ಬಿಜೆಪಿಗೆ ಮತ ಹಾಕಿದ್ದಕ್ಕೆ ಥಳಿತಕ್ಕೊಳಗಾದ ಮಹಿಳೆಯನ್ನು ಭೇಟಿ ಮಾಡಿದ ಶಿವರಾಜ್ ಸಿಂಗ್ ಚೌಹಾಣ್
ಮುಖ್ಯಮಂತ್ರಿಯೊಂದಿಗಿನ ಸಭೆ ಉತ್ತಮವಾಗಿ ನಡೆದಿದೆ. ಭಯ್ಯಾ ( ಚೌಹಾಣ್) ಅವರು ನಾನು ಮತ್ತು ನನ್ನ ಮಕ್ಕಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ, ನಾನು ನನ್ನ ಮತದಾನದ ಹಕ್ಕನ್ನು ನಾನು ಬಯಸಿದ ರೀತಿಯಲ್ಲಿ ಚಲಾಯಿಸಿದ್ದೇನೆ ಎಂದು ಮುಸ್ಲಿಂ ಮಹಿಳೆ ಸಮೀನಾ ಬಿ ಹೇಳಿದ್ದಾರೆ.
ಭೋಪಾಲ್ ಡಿಸೆಂಬರ್ 09: ಬಿಜೆಪಿಗೆ (BJP) ಮತ ಹಾಕಿದ್ದಕ್ಕೆ ಕುಟುಂಬಸ್ಥರಿಂದ ಥಳಿಸಲ್ಪಟ್ಟ ಮುಸ್ಲಿಂ ಮಹಿಳೆಯೊಬ್ಬರು ಇಂದು (ಶನಿವಾರ) ಮಧ್ಯ ಪ್ರದೇಶದ(Madhya Pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾದರು. ಬಿಜೆಪಿಗೆ ಮತ ಹಾಕಿದ ಸಮೀನಾ ಬಿ ಅವರು ತಮ್ಮ ಇಬ್ಬರು ಮಕ್ಕಳನ್ನು ಒಬ್ಬ ಮಗ ಮತ್ತು ಮಗಳನ್ನ ಚೌಹಾಣ್ ಅವರ ಮನೆಗೆ ಕರೆದುಕೊಂಡು ಬಂದಿದ್ದು ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಕ್ಕಾಗಿ ಆಕೆಯ ಕುಟುಂಬದವರು ಥಳಿಸಿದ್ದಾರೆ ಎಂಬ ವರದಿಗಳ ಬಗ್ಗೆ ಕೇಳಿದ ಚೌಹಾಣ್ ಮಹಿಳೆಯನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳು ಅವರಿಗೆ ಸುರಕ್ಷತೆ ಮತ್ತು ಭದ್ರತೆಯ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ. ತಮ್ಮ ಮಕ್ಕಳ ಬಗ್ಗೆ ಅವರು ತೋರಿದ ಕಾಳಜಿಯಿಂದ ಮತ್ತೊಮ್ಮೆ ಬಿಜೆಪಿಗೆ ಮತ ಹಾಕುವುದಾಗಿ ಸಮೀನಾ ಬಿ ಮುಖ್ಯಮಂತ್ರಿಗೆ ತಿಳಿಸಿದರು.
मजबूत लोकतंत्र के लिए भाजपा को अपना मत देने पर मेरी एक बहन को उसके परिवार द्वारा प्रताड़ित करने का मामला मेरे संज्ञान में आया है। मैंने इस संबंध में अधिकारियों को निर्देशित कर उचित कार्रवाई करने को कहा है। इसके साथ ही पीड़ित बहन को पूरी सुरक्षा व आर्थिक मदद भी दी जाएगी।
मेरी… pic.twitter.com/O2VO7EtNry
— Shivraj Singh Chouhan (@ChouhanShivraj) December 9, 2023
ನಾನು ಬಿಜೆಪಿಗೆ ಮತ ಹಾಕಿದ್ದೇನೆ ಎಂದು ತಿಳಿದ ನನ್ನ ಸೋದರ ಮಾವ ಜಾವೇದ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಸಹೋದರ ಶಿವರಾಜ್ ಸಿಂಗ್ ಚೌಹಾಣ್ ಅವರ ಪಕ್ಷಕ್ಕೆ ನಾನು ಏಕೆ ಮತ ಹಾಕಿದ್ದೇನೆ ಎಂದು ಅವರು ಕೇಳಿದ್ದಾರೆ ಎಂದು ಸಮೀನಾ ಹೇಳಿದ್ದಾರೆ.
ಮುಖ್ಯಮಂತ್ರಿಯೊಂದಿಗಿನ ಸಭೆ ಉತ್ತಮವಾಗಿ ನಡೆದಿದೆ. ಭಯ್ಯಾ ( ಚೌಹಾಣ್) ಅವರು ನಾನು ಮತ್ತು ನನ್ನ ಮಕ್ಕಳು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುತ್ತಾರೆ, ನಾನು ನನ್ನ ಮತದಾನದ ಹಕ್ಕನ್ನು ನಾನು ಬಯಸಿದ ರೀತಿಯಲ್ಲಿ ಚಲಾಯಿಸಿದ್ದೇನೆ ಎಂದು ಹೇಳಿದರು. ಸಂವಿಧಾನವು ನಮ್ಮ ಆಯ್ಕೆಯ ಯಾರಿಗಾದರೂ ಮತ ಚಲಾಯಿಸುವ ಹಕ್ಕನ್ನು ನೀಡುತ್ತದೆ. ಚೌಹಾಣ್ ಯಾವತ್ತೂ ಯಾವುದೇ ತಪ್ಪು ಮಾಡಿಲ್ಲ, ಅದಕ್ಕಾಗಿಯೇ ನಾನು ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಅವರು ಸಮೀನಾ ಬಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ