ಎಲ್ಲಾ ಆಸ್ತಿನೂ ನಿನ್ನ ಹೆಂಡತಿ ಹೆಸರಿಗೆ ಬರಿ, ಅತ್ತೆ-ಮಾವನ ಕಿರುಕುಳದಿಂದ ಬೇಸತ್ತು ಅಳಿಯ ಆತ್ಮಹತ್ಯೆ
ಎಲ್ಲಾ ಆಸ್ತಿಯನ್ನು ನಿನ್ನ ಹೆಂಡತಿ ಹೆಸರಿಗೆ ಬರಿ, ಆಗ ನಿಮ್ಮನೆಗೆ ಆಕೆಯನ್ನು ಕಳುಹಿಸುತ್ತೇವೆ ಎಂದು ಅತ್ತೆ-ಮಾವ ನಿತ್ಯ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಪತ್ನಿಯ ಮನೆಯವರು ಮಗಳ ಹೆಸರಿಗೆ ಎಲ್ಲಾ ಭೂಮಿ ಮತ್ತು ಆಸ್ತಿ ಪತ್ರಗಳನ್ನು ವರ್ಗಾಯಿಸುವಂತೆ ನಿತ್ಯ ಒತ್ತಡ ಹೇರುತ್ತಿದ್ದರು. ಇಷ್ಟೆಲ್ಲಾ ಮಾಡಿದರೆ ಮಾತ್ರ ಆಕೆ ಮನೆಗೆ ವಾಪಸ್ ಬರುತ್ತಾಳೆ ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು, ಇದರಿಂದ ಮನನೊಂದು ವಿಷ ಸೇವಿಸಿ ಆತ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಸ್ತಿ, ಜುಲೈ 29: ಎಲ್ಲಾ ಆಸ್ತಿಯನ್ನು ನಿನ್ನ ಹೆಂಡತಿ ಹೆಸರಿಗೆ ಬರಿ, ಆಗ ನಿಮ್ಮನೆಗೆ ಆಕೆಯನ್ನು ಕಳುಹಿಸುತ್ತೇವೆ ಎಂದು ಅತ್ತೆ-ಮಾವ ನಿತ್ಯ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಸ್ತಿಯಲ್ಲಿ ನಡೆದಿದೆ. ಪತ್ನಿಯ ಮನೆಯವರು ಮಗಳ ಹೆಸರಿಗೆ ಎಲ್ಲಾ ಭೂಮಿ ಮತ್ತು ಆಸ್ತಿ ಪತ್ರಗಳನ್ನು ವರ್ಗಾಯಿಸುವಂತೆ ನಿತ್ಯ ಒತ್ತಡ ಹೇರುತ್ತಿದ್ದರು.
ಇಷ್ಟೆಲ್ಲಾ ಮಾಡಿದರೆ ಮಾತ್ರ ಆಕೆ ಮನೆಗೆ ವಾಪಸ್ ಬರುತ್ತಾಳೆ ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದರು, ಇದರಿಂದ ಮನನೊಂದು ವಿಷ ಸೇವಿಸಿ ರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯುವಕ ತನ್ನ ಜೀವನವನ್ನು ಕೊನೆಗೊಳಿಸುವ ಮೊದಲು ವೀಡಿಯೊ ರೆಕಾರ್ಡ್ ಮಾಡಿದ್ದಾರೆ. ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಹರೈಯಾ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಿಜ್ರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರಾಜ್ ಈ ವರ್ಷ ಏಪ್ರಿಲ್ 22 ರಂದು ಮಹಾದೇವರಿಯ ನಿವಾಸಿ ಖುಷಿಯನ್ನು ವಿವಾಹವಾದರು. ಆದರೆ, ದಂಪತಿ ನಡುವಿನ ವಿವಾದಗಳಿಂದಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ಸಂಬಂಧ ಹದಗೆಟ್ಟಿತ್ತು. ಖುಷಿ ತನ್ನ ತಾಯಿಯ ಮನೆಗೆ ಹೋದವಳು ಹಿಂದಿರುಗಿರಲಿಲ್ಲ.
ಮತ್ತಷ್ಟು ಓದಿ: ಸತ್ತ ಅಮ್ಮ ಕನಸಿನಲ್ಲಿ ಬಂದು ಕರೆದಳೆಂದು ಆತ್ಮಹತ್ಯೆ ಮಾಡಿಕೊಂಡ 16 ವರ್ಷದ ಬಾಲಕ!
ರಾಜ್ ತನ್ನ ಹೆಂಡತಿಯನ್ನು ಮರಳಿ ಕರೆತರಲು ಹಲವಾರು ಪ್ರಯತ್ನಗಳನ್ನು ಮಾಡಿದರೂ, ಆಕೆಯ ಕುಟುಂಬವು ಕಳುಹಿಸಲು ಒಪ್ಪಲಿಲ್ಲ. ರಾಜ್, ಹರೈಯಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ತಮ್ಮ ಅತ್ತೆ-ಮಾವನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಲಿಖಿತ ಹೇಳಿಕೆಯನ್ನು ಸಹ ಸಲ್ಲಿಸಿದ್ದರು.
ತನ್ನ ಭೂಮಿಯನ್ನು ತನ್ನ ಹೆಂಡತಿಯ ಹೆಸರಿಗೆ ವರ್ಗಾಯಿಸಲು ಒತ್ತಾಯಿಸುತ್ತಿದ್ದಾರೆ, ತನ್ನ ಪತ್ನಿ ಈಗ ಗರ್ಭಿಣಿ, ಒಂದೊಮ್ಮೆ ಆಸ್ತಿ ಹೆಸರಿಗೆ ಬರೆಯದಿದ್ದರೆ ಮಗುವನ್ನು ತೆಗೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದರು.
🚨बस्ती : पत्नी से प्रताड़ित पति ने जहरीला पदार्थ खाया🚨
🆔 सलफास खाने के दौरान युवक ने बनाया वीडियो 🕵️♂️ आत्महत्या के प्रयास से पहले थाना अध्यक्ष को लिखा पत्र 📍 ससुराल पक्ष पर उत्पीड़न करने का लगाया आरोप 📍 युवक राज मिश्रा की इलाज के दौरान हुई मौत 📍 हरैया थाना क्षेत्र के विजरा… pic.twitter.com/8ZpTHBKpsS
— भारत समाचार | Bharat Samachar (@bstvlive) July 28, 2025
ಈ ತೀವ್ರವಾದ ಒತ್ತಡ ಮತ್ತು ಭಾವನಾತ್ಮಕ ಆಘಾತವು ಅವನನ್ನು ಈ ತೀವ್ರ ಹೆಜ್ಜೆ ಇಡಲು ಕಾರಣವಾಯಿತು. ಹರೈಯಾ ಠಾಣೆಯ ಪೊಲೀಸರು ಸ್ಥಳಕ್ಕೆ ತಲುಪಿ, ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ಪೂರ್ಣಗೊಂಡ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




