Sudhir Suri ಪಂಜಾಬ್‌ನಲ್ಲಿ ಶಿವಸೇನಾ ನಾಯಕ ಸುಧೀರ್ ಸೂರಿ ಹತ್ಯೆ
ಶಿವಸೇನಾ ಮುಖಂಡ ಸೂರಿ ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಗುಂಪಿನಿಂದ ಯಾರೋ ಬಂದು ಗುಂಡು ಹಾರಿಸಿದ್ದಾರೆ.
ಅಮೃತಸರ: ಪಂಜಾಬ್‌ನ (Punjab) ಅಮೃತಸರದಲ್ಲಿಇಂದು ಶಿವಸೇನಾ ನಾಯಕ ಸುಧೀರ್ ಸೂರಿ (Sudhir Suri) ಮೇಲೆ ಗುಂಡಿನ ದಾಳಿ ನಡೆದಿದೆ. ನಗರದ ದೇವಸ್ಥಾನದ ಹೊರಭಾಗದಲ್ಲಿ ಈ ಘಟನೆ ನಡೆದಿದೆ. ಶಿವಸೇನಾ ಮುಖಂಡ ಸೂರಿ ದೇವಸ್ಥಾನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಗುಂಪಿನಿಂದ ಯಾರೋ ಬಂದು ಗುಂಡು ಹಾರಿಸಿದ್ದಾರೆ. ಈಹೊತ್ತಲ್ಲಿ ಕೆಲವು ಬೆಂಬಲಿಗರು ಸೂರಿ ಸಹಾಯಕ್ಕೆ ಧಾವಿಸಿದರೆ, ಇತರರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಕಂಡುಬಂದಿತು. ಈ ವರ್ಷದ ಜುಲೈನಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಆರೋಪದ ಮೇಲೆ ಬಂಧಿಸಲ್ಪಟ್ಟ ನಂತರ ಸೂರಿ ಸುದ್ದಿಯಲ್ಲಿದ್ದರು.
ಸೂರಿ ಮೇಲೆ ಐದು ಕ್ಕೂ ಹೆಚ್ಚು ಗುಂಡು ಹಾರಿಸಲಾಯಿತು, ನಂತರ ಅವರು ಕೆಳಗೆ ಬಿದ್ದು ಪ್ರಜ್ಞೆ ಕಳೆದುಕೊಂಡರು ಎಂದು ಅಮೃತಸರ ಪೊಲೀಸರು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ಹೇಳಿದ್ದಾರೆ
ಆರೋಪಿಯನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಸರದ ಗೋಪಾಲ್ ಮಂದಿರದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆಸುಧೀರ್ ಸೂರಿಗೆ ಗುಂಡು ಹಾರಿಸಲಾಯಿತು. ಬುಲೆಟ್ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಅವರು ಸಾವಿಗೀಡಾದರು ಆರೋಪಿಯನ್ನು ಬಂಧಿಸಲಾಗಿದೆ. ಆತನ ಬಳಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮೃತಸರದ ಪೊಲೀಸ್ ಕಮಿಷನರ್ ಅರುಣ್ ಪಾಲ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೂರಿ ದೀರ್ಘಕಾಲದವರೆಗೆ ಹಲವಾರು ದರೋಡೆಕೋರರ ಹಿಟ್ ಲಿಸ್ಟ್‌ನಲ್ಲಿದ್ದರು. ಅವರಿಗೆ ಸುಮಾರು ಎಂಟು ಪೊಲೀಸರ ಭದ್ರತೆಯನ್ನು ಸರ್ಕಾರ ಒದಗಿಸಿದೆ.
ಹಿಂದೂ ಮುಖಂಡ ಧರಣಿ ನಡೆಸುತ್ತಿದ್ದ ಗೋಪಾಲ್ ಮಂದಿರದ ಬಳಿ ಆರೋಪಿಯು ಗಾರ್ಮೆಂಟ್ಸ್ ಅಂಗಡಿಯನ್ನು ನಡೆಸುತ್ತಿದ್ದಾನೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ಹೇಳಿದ್ದಾರೆ.
Published On - 4:02 pm, Fri, 4 November 22