ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ
ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ಸಿಂಧೂರ್ನ್ನು ಯಾವ ದೇಶವೂ ತಡೆಯಲು ಪ್ರಯತ್ನ ಪಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಸ್ಪಷ್ಟಪಡಿಸಿದ್ದಾರೆ. ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ಅವರು, ಜಗತ್ತಿನ ಯಾವುದೇ ದೇಶ ಭಾರತವನ್ನು ತಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ನವದೆಹಲಿ, ಜುಲೈ 29: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಪಾಕಿಸ್ತಾನದ ಮೇಲೆ ನಡೆಸಿದ ಆಪರೇಷನ್ಸಿಂಧೂರ್ನ್ನು ಯಾವ ದೇಶದ ನಾಯಕರೂ ತಡೆಯಲು ಪ್ರಯತ್ನ ಪಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಸ್ಪಷ್ಟಪಡಿಸಿದ್ದಾರೆ. ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತು ಲೋಕಸಭೆಯಲ್ಲಿ ಮಾತನಾಡಿರುವ ಅವರು, ಜಗತ್ತಿನ ಯಾವುದೇ ದೇಶ ಭಾರತವನ್ನು ತಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇವಲ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿವೆ. ದೇಶದ ವೀರರ ಶೌರ್ಯಕ್ಕೆ ಕಾಂಗ್ರೆಸ್ ಬೆಂಬಲ ಸಿಗದಿರುವುದು ದುರದೃಷ್ಟಕರ ಎಂದು ಪ್ರಧಾನಿ ಮೋದಿ ಹೇಳಿದರು. ಪಹಲ್ಗಾಮ್‌ನ ಮುಗ್ಧ ಜನರ ಹತ್ಯೆಯಲ್ಲೂ ಕಾಂಗ್ರೆಸ್ ತನ್ನ ಬೇಳೆಯನ್ನು ಬೇಯಿಸಿಕೊಳ್ಳಲು ಪ್ರಯತ್ನ ಪಟ್ಟಿತ್ತು. 193 ದೇಶಗಳ ಪೈಕಿ ಕೇವಲ 3 ದೇಶಗಳು ಮಾತ್ರ ಪಾಕಿಸ್ತಾನಕ್ಕೆ ಬೆಂಬಲ ನೀಡಿದವು, ಉಳಿದೆಲ್ಲಾ ದೇಶಗಳು ಭಾರತವನ್ನು ಬೆಂಬಲಿಸಿದವು, ಆದರೆ ದುರಾದೃಷ್ಟವಶಾತ್ ಕಾಂಗ್ರೆಸ್ ಕೂಡ ನಮಗೆ ಬೆಂಬಲ ನೀಡಲಿಲ್ಲ ಎಂದರು.
ಕಾಂಗ್ರೆಸ್ ತನ್ನ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಅವಲಂಬಿಸಿದೆ. ಇತ್ತೀಚಿನ ದಿನಗಳಲ್ಲಿ ನಿರೂಪಣೆ ದೊಡ್ಡ ಪಾತ್ರ ವಹಿಸುತ್ತದೆ, ನಿರೂಪಣೆಗಳನ್ನು ರಚಿಸುವ ಮೂಲಕ ಮತ್ತು AI ಬಳಸಿಕೊಂಡು ಸೈನಿಕರ ನೈತಿಕತೆಯನ್ನು ಕುಗ್ಗಿಸಲು ಆಟಗಳನ್ನು ಆಡಲಾಗುತ್ತದೆ. ಸಾರ್ವಜನಿಕರಲ್ಲಿ ಅಪನಂಬಿಕೆಯನ್ನು ಸೃಷ್ಟಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಇಂತಹ ಪಿತೂರಿಗಳ ವಕ್ತಾರರಾಗಿ ಮಾರ್ಪಟ್ಟಿವೆ” ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದರು.
ಮತ್ತಷ್ಟು ಓದಿ: ಅತ್ತ ಉಗ್ರರ ಪುರಾವೆ ಕೇಳುತ್ತಿರುವ ಕಾಂಗ್ರೆಸ್ ನಾಯಕ, ಇತ್ತ ಪಾಕ್ನಿಂದಲೇ ಉಗ್ರರು ಬಂದಿದ್ದಾರೆ ಎನ್ನುತ್ತಿರುವ ರಾಹುಲ್
ಪಹಲ್ಗಾಮ್ನಲ್ಲಿ ಕ್ರೂರ ಘಟನೆ ನಡೆದಿತ್ತು, ಉಗ್ರರು ನಿರ್ದೋಶಿಗಳನ್ನು ಯಾವ ಧರ್ಮ ಎಂದು ಕೇಳಿ ಗುಂಡು ಹಾರಿಸಿದರು. ಇದು ಕ್ರೂರತೆಯ ಪರಾಕಾಷ್ಠೆಯಾಗಿತ್ತು. ಭಾರತದಲ್ಲಿ ಹಿಂಸಾಚಾರ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸಿದ್ದು, ಧಂಗೆ ಎಬ್ಬಿಸುವ ಪ್ರಯತ್ನ ಅದಾಗಿತ್ತು. ಆದರೆ ಅವರ ಎಲ್ಲಾ ಉಪಾಯವನ್ನು ನಮ್ಮ ಸೈನಿಕರು ತಲೆಕೆಳಗು ಮಾಡಿದ್ದಾರೆ.
ಯಾವುದೇ ನ್ಯೂಕ್ಲಿಯರ್ ಬೆದರಿಕೆಗೂ ನಾವು ಬಗ್ಗುವುದಿಲ್ಲ ಎಂಬುದನ್ನು ಅವರಿಗೆ ತೋರಿಸಿದ್ದಾರೆ. ಭಾರತ ಮೇ6 ರ ಮಧ್ಯರಾತ್ರಿ, ಮೇ 7ರ ಬಳಗಿನ ಜಾವ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಅವರಿಂದ ತಡೆಯಲು ಸಾಧ್ಯವಾಗಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Tue, 29 July 25




