ಪುಣೆಯ ಕತ್ರಾಜ್‌ನ ಬಾಲಾಜಿ ಪ್ರದೇಶದಲ್ಲಿ ಶಿವಸೇನಾ ಕಾರ್ಯಕರ್ತರು ಪಕ್ಷದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ತಾನಾಜಿ ಸಾವಂತ್ (Tanaji Sawant) ರಾಜ್ಯದ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದು, ಪ್ರಸ್ತುತ ಅಸ್ಸಾಂನ (Assam) ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.
ಮಹಾರಾಷ್ಟ್ರದ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಸಿಎಂ ಉದ್ಧವ್ ಠಾಕ್ರೆ, ಶಿವಸೇನೆಯ ಬಂಡಾಯದ ಹಿಂದೆ ಬಿಜೆಪಿ ಇದೆ ಎಂದು ಹೇಳಿದ್ದಾರೆ. ‘ಶಿವಸೇನೆಯನ್ನು ಮುಗಿಸುವುದು’ ಬಿಜೆಪಿಯ ಏಕೈಕ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಇಂದು ಉದ್ಧವ್ ಠಾಕ್ರೆ ಈ ವಿಷಯದ ಕುರಿತು ಜಿಲ್ಲಾ ಮುಖ್ಯಸ್ಥರೊಂದಿಗೆ ವರ್ಚುವಲ್ ಸಭೆ ನಡೆಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಕರೆಯಲಾಗಿದೆ.
Rebel Shiv Sena MLA Eknath Shinde writes to CM Uddhav Thackeray, Maharashtra Home Minister, DGP Maharashtra regarding “Malicious withdrawal of security of family members of the 38 MLAs”
“The government is responsible for protecting them and their families,” he tweets pic.twitter.com/f4riPwx4xM
— ANI (@ANI) June 25, 2022
38 ಶಾಸಕರ ಕುಟುಂಬ ಸದಸ್ಯರ ಭದ್ರತೆಯನ್ನು ದುರುದ್ದೇಶಪೂರ್ವಕವಾಗಿ ಹಿಂತೆಗೆದುಕೊಳ್ಳುವ ಕುರಿತು ಸಿಎಂ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಗೃಹ ಸಚಿವ, ಡಿಜಿಪಿ ಮಹಾರಾಷ್ಟ್ರಕ್ಕೆ ಬಂಡಾಯ ಶಿವಸೇನೆ ಶಾಸಕ ಏಕನಾಥ್ ಶಿಂಧೆ ಪತ್ರ ಬರೆದಿದ್ದಾರೆ. ಅವರನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
#WATCH | Shiv Sena workers vandalise office of the party’s MLA Tanaji Sawant in Balaji area of Katraj, Pune. Sawant is one of the rebel MLAs from the state and is currently camping in Guwahati, Assam. #MaharashtraPoliticalCrisis pic.twitter.com/LXRSLPxYJC
— ANI (@ANI) June 25, 2022
ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗದ ಕಾರಣ ಶಿಂಧೆ ಸೇರಿದಂತೆ 12 ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆ ಕೋರಿದೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಶಿಂಧೆ, ನಾವು ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಅವರ ಅನುಯಾಯಿಗಳಾಗಿರುವುದರಿಂದ ಅನರ್ಹತೆಗೆ 12 ಶಾಸಕರ ಹೆಸರನ್ನು ನೀಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ನಮಗೆ ಕಾನೂನು ತಿಳಿದಿದೆ, ಆದ್ದರಿಂದ ನಾವು ಬೆದರಿಕೆಗಳಿಗೆ ಕಿವಿಗೊಡುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
Shiv Sena workers protest at rebel Shiv Sena MLA Tanaji Sawant office. Mr Sawant is with Eknath Shinde at hotel Blue Radisson in Guwahati. @NewIndianXpress @TheMornStandard pic.twitter.com/WWKt9SAgRb
— Sudhir Suryawanshi (@ss_suryawanshi) June 25, 2022
ಮತ್ತೊಂದೆಡೆ, ಬಂಡಾಯ ಶಾಸಕರು ಮುಂಬೈಗೆ ಹಿಂತಿರುಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಚರ್ಚಿಸಿದರೆ ಆಡಳಿತಾರೂಢ ಮೈತ್ರಿಕೂಟದ ಎಂವಿಎ ಮೈತ್ರಿಯನ್ನು ತೊರೆಯಲು ತಮ್ಮ ಪಕ್ಷವು ಮುಕ್ತವಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.
Published On - 12:01 pm, Sat, 25 June 22