಖ್ಯಮಂತ್ರಿಗಳು ಇರಬೇಕೆಂಬುದು ನಮ್ಮ ಪರಸ್ಪರ ಭಾವನೆ. ಶೀಘ್ರದಲ್ಲೇ ನಾವು ಮಂತ್ರಿಗಳ ಮಂಡಳಿಗೆ ಹೆಸರುಗಳೊಂದಿಗೆ ಕರೆ ಮಾಡುತ್ತೇವೆ ಕೆಲವು ಹೆಸರುಗಳನ್ನು ಚರ್ಚಿಸಲಾಗಿದೆ ಆದರೆ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿದ ಸಿಎಂ ನಿರ್ಧಾರ ಕೈಗೊಳ್ಳುತ್ತಾರೆ “ಎಂದು ರಾವತ್ ಹೇಳಿದ್ದಾರೆ.

ಇದನ್ನೂ ಓದಿ: Punjab CM: ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಛನ್ನಿ ಯಾರು? ರಾಜಕೀಯ ಹಿನ್ನೆಲೆ ಏನು?

(Senior Congress leader Sunil Jakhar claims he was baffled Harish Rawat statement Sidhu to lead Punjab polls)