ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ ಶಿವಸೇನೆಯೂ ತಾಂಡವ ಮಾಡಲಿದೆ: ಖಚಿತ ಪಡಿಸಿದ ಸಂಜಯ್ ರಾವುತ್

ಕೇವಲ ಪಶ್ಚಿಮ ಬಂಗಾಳದ ಪಕ್ಷಗಳೊಂದೇ ಅಲ್ಲದೇ ದೇಶದ ಇತರ ಪಕ್ಷಗಳೂ ಪಶ್ಚಿಮ ಬಂಗಾಳದಲ್ಲಿ ಕಣಕ್ಕಿಳಿಯುತ್ತಿರುವುದು ಸಹಜವಾಗಿ ಚುನಾವಣೆಯ ಗಂಭೀರತೆಯನ್ನು ಹೆಚ್ಚಿಸಿವೆ. ಇನ್ನು, ಚುನಾವಣೆ ನಡೆಯುವವರೆಗೂ ವಾದ ವಿವಾದ, ಆರೋಪ ಪ್ರತ್ಯಾರೋಪಗಳು ಬಂಗಾಳದಿಂದ ಪುಷ್ಕಳವಾಗಿ ಕೇಳಿಬರುವುದಂತೂ ಸುಳ್ಳಲ್ಲ.

ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯಲ್ಲಿ ಶಿವಸೇನೆಯೂ ತಾಂಡವ ಮಾಡಲಿದೆ: ಖಚಿತ ಪಡಿಸಿದ ಸಂಜಯ್ ರಾವುತ್
ಸಾಂಕೇತಿಕ ಚಿತ್ರ
Updated By: ಸಾಧು ಶ್ರೀನಾಥ್​

Updated on: Jan 18, 2021 | 10:56 AM

ಮುಂಬೈ: ಈ ವರ್ಷದ ಎಪ್ರಿಲ್- ಮೇನಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ಚುಣಾವಣೆಯಲ್ಲಿ ಶಿವಸೇನಾ ಸ್ಪರ್ಧಿಸಲಿದೆ ಎಂದು ಪಕ್ಷದ ಹಿರಿಯ ನಾಯಕ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ. ಮಹಾರಾಷ್ಟ್ರ ಮೂಲದ ಪಕ್ಷವೊಂದು ಪೂರ್ವ ಭಾರತದ ರಾಜ್ಯದಲ್ಲಿ ಸ್ಪರ್ಧಿಸುವ ಮೂಲಕ ಚುನಾವಣೆಯ ಕಾವನ್ನು ಹೆಚ್ಚಿಸುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ.

ಈಗಾಗಲೇ ಹೈದರಾಬಾದ್ ಮೂಲದ ರಾಜಕೀಯ ಪಕ್ಷ ಎಐಎಂಐಎಂ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸುವುದಾಗಿ ಅಸಾದುದ್ದೀನ್ ಓವೈಸಿ ಘೋಷಿಸಿದ್ದಾರೆ. ಬಿಜೆಪಿಯೂ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆಯಲ್ಲದೇ, ಭಾರೀ ಪ್ರಚಾರ ನಡೆಸುತ್ತಿದೆ. ಮಮತಾ ಬ್ಯಾನರ್ಜಿ ಸರ್ಕಾರದ ಕೈಯಿಂದ ಅಧಿಕಾರವನ್ನು ಕಸಿಯಲೇಬೇಕೆಂಬ ಶತಪ್ರಯತ್ನದಲ್ಲಿ ಬಿಜೆಪಿಯ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಎಡ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಸಹ ತನ್ನ ಪ್ರಯತ್ನದಲ್ಲಿ ನಿರತವಾಗಿದೆ. ಹೀಗಾಗಿ, ಶಿವಸೇನೆ ಯಾವ ಸ್ಟ್ರಾಟರ್ಜಿ ಹೆಣೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಕೇವಲ ಪಶ್ಚಿಮ ಬಂಗಾಳದ ಪಕ್ಷಗಳೊಂದೇ ಅಲ್ಲದೇ ದೇಶದ ಇತರ ಪಕ್ಷಗಳೂ ಪಶ್ಚಿಮ ಬಂಗಾಳದಲ್ಲಿ ಕಣಕ್ಕಿಳಿಯುತ್ತಿರುವುದು ಸಹಜವಾಗಿ ಚುನಾವಣೆಯ ಗಂಭೀರತೆಯನ್ನು ಹೆಚ್ಚಿಸಿವೆ. ಇನ್ನು, ಚುನಾವಣೆ ನಡೆಯುವವರೆಗೂ ವಾದ-ಪ್ರತಿವಾದ, ವಿವಾದ, ಆರೋಪ ಪ್ರತ್ಯಾರೋಪಗಳು ಬಂಗಾಳದಿಂದ ಪುಷ್ಕಳವಾಗಿ ಕೇಳಿಬರುವುದಂತೂ ಖಚಿತ.

ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಜನತೆಗೆ ಕೊಡುಗೆ ಘೋಷಿಸಿದ ಮಮತಾ ಬ್ಯಾನರ್ಜಿ.. ಏನದು?