AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪಾ ಬೇಡಪ್ಪಾ, ಮಗಳೆಷ್ಟೇ ಅಂಗಲಾಚಿದರೂ ಬಿಡದೆ ಕುಡುಕ ತಂದೆಯಿಂದ ಲೈಂಗಿಕ ದೌರ್ಜನ್ಯ

ಸಮಾಜದಲ್ಲಿರುವ ದುಷ್ಟ ಕಣ್ಣುಗಳಿಂದ ಮಗಳನ್ನು ರಕ್ಷಣೆ ಮಾಡಬೇಕಿರುವ ತಂದೆಯೇ ಆಕೆಯ ಮೇಲೆ ದೌರ್ಜನ್ಯ( Assault)ವೆಸಗಿದರೆ ಆಕೆ ಯಾರ ಬಳಿ ಹೋಗಬೇಕು. ಅಪ್ಪಾ ಬೇಡಪ್ಪಾ, ನನ್ನ ಹತ್ತಿರ ಬರಬೇಡಿ ಎಂದು ಮಗಳು ಎಷ್ಟೇ ಅಂಗಲಾಚಿದರೂ ಕೇಳದೆ ಕುಡುಕ ತಂದೆಯೊಬ್ಬ ಮದ್ಯದ ನಶೆಯಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ.

ಅಪ್ಪಾ ಬೇಡಪ್ಪಾ, ಮಗಳೆಷ್ಟೇ ಅಂಗಲಾಚಿದರೂ ಬಿಡದೆ ಕುಡುಕ ತಂದೆಯಿಂದ ಲೈಂಗಿಕ ದೌರ್ಜನ್ಯ
ಬಾಲಕಿ-ಸಾಂದರ್ಭಿಕ ಚಿತ್ರImage Credit source: Times Of India
ನಯನಾ ರಾಜೀವ್
|

Updated on: Jul 29, 2025 | 5:04 PM

Share

ತೆಲಂಗಾಣ, ಜುಲೈ 29: ಸಮಾಜದಲ್ಲಿರುವ ದುಷ್ಟ ಕಣ್ಣುಗಳಿಂದ ಮಗಳನ್ನು ರಕ್ಷಣೆ ಮಾಡಬೇಕಿರುವ ತಂದೆಯೇ ಆಕೆಯ ಮೇಲೆ ದೌರ್ಜನ್ಯ( Assault)ವೆಸಗಿದರೆ ಆಕೆ ಯಾರ ಬಳಿ ಹೋಗಬೇಕು. ಅಪ್ಪಾ ಬೇಡಪ್ಪಾ, ನನ್ನ ಹತ್ತಿರ ಬರಬೇಡಿ ಎಂದು ಮಗಳು ಎಷ್ಟೇ ಅಂಗಲಾಚಿದರೂ ಕೇಳದೆ ಕುಡುಕ ತಂದೆಯೊಬ್ಬ ಮದ್ಯದ ನಶೆಯಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ.

ಮರಿಕಲ್ ಮಂಡಲದ ವ್ಯಾಪ್ತಿಯಲ್ಲಿ ಜುಲೈ 25ರಂದು ಈ ಘಟನೆ ನಡೆದಿದೆ. 10 ವರ್ಷದ ಬಾಲಕಿಯನ್ನು ಚಿಕಿತ್ಸೆಗಾಗಿ ಮೆಹಬೂಬ್​​ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿಗೆ ಇತ್ತೀಚೆಗಷ್ಟೇ ನಾಯಿ ಕಡಿದಿತ್ತು. ಹೀಗಾಗಿ ಮುಕ್ತಲ್​​ನಲ್ಲಿರುವ ಸರ್ಕಾರಿ ಹಾಸ್ಟೆಲ್​​ನಿಂದ ಮನೆಗೆ ಮರಳಿದ್ದಳು.

ಜುಲೈ 25ರಂದು ಮಧ್ಯಾಹ್ನ ಆಕೆಯ ತಾಯಿ ದಿನಗೂಲಿ ಕೆಲಸಕ್ಕೆ ಹೋಗಿದ್ದಾಗ, ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು, ಓದಿಕೊಳ್ಳುತ್ತಿದ್ದಳು. ಆಕೆಯ ತಂದೆ ಮದ್ಯಪಾನ ಮಾಡಿದ್ದ ಮೇಕೆ ಮೇಯಿಸಿ ಹಿಂದಿರುಗಿ ಬರುವಾಗ ನಶೆಯಲ್ಲಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಮತ್ತಷ್ಟು ಓದಿ: ಪ್ರತ್ಯೇಕ ಘಟನೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಉದ್ಯಮಿ, ಚಾಕೊಲೇಟ್ ಕೊಡಿಸುವುದಾಗಿ ಬಾಲಕಿ ಮೇಲೆ ಅತ್ಯಾಚಾರ

ಅಪ್ಪಾ, ನನಗೆ ಏನೂ ಮಾಡಬೇಡಿ, ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಬಾಲಕಿ ಬೇಡಿಕೊಂಡರೂ ಆ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಮನೆಗೆ ಓಡಿ ಬಂದರು. ರಕ್ತಸ್ರಾವವಾಗುತ್ತಿದ್ದ ಬಾಲಕಿಯನ್ನು ಕಂಡು ಕೂಡಲೇ ಆಕೆಯ ತಾಯಿಗೆ ವಿಷಯ ತಲುಪಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ.

ಮೊದಲು ಸ್ಥಳೀಯ ವೈದ್ಯರ ಬಳಿ ಕರೆದೊಯ್ಯಲಾಯಿತು, ಬಳಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಮಾರಿಕಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಮಹಬೂಬ್‌ನಗರ ಸರ್ಕಾರಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲಿನ ವೈದ್ಯರು ಚಿಕಿತ್ಸೆಯನ್ನು ಮುಂದುವರಿಸುವ ಮೊದಲು ಪೊಲೀಸ್ ದೂರು ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಲಾಗಿದೆ.

ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಂದೆ ತಲೆಮರೆಸಿಕೊಂಡಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ