
ನವದೆಹಲಿ, ಅಕ್ಟೋಬರ್ 11: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (Sexual Harassment) ಅಥವಾ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದರೆ ಅತ್ಯಂತ ವಿಚಿತ್ರವಾದ ಮತ್ತು ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯ ವ್ಯಕ್ತಿಯೊಬ್ಬರು ಶವಾಗಾರದಲ್ಲಿ ಮಹಿಳೆಯ ಮೃತದೇಹದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಘಟನೆ ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದಿದ್ದರೂ ಈ ಘೋರ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಇತ್ತೀಚೆಗೆ ಪತ್ತೆಯಾಗಿವೆ.
ವರದಿಗಳ ಪ್ರಕಾರ, ಮಹಿಳೆಯ ಶವವನ್ನು ಶವಾಗಾರದೊಳಗೆ ಇರಿಸಿದಾಗ ಅಪರಾಧಿ ಆವರಣಕ್ಕೆ ನುಗ್ಗಿ, ಮಹಿಳೆಯ ಶವವನ್ನು ಎಳೆದುಕೊಂಡು ಹೋಗಿ ಆ ಹೆಣದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಈ ಕೃತ್ಯವನ್ನು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಪಡಿಸಿವೆ. ನಂತರ ಆತನನ್ನು ಭೌರಘಾಟ್ ಪ್ರದೇಶದ ತಂಗಿಯಾಪತ್ ಗ್ರಾಮದ 25 ವರ್ಷದ ನೀಲೇಶ್ ಭಿಲಾಲ ಎಂದು ಗುರುತಿಸಲಾಯಿತು. ಎಕ್ಸ್ನಲ್ಲಿ ವೈರಲ್ ಆಗಿರುವ ವಿಡಿಯೋದ ಪ್ರಕಾರ, ಆರೋಪಿಯು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದ ಸ್ಟ್ರೆಚರ್‌ನಿಂದ ಎಳೆದೊಯ್ದಿದ್ದಾನೆ.
A man arrested in MP’s Burhanpur district for ‘abusing’ a woman’s body at a community health centre. The shocker became public after videos of the April 2024 incident went viral. It exposed state of security at govt health facilities. @santwana99 @jayanthjacob @NewIndianXpress pic.twitter.com/rjoPihyUqF
— Anuraag Singh (@anuraag_niebpl) October 8, 2025
ಇದನ್ನೂ ಓದಿ: ಸಾರ್ವಜನಿಕ ಶೌಚಾಲಯದೊಳಗೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
ಆ ಮಹಿಳೆಯ ಶವವನ್ನು ಪಕ್ಕಕ್ಕೆ ತೆಗೆದುಕೊಂಡು ಹೋಗಿ ಸಿಸಿಟಿವಿಯ ವ್ಯಾಪ್ತಿಯಿಂದ ದೂರಕ್ಕೆ ಎಳೆದುಕೊಂಡು ಹೋಗಿ ಅಲ್ಲಿ ಆ ವ್ಯಕ್ತಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಅವನು ಮತ್ತೆ ಶವವನ್ನು ಸ್ಟ್ರೆಚರ್ ಬಳಿ ನೆಲದ ಮೇಲೆ ಎಳೆದುಕೊಂಡು ಬಂದಿದ್ದಾನೆ. ಈ ವರ್ಷ ಅಕ್ಟೋಬರ್‌ನಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ವೈದ್ಯಕೀಯ ಅಧಿಕಾರಿಯೊಬ್ಬರು. ಡಾ. ಆದಿಯಾ ದಾವರ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದರ ನಂತರ, ನಿಲೇಶ್ ಭಿಲಾಲ ಎಂಬ ಯುವಕನನ್ನು ಬಂಧಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ