Kannada News National ORR ರಿಂಗ್ ರಸ್ತೆಯಲ್ಲಿ ಅಪಘಾತ: ಕಾರಿಗೆ ಅಪರಿಚಿತ ವಾಹನ ಡಿಕ್ಕಿ, 7 ಜನ ದುರ್ಮರಣ
ORR ರಿಂಗ್ ರಸ್ತೆಯಲ್ಲಿ ಅಪಘಾತ: ಕಾರಿಗೆ ಅಪರಿಚಿತ ವಾಹನ ಡಿಕ್ಕಿ, 7 ಜನ ದುರ್ಮರಣ
ಹೈದರಾಬಾದ್: ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ 7 ಜನ ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಬಳಿಯ ORR ರಿಂಗ್ ರಸ್ತೆಯಲ್ಲಿ ಸಂಭವಿಸಿದೆ. ಪಾಟಿ ಗ್ರಾಮ ಸಮೀಪದಲ್ಲಿ Xylo ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಿಂದಾಗಿ ವಾಹನದಲ್ಲಿದ್ದ 7ಜನ ಪ್ರಾಣ ಬಿಟ್ಟಿದ್ದಾರೆ. ಒಟ್ಟು 10ಜನ ವಾಹನದಲ್ಲಿದ್ದರು ಎನ್ನಲಾಗಿದೆ. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರೆಲ್ಲ ಜಾರ್ಖಂಡ(ಘೋರಖಪುರ, ರಾಂಘಡ)ಗೆ ಸೇರಿದವರೆಂದು ಗುರುತಿಸಲಾಗಿದೆ. ಮೃತರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಹೈದರಾಬಾದ್ನ […]
Follow us on
ಹೈದರಾಬಾದ್: ಕಾರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ 7 ಜನ ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಬಳಿಯ ORR ರಿಂಗ್ ರಸ್ತೆಯಲ್ಲಿ ಸಂಭವಿಸಿದೆ.
ಪಾಟಿ ಗ್ರಾಮ ಸಮೀಪದಲ್ಲಿ Xylo ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಿಂದಾಗಿ ವಾಹನದಲ್ಲಿದ್ದ 7ಜನ ಪ್ರಾಣ ಬಿಟ್ಟಿದ್ದಾರೆ. ಒಟ್ಟು 10ಜನ ವಾಹನದಲ್ಲಿದ್ದರು ಎನ್ನಲಾಗಿದೆ. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರೆಲ್ಲ ಜಾರ್ಖಂಡ(ಘೋರಖಪುರ, ರಾಂಘಡ)ಗೆ ಸೇರಿದವರೆಂದು ಗುರುತಿಸಲಾಗಿದೆ. ಮೃತರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಹೈದರಾಬಾದ್ನ ಗಚ್ಚಿಬೌಲಿಯಿಂದ ಜಾರ್ಖಂಡಗೆ ಹೊರಟಿದ್ದಾಗ ಹೊರ ವಲಯದ ರಿಂಗ್ ರೋಡ ಬಳಿ ಅಪಘಾತ ಸಂಭವಿಸಿದೆ.