ಭಾರತದ ಮಹಿಳೆಯರಿಗೆ ತಾಲಿಬಾನಿಗಳು ಅವಮಾನಿಸಿದ್ದಾರೆ; ಬೆಂಗಳೂರಲ್ಲಿ ಕಾಂಗ್ರೆಸ್ ವಕ್ತಾರೆ ಫರ್ಜಾನ್ ಆಕ್ರೋಶ
ಈ ಹಿಂದೆ ಸುಷ್ಮಾ ಸ್ವರಾಜ್ ಅಫ್ಘಾನ್ಗೆ ಹೋದಾಗ ಹಿಜಾಬ್ ಹಾಕಿಸಿದ್ದರು. ಆಗ ನಮಗೆ ತುಂಬಾ ಬೇಸರವಾಗಿತ್ತು, ಆದರೆ ಅದು ಆ ದೇಶದ ನಿಯಮ. ಭಾರತದಲ್ಲಿ ಮಹಿಳಾ ಪತ್ರಕರ್ತೆಗೆ ಅವಕಾಶ ಕೊಡದಿರುವುದು ಎಷ್ಟು ಸರಿ? ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ ಯು.ಟಿ. ಫರ್ಜಾನ್ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು, ಅಕ್ಟೋಬರ್ 11: ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯನ್ನು ಹೊರಗಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Amir Khan Muttaqi) ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ವಕ್ತಾರೆ ಯು.ಟಿ. ಫರ್ಜಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದ ಮಹಿಳೆಯರಿಗೆ ತಾಲಿಬಾನಿಗಳು ಅವಮಾನ ಮಾಡಿದ್ದಾರೆ. ಅವರು ತಮ್ಮ ಧಾರ್ಮಿಕ ನಂಬಿಕೆಯನ್ನು ಅಫ್ಘಾನಿಸ್ತಾನದಲ್ಲಿ ಇಟ್ಟುಕೊಳ್ಳಲಿ. ಭಾರತದ ಸುದ್ದಿಗೋಷ್ಠಿಯಲ್ಲಿ ಮಹಿಳೆಯರಿಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಭಾರತದಿಂದ ಅಫ್ಘಾನಿಸ್ತಾನಕ್ಕೆ ಸಾಕಷ್ಟು ಸಹಕಾರ, ನೆರವು ಕೊಟ್ಟಿದ್ದೇವೆ. ಆದರೆ, ಅವರು ಭಾರತವನ್ನು ತಾಲೀಬಾನಿಕರಣ ಮಾಡ್ತಿದ್ದಾರೆ ಎಂದು ಯು.ಟಿ. ಫರ್ಜಾನ್ ಆರೋಪಿಸಿದ್ದಾರೆ. ಈ ಹಿಂದೆ ಸುಷ್ಮಾ ಸ್ವರಾಜ್ ಅಫ್ಘಾನ್ಗೆ ಹೋದಾಗ ಹಿಜಾಬ್ ಹಾಕಿಸಿದ್ದರು. ಆಗ ನಮಗೆ ತುಂಬಾ ಬೇಸರವಾಗಿತ್ತು, ಆದರೆ ಅದು ಆ ದೇಶದ ನಿಯಮ. ಭಾರತದಲ್ಲಿ ಮಹಿಳಾ ಪತ್ರಕರ್ತೆಗೆ ಅವಕಾಶ ಕೊಡದಿರುವುದು ಎಷ್ಟು ಸರಿ? ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರೆ ಯು.ಟಿ. ಫರ್ಜಾನ್ ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Oct 11, 2025 07:07 PM
ಬಿಕೆ ಹರಿಪ್ರಸಾದ್ ಕೈಗೆ ಬಲ ತುಂಬಿದ ಸುರ್ಜೆವಾಲಾ, ವೇಣುಗೋಪಾಲ್
ಯುಪಿಐ ವಹಿವಾಟುಗಳಿಗೆ ಹೊಸ ಶುಲ್ಕ: ಯಾರು ಶುಲ್ಕ ಕಟ್ಟಬೇಕು? ಇಲ್ಲಿದೆ ಉತ್ತರ
ಬೀದರ್ನ ಪ್ರವಾಸಿ ತಾಣಗಳಲ್ಲಿ ಇರುವ ಕುಂದು ಕೊರತೆಗಳು ಒಂದಾ, ಎರಡಾ? ವಿಡಿಯೋ
ಮೈಸೂರು ಹೊಸ ಮನೆ ಹಿಂದಿನ ರಹಸ್ಯ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ

