ನಕ್ಸಲರ ಬೆದರಿಕೆ ಇದ್ದರೂ ಏಕನಾಥ್ ಶಿಂದೆಗೆ ಝಡ್ ಪ್ಲಸ್ ಭದ್ರತೆ ನೀಡಲಿಲ್ಲ: ಬಂಡಾಯ ಶಾಸಕರ ಆರೋಪ ಮಹಾರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ಗೊಂದಲದ ನಡುವೆ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆಯ ಮೂವರು ಬಂಡಾಯ ಶಾಸಕರು ಆರೋಪ ಮಾಡಿದ್ದಾರೆ.
ಮಾವೋವಾದಿಗಳ ಬೆದರಿಕೆಯ ಇದ್ದರೂ ಏಕನಾಥ್ ಶಿಂದೆ ಅವರಿಗೆ Z+ ಭದ್ರತೆ ನೀಡಲು ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿರಾಕರಿಸಿದ್ದರು ಎಂದು ಬಂಡಾಯ ಶಾಸಕರು ಶುಕ್ರವಾರ ಆರೋಪಿಸಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ್ ಶಿಂದೆ ಉದ್ಧವ್ ಠಾಕ್ರೆ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.
ಪೊಲೀಸರ ಪ್ರಕಾರ, ಫೆಬ್ರವರಿ 2022 ರಲ್ಲಿ ಗಡ್ಚಿರೋಲಿಯಲ್ಲಿ ಪೊಲೀಸ್ ಕಾರ್ಯಾಚರಣೆಯಲ್ಲಿ 26 ನಕ್ಸಲರು ಕೊಲ್ಲಲ್ಪಟ್ಟ ಎರಡು ತಿಂಗಳ ನಂತರ, ಅವರಿಗೆ ಬೆದರಿಕೆ ಪತ್ರ ಬಂದಿತ್ತು.
ಮಾವೋವಾದಿಗಳ ಬೆದರಿಕೆಗಳ ಹೊರತಾಗಿಯೂ, ಶಿಂದೆ ಅವರ ಭದ್ರತೆಯನ್ನು ಮೇಲ್ದರ್ಜೆಗೇರಿಸದಂತೆ ಠಾಕ್ರೆ ನಿರ್ದೇಶಿಸಿದ್ದಾರೆ ಎಂದು ಶಿವಸೇನೆಯ ಇಬ್ಬರು ಶಾಸಕರು ಮತ್ತು ಶಿಂಧೆ ಬಣದ ನಾಯಕ ಸುಸಾ ಕಾಂಡೆ ಮತ್ತು ಮಾಜಿ ಗೃಹ (ಗ್ರಾಮೀಣ) ಸಚಿವ ಶಂಭುರಾಜ್ ದೇಸಾಯಿ ತಿಳಿಸಿದ್ದಾರೆ.
ಶಿಂದೆಯನ್ನು ಕೊಲ್ಲಲು ನಕ್ಸಲರು ಮುಂಬೈಗೆ ಬಂದಿದ್ದಾರೆ ಎಂದು ಪೊಲೀಸರು ಠಾಕ್ರೆ ಮತ್ತು ಅಂದಿನ ಗೃಹ ಸಚಿವರಿಗೆ (ಎನ್‌ಸಿಪಿಯ ದಿಲೀಪ್ ವಾಲ್ಸೆ-ಪಾಟೀಲ್) ಮಾಹಿತಿ ನೀಡಿದ್ದರು. ಆದರೂ ಅವರಿಗೆ ಭದ್ರತೆ ಒದಗಿಸಿಲ್ಲ ಎಂದು ಪ್ರಶ್ನಿಸಿದರು. ಹಿಂದುತ್ವ ವಿರೋಧಿಗಳಿಗೆ ರಕ್ಷಣೆ ಕೊಟ್ಟರು, ಹಾಗಾದರೆ ಹಿಂದುತ್ವವಾದಿ ನಾಯಕನಿಗೆ ಏಕೆ ಕೊಡಲಿಲ್ಲ?
ಶಿಂದೆ ಅವರ ಭದ್ರತೆಯನ್ನು ಹೆಚ್ಚಿಸಲು ಗೃಹ ಇಲಾಖೆ ಯಾವುದೇ ಸಭೆ ನಡೆಸಿದೆಯೇ ಎಂದು ಕೇಳಲು ಠಾಕ್ರೆ ಅವರಿಂದ ನನಗೆ ಕರೆ ಬಂದಿದೆ ಎಂದು ದೇಸಾಯಿ ತಿಳಿಸಿದರು.
Published On - 10:09 am, Sat, 23 July 22