Coronavirus cases in India: ದೇಶದಲ್ಲಿ 30,256 ಹೊಸ ಕೊವಿಡ್ ಪ್ರಕರಣ ಪತ್ತೆ, ಪ್ರಕರಣಗಳ ಸಂಖ್ಯೆಯಲ್ಲಿ ಶೇ 15 ಇಳಿಕೆ
Covid-19: ದೇಶದಲ್ಲಿ ಸಕ್ರಿಯ ಸೋಂಕುಗಳು ಆರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ್ದು, ಪ್ರಸ್ತುತ 3.18 ಲಕ್ಷವಾಗಿದೆ. ಕೇರಳದಲ್ಲಿ 19,653 ಸೋಂಕು ಪ್ರಕರಣ ವರದಿ ಆಗಿದೆ
ದೆಹಲಿ: ಕೊವಿಡ್ -19 (Covid-19) ಪ್ರಕರಣಗಳಲ್ಲಿ ಭಾರತವು ಶೇ 15 ಕುಸಿತವನ್ನು ದಾಖಲಿಸಿದ್ದು ಇದು ಕಳೆದ ಆರು ತಿಂಗಳಲ್ಲಿ ಅತ್ಯಂತ ಕಡಿಮೆ ಪ್ರಕರಣ ವರದಿ ಆಗಿದೆ. ಭಾನುವಾರ ದೇಶದಲ್ಲಿ 30,256 ಕೊರೊನಾವೈರಸ್ (coronavirus) ಪ್ರಕರಣಗಳು ಮತ್ತು 295 ಸಾವುಗಳು ವರದಿ ಆಗಿದೆ. ದೇಶದಲ್ಲಿ ಸಕ್ರಿಯ ಸೋಂಕುಗಳು ಆರು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದ್ದು, ಪ್ರಸ್ತುತ 3.18 ಲಕ್ಷವಾಗಿದೆ. ಕೇರಳದಲ್ಲಿ 19,653 ಸೋಂಕು ಪ್ರಕರಣ ವರದಿ ಆಗಿದೆ. ಏತನ್ಮಧ್ಯೆ, ಗಣೇಶ ಹಬ್ಬದ ವಾರಾಂತ್ಯದ ನಂತರ ಭಾನುವಾರ ದೆಹಲಿಯಲ್ಲಿ ಕೊವಿಡ್‌ನಿಂದ ಯಾವುದೇ ಸಾವು ದಾಖಲಾಗಿಲ್ಲ. ಶನಿವಾರ ಮತ್ತು ಶುಕ್ರವಾರ ತಲಾ ಒಂದು ಸಾವು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 28 ಹೊಸ ಕೊವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 2020 ರ ಆರಂಭದಿಂದ ಇಲ್ಲಿಯವರೆಗೆ ಒಟ್ಟು ಸೋಂಕಿನ ಸಂಖ್ಯೆ 14,38,497 ಕ್ಕೆ ತಲುಪಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ 267 ಹೊಸ ಕೊವಿಡ್ -19 ಪ್ರಕರಣಗಳು, 1 ಸಾವು ಥಾಣೆಯಲ್ಲಿ 267 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,56,368 ಕ್ಕೆ ತಲುಪಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ. ಪುಣೆ ಮುನ್ಸಿಪಲ್ ಕಾರ್ಪೊರೇಶನ್ ಭಾನುವಾರ 145 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 1,725 ಕ್ಕೆ ತಲುಪಿದೆ. 197 ರೋಗಿಗಳು ಚೇತರಿಸಿಕೊಂಡರು ಮತ್ತು ನಾಲ್ವರು ಕೊವಿಡ್ ರೋಗಕ್ಕೆ ಬಲಿಯಾದರು. ಇದುವರೆಗೆ ಒಟ್ಟು ಸಾವಿನ ಸಂಖ್ಯೆ 9,001 ಆಗಿದೆ.
COVID19 | More than 79.58 crore vaccine doses have been provided to States/UTs till now, and more than 15 lakh doses are in the pipeline. Over 5.43 crore vaccine doses are still available with States/UTs: Government of India pic.twitter.com/ZYqL2qwYME
— ANI (@ANI) September 20, 2021
ಪಶ್ಚಿಮ ಬಂಗಾಳದಲ್ಲಿ ಕೊವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಭಾನುವಾರ ಇಲ್ಲಿ 635 ಹೊಸ ಪ್ರಕರಣಗಳು ಮತ್ತು 11 ಸಾವುಗಳನ್ನು ವರದಿ ಮಾಡಿದೆ. ಮೂಲಗಳ ಪ್ರಕಾರ ಹೂಗ್ಲಿ ಮತ್ತು ಡಾರ್ಜಿಲಿಂಗ್ ತಲಾ ಮೂರು ಹೊಸ ಸಾವುಗಳನ್ನು ದಾಖಲಿಸಿವೆ. ದಕ್ಷಿಣ 24 ಪರಗಣಗಳು, ಉತ್ತರ 24 ಪರಗಣಗಳು, ಹೌರಾ, ಪುರ್ಬಾ ಮೇದಿನಿಪುರ ಮತ್ತು ಜಲ್ಪೈಗುರಿ ತಲಾ ಒಂದು ಸಾವನ್ನು ದಾಖಲಿಸಿವೆ.
ಹೆಚ್ಚಿನ ದೈನಂದಿನ ಪ್ರಕರಣಗಳಲ್ಲಿ ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ಕೇರಳದಲ್ಲಿ 19,653 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 152 ಸಾವುಗಳನ್ನು ವರದಿ ಮಾಡಿದೆ. ಇಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 45,08,493 ಆಗಿದ್ದು 23,591 ಸಾವು ವರದಿ ಆಗಿದೆ. ಕೇರಳದ 14 ಜಿಲ್ಲೆಗಳಲ್ಲಿ, ಎರ್ನಾಕುಲಂನಲ್ಲಿ 2,810 ಪ್ರಕರಣಗಳು ದಾಖಲಾಗಿವೆ, ನಂತರ ತ್ರಿಶೂರ್ (2,620), ತಿರುವನಂತಪುರಂ (2,105), ಕೋಯಿಕ್ಕೋಡ್ (1,957), ಪಾಲಕ್ಕಾಡ್ (1,593), ಕೊಲ್ಲಂ (1,392), ಮಲಪ್ಪುರಂ (1,387), ಕೋಟ್ಟಯಂ (1,288) ಮತ್ತು ಆಲಪ್ಪುಳದಲ್ಲಿ 1,270 ಪ್ರಕರಣ ದಾಖಲಾಗಿದೆ.
India reports 30,256 fresh cases of #COVID19, 43,938 recoveries, and 295 deaths in the last 24 hours
Total cases: 33,478,419 Total Active cases: 3,18,181 Total Recoveries: 3,27,15,105 Total Death toll: 4,45,133
Total vaccination : 80,85,68,144 (37,78,296 in last 24 hours) pic.twitter.com/MTf1Qrrxwh
— ANI (@ANI) September 20, 2021
1,697 ಕೊವಿಡ್ ಪ್ರಕರಣಗಳನ್ನು ಹೊಂದಿರುವ ತಮಿಳುನಾಡು, ಆಂಧ್ರ ಪ್ರದೇಶ (1,337) ಮತ್ತು ಕರ್ನಾಟಕ (783) ಇತರ ದಕ್ಷಿಣ ರಾಜ್ಯಗಳಲ್ಲಿ ಒಂದು ದಿನದಲ್ಲಿ ಹೆಚ್ಚಿನ ಪ್ರಕರಣಗಳನ್ನು ಹೊಂದಿದೆ. ತೆಲಂಗಾಣ ಒಂದು ದಿನದಲ್ಲಿ ಕೇವಲ 173 ಪ್ರಕರಣಗಳೊಂದಿಗೆ ಭಾರಿ ಕುಸಿತ ಕಂಡಿದೆ. ಒಟ್ಟಾರೆ ಕೊವಿಡ್ ಪ್ರಕರಣಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿದ್ದು, ಒಂದು ದಿನದಲ್ಲಿ 3,413 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಇದು 49 ಸಾವುಗಳನ್ನು ಸಹ ವರದಿ ಮಾಡಿದೆ.
ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ – ನಾಲ್ಕು ದೊಡ್ಡ ರಾಜ್ಯಗಳಲ್ಲಿ ಕೊವಿಡ್ ಸಾವುಗಳನ್ನು ವರದಿ ಮಾಡಿಲ್ಲ. ಉತ್ತರಾಖಂಡ್ ಮತ್ತು ಜಾರ್ಖಂಡ್ ನಲ್ಲಿ ಕೂಡಾ ಯಾವುದೇ ಸಾವು ಸಂಭವಿಸಿಲ್ಲ.
ಇದನ್ನೂ ಓದಿ: ಕಾರ್ಯಕ್ರಮ ಮುಗಿಯಿತು: ಕೊವಿಡ್ ಲಸಿಕೆ ವಿತರಣೆ ದಾಖಲೆ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ
ಇದನ್ನೂ ಓದಿ: Airlines: ದೇಶೀಯ ವಿಮಾನ ಯಾನ ಕೊವಿಡ್ ಪೂರ್ವದ ಶೇ 85ರ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲು ಅನುಮತಿ
(India logged 30,256 new coronavirus cases and 295 deaths in the last 24 hours)