ಮನುಷ್ಯರನ್ನು ಕೊಂದು, ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ನರಭಕ್ಷಕ ರಾಜನಿಗೆ ಜೀವಾವಧಿ ಶಿಕ್ಷೆ

ಮನುಷ್ಯರನ್ನು ಪ್ರಾಣಿಯಂತೆ ಕೊಂದು ಮೆದುಳಿನ ಸೂಪ್ ಮಾಡಿ ಕುಡಿಯುತ್ತಿದ್ದ ಹಂತಕನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2000 ರಲ್ಲಿ ನಡೆದ ಪತ್ರಕರ್ತ ಮನೋಜ್ ಸಿಂಗ್ ಮತ್ತು ಅವರ ಚಾಲಕ ರವಿ ಶ್ರೀವಾಸ್ತವ್ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದಾರೆ, ಆದರೆ ಆರೋಪಿ ಮುಖದಲ್ಲಿ ಯಾವುದೇ ಪಶ್ಚಾತಾಪ ಕಾಣಿಸಲಿಲ್ಲ ಬದಲಾಗಿ, ಕುಹಕ ನಗು ಇತ್ತು.

ಮನುಷ್ಯರನ್ನು ಕೊಂದು, ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ನರಭಕ್ಷಕ ರಾಜನಿಗೆ ಜೀವಾವಧಿ ಶಿಕ್ಷೆ
ರಾಜಾ

Updated on: May 25, 2025 | 8:48 AM

ಲಕ್ನೋ, ಮೇ 25: ಮನುಷ್ಯರನ್ನು ಕೊಂದು ರಕ್ತ ಕುಡಿದು, ಮೆದುಳು ತಿನ್ನುತ್ತಿದ್ದ ಹಂತಕ ರಾಮ್ ನಿರಂಜನ್ ಕೋಲ್ ಅಲಿಯಾಸ್ ರಾಜಾ ಕೋಲಂದರ್​ಗೆ ಲಕ್ನೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. 2000ರಲ್ಲಿ ನಡೆದ ಜೋಡಿ ಕೊಲೆ(Murder)  ಪ್ರಕರಣದಲ್ಲಿ ಲಕ್ನೋ ನ್ಯಾಯಾಲಯವ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡವನ್ನು ವಿಧಿಸಿದೆ.

2000 ರಲ್ಲಿ ನಡೆದ ಪತ್ರಕರ್ತ ಮನೋಜ್ ಸಿಂಗ್ ಮತ್ತು ಅವರ ಚಾಲಕ ರವಿ ಶ್ರೀವಾಸ್ತವ್ ಅವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಯನ್ನು ದೋಷಿ ಎಂದು ಘೋಷಿಸಿದ್ದಾರೆ, ಆದರೆ ಆರೋಪಿ ಮುಖದಲ್ಲಿ ಯಾವುದೇ ಪಶ್ಚಾತಾಪ ಕಾಣಿಸಲಿಲ್ಲ ಬದಲಾಗಿ, ಕುಹಕ ನಗು ಇತ್ತು. ರಾಜ ಕೊಲಂದರ್ 14 ಜನರನ್ನು ಕೊಂದ ಆರೋಪ ಹೊತ್ತಿದ್ದಾನೆ. ಲಕ್ನೋದ ಸಿಜೆಎಂ ನ್ಯಾಯಾಲಯ ಶುಕ್ರವಾರ ರಾಜಾ ಕೊಲಂದರ್ ಮತ್ತು ಅವರ ಸೋದರ ಮಾವ ವಕ್ಷರಾಜ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಬ್ಬರನ್ನೂ ಲಕ್ನೋದಿಂದ ಟ್ಯಾಕ್ಸಿಯಲ್ಲಿ ರಾಯ್ ಬರೇಲಿಗೆ ಕರೆದೊಯ್ದು ಕಾಡಿನಲ್ಲಿ ಕೊಲೆ ಮಾಡಲಾಗಿತ್ತು. ಕೆಲವು ದಿನಗಳ ನಂತರ ಬರ್ಗಢ ಕಾಡಿನಲ್ಲಿ ಅವರ ಬೆತ್ತಲೆ ಶವಗಳು ಪತ್ತೆಯಾಗಿದ್ದವು.
ರಾಜಾ ಕುಲಂದರ್ ಪ್ರಯಾಗರಾಜ್‌ನ ನೈನಿ ಪ್ರದೇಶದ ನಿವಾಸಿ. 2000 ಇಸವಿಯಲ್ಲಿ ಪತ್ರಕರ್ತ ಧೀರೇಂದ್ರ ಸಿಂಗ್ ಅವರ ಹತ್ಯೆಯ ತನಿಖೆ ನಡೆಸಿದಾಗ, ಅವರ ಮನೆಯಿಂದ ಹಲವಾರು ಅಸ್ಥಿಪಂಜರಗಳು ಮತ್ತು ಮಾನವ ತಲೆಬುರುಡೆಗಳು ಪತ್ತೆಯಾಗಿದ್ದವು.

ಇದನ್ನೂ ಓದಿ
ಕೊಲೆ ಮಾಡಿ, ಶವಗಳನ್ನು ಮೊಸಳೆಗೆ ಹಾಕುತ್ತಿದ್ದ ಸೀರಿಯಲ್ ಕಿಲ್ಲರ್ ಬಂಧನ
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ
ಪತಿಯನ್ನೇ ಕೊಂದು ಪಕ್ಕದ ಮನೆಯವನ ಮೇಲೆ ಆರೋಪ ಹಾಕಿದ್ದ ಮಹಿಳೆ ಅರೆಸ್ಟ್
ಮಹಿಳೆಯ ಪ್ರೇಮಿಯಿಂದಲೇ ಆಕೆಯ 2 ವರ್ಷದ ಮಗು ಮೇಲೆ ಅತ್ಯಾಚಾರ, ಕೊಲೆ

ಮತ್ತಷ್ಟು ಓದಿ: ಸೊಸೆಯ ಕುತ್ತಿಗೆಯನ್ನು ಕತ್ತಿಯಿಂದ ಸೀಳಿ ಕೊಂದ ಮಾವ!

ತನಿಖೆಯಲ್ಲಿ ಅವನು ತನ್ನ ಮಾನಸಿಕ ಶಕ್ತಿಯನ್ನು ಹೆಚ್ಚಿಸಲು ತಲೆಬುರುಡೆಗಳನ್ನು ಕುದಿಸಿ ಅದರ ಸೂಪ್ ಕುಡಿಯುತ್ತಿದ್ದನು ಎಂದು ತಿಳಿದುಬಂದಿದೆ. ಕೊಲೆಯ ನಂತರ ಲೂಟಿ ಮಾಡಲಾದ ಟಾಟಾ ಸುಮೋವನ್ನು ಅವರು ತಮ್ಮ ಪತ್ನಿ ಫೂಲನ್ ದೇವಿಯವರ ಜಿಲ್ಲಾ ಪಂಚಾಯತ್ ಚುನಾವಣಾ ಪ್ರಚಾರದ ಸಮಯದಲ್ಲಿಯೂ ಬಳಸಿದ್ದ, ರಾಜಾಗೆ ಅದಾಲತ್ ಮತ್ತು ಜಮಾನತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

ಕುಟುಂಬವು ಅವನನ್ನು ನಿರಪರಾಧಿ ಎಂದು ಪರಿಗಣಿಸುತ್ತದೆ ಆದರೆ ಆತ ವಾಸವಿರುವ ಪ್ರದೇಶದ ಜನರು ಆತನ ಹೆಸರನ್ನು ಕೇಳಿದರೆ ಇನ್ನೂ ನಡುಗುತ್ತಾರೆ. ಪತ್ರಕರ್ತ ಧೀರೇಂದ್ರ ಸಿಂಗ್ ಅವರ ಕುಟುಂಬವು ನ್ಯಾಯಾಲಯದ ತೀರ್ಪಿನಿಂದ ತೃಪ್ತರಾಗಿದ್ದರೂ, ಸಂಪೂರ್ಣ ನ್ಯಾಯ ಇನ್ನೂ ಸಿಕ್ಕಿಲ್ಲ ಎಂದು ಅವರು ಹೇಳುತ್ತಾರೆ.

ಕೊಲಂದರ್ ಧೀರೇಂದ್ರ ಸಿಂಗ್ ಅವರನ್ನು ಗುಂಡಿಕ್ಕಿ ಕೊಂದು, ಅವರ ದೇಹವನ್ನು ಹೂಳುವ ಮೊದಲು ವಿರೂಪಗೊಳಿಸಿದ್ದ ಎಂದು ವರದಿಯಾಗಿದೆ. ಇಬ್ಬರೂ ಆರೋಪಿಗಳು ತಮ್ಮ ಇಡೀ ಜೀವನಪರ್ಯಂತ ಜೈಲಿನಲ್ಲಿಯೇ ಇರುತ್ತಾರೆ.

ಕೊಲಂದರ್ ಸಾಮಾನ್ಯ ಅಪರಾಧಿಯಲ್ಲ, ಆತನಿಂದ ನಡೆದ ಕೊಲೆಗಳ ತನಿಖೆಯ ಸಮಯದಲ್ಲಿ ಪೊಲೀಸರು ಆತನ ತೋಟದ ಮನೆ ಹಾಗೂ ಮನೆಯನ್ನು ಪರಿಶೀಲಿಸಿದಾಗ ಒಂದು ಡೈರಿ ಸಿಕ್ಕಿತ್ತು. ಅದರಲ್ಲಿ ಆತ ಮಾಡಿದ್ದ ಎಲ್ಲಾ ಅಪರಾಧಗಳ ಕುರಿತು ಬರೆದದ್ದ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:47 am, Sun, 25 May 25