ಭಾರತಕ್ಕೆ ಇಡೀ ವಿಶ್ವದಿಂದಲೇ ಬೆಂಬಲ ಸಿಕ್ಕಿತ್ತು ಆದರೆ ಕಾಂಗ್ರೆಸ್ನಿಂದ ಸಿಗಲಿಲ್ಲ: ಮೋದಿ
Operation Sindoor: ಭಾರತಕ್ಕೆ ಇಡೀ ವಿಶ್ವದಿಂದಲೇ ಬಂಬಲ ಸಿಕ್ಕಿತ್ತು ಆದರೆ ಕಾಂಗ್ರೆಸ್(Congress) ಬೆಂಬಲ ಸಿಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿರುವ ಅವರು, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ನಮಗೆ ಎಲ್ಲಾ ದೇಶಗಳು ಸಹಕಾರ ನೀಡಿದವು ಆದರೆ ಕಾಂಗ್ರೆಸ್ನಿಂದ ಬೆಂಬಲ ಸಿಗಲಿಲ್ಲ ಎಂದರು.

ನವದೆಹಲಿ, ಜುಲೈ 29: ಭಾರತಕ್ಕೆ ಇಡೀ ವಿಶ್ವದಿಂದಲೇ ಬಂಬಲ ಸಿಕ್ಕಿತ್ತು ಆದರೆ ಕಾಂಗ್ರೆಸ್(Congress) ಬೆಂಬಲ ಸಿಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಬಗ್ಗೆ ಮಾತನಾಡಿರುವ ಅವರು, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದಾಗ ನಮಗೆ ಎಲ್ಲಾ ದೇಶಗಳು ಸಹಕಾರ ನೀಡಿದವು ಆದರೆ ಕಾಂಗ್ರೆಸ್ನಿಂದ ಬೆಂಬಲ ಸಿಗಲಿಲ್ಲ ಎಂದರು.
193 ದೇಶಗಳ ಪೈಕಿ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿದ್ದವು, ಉಳಿದೆಲ್ಲಾ ದೇಶಗಳು ಭಾರತದ ಪರವಾಗಿದ್ದವು. ಆದರೆ ಕಾಂಗ್ರೆಸ್ ನಮ್ಮ ಸೈನಿಕರ ಶಕ್ತಿ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ನಮ್ಮ ಬಳಿ ಪಾಕಿಸ್ತಾನದಂತೆಯೇ ಪುರಾವೆ ಕೇಳಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಸಮಸ್ಯೆಗಳಿಗೆ ಪಾಕಿಸ್ತಾನವನ್ನು ಅವಲಂಬಿಸಿದೆ. ಇತ್ತೀಚಿನ ದಿನಗಳಲ್ಲಿ ನಿರೂಪಣೆ ದೊಡ್ಡ ಪಾತ್ರ ವಹಿಸುತ್ತದೆ, ನಿರೂಪಣೆಗಳನ್ನು ರಚಿಸುವ ಮೂಲಕ ಮತ್ತು AI ಬಳಸಿಕೊಂಡು ಸೈನಿಕರ ನೈತಿಕತೆಯನ್ನು ಕುಗ್ಗಿಸಲು ಆಟಗಳನ್ನು ಆಡಲಾಗುತ್ತದೆ. ಸಾರ್ವಜನಿಕರಲ್ಲಿ ಅಪನಂಬಿಕೆಯನ್ನು ಸೃಷ್ಟಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ. ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಪಾಕಿಸ್ತಾನದ ಇಂತಹ ಪಿತೂರಿಗಳ ವಕ್ತಾರರಾಗಿ ಮಾರ್ಪಟ್ಟಿವೆ” ಎಂದು ಪ್ರಧಾನಿ ಮೋದಿ ಲೋಕಸಭೆಯಲ್ಲಿ ಹೇಳಿದರು.
ಪಹಲ್ಗಾಮ್ನಲ್ಲಿ ಕ್ರೂರ ಘಟನೆ ನಡೆದಿತ್ತು, ಉಗ್ರರು ನಿರ್ದೋಶಿಗಳನ್ನು ಯಾವ ಧರ್ಮ ಎಂದು ಕೇಳಿ ಗುಂಡು ಹಾರಿಸಿದರು. ಇದು ಕ್ರೂರತೆಯ ಪರಾಕಾಷ್ಠೆಯಾಗಿತ್ತು. ಭಾರತದಲ್ಲಿ ಹಿಂಸಾಚಾರ ಸೃಷ್ಟಿಸಲು ಪಾಕಿಸ್ತಾನ ಪ್ರಯತ್ನಿಸಿದ್ದು, ಧಂಗೆ ಎಬ್ಬಿಸುವ ಪ್ರಯತ್ನ ಅದಾಗಿತ್ತು. ಆದರೆ ಅವರ ಎಲ್ಲಾ ಉಪಾಯವನ್ನು ನಮ್ಮ ಸೈನಿಕರು ತಲೆಕೆಳಗು ಮಾಡಿದ್ದಾರೆ.
ಮತ್ತಷ್ಟು ಓದಿ: ಕಾಂಗ್ರೆಸ್ನ ರಿಮೋಟ್ ಕಂಟ್ರೋಲ್ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ
ಕಾಂಗ್ರೆಸ್ ಮೀಡಿಯಾದಲ್ಲಿ ಹೆಡ್ಲೈನ್ ಆಗಬಹುದು ಆದರೆ ದೇಶದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಭಾರತದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಆದರೆ ಕಾಂಗ್ರೆಸ್ ಇಲ್ಲಿಯವರೆಗೂ ಆಚರಿಸಿಲ್ಲ. ಇದು ಸೇನೆ ಬಗ್ಗೆ ಇರುವ ನೆಗೆಟಿವಿಟಿಯನ್ನು ತೋರಿಸುತ್ತದೆ ಎಂದರು. ಪಾಕಿಸ್ತಾನ ಕೇಳಿರುವ ಪ್ರಶ್ನೆಯನ್ನೇ ಕಾಂಗ್ರೆಸ್ ಕೇಳುತ್ತಿತ್ತು, ಹೀಗಾಗಿ ಕಾಂಗ್ರೆಸ್ ರಿಮೋಟ್ ಕಂಟ್ರೋಲ್ ಪಾಕಿಸ್ತಾನದ ಕೈಯಲ್ಲಿದ್ದಂತಿದೆ ಎಂದರು.
ಆಪರೇಷನ್ ಸಿಂಧೂರ್ ನಿಲ್ಲಿಸುವ ನಿರ್ಧಾರ ಭಾರತದ್ದೇ ಆಗಿತ್ತು ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸುವ ನಿರ್ಧಾರವು ಸಂಪೂರ್ಣವಾಗಿ ಭಾರತದ್ದೇ ಆಗಿದ್ದು, ಉದ್ದೇಶಿತ ಉದ್ದೇಶಗಳನ್ನು ಸಾಧಿಸಿದ ನಂತರ ಇದನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದರು. ಈ ಕ್ರಮವು ಭಾರತದ ಕಾರ್ಯತಂತ್ರದ ಪರಿಪಕ್ವತೆ ಮತ್ತು ಉದ್ದೇಶದ ಸ್ಪಷ್ಟತೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತ ಕೆಲವೇ ನಿಮಿಷಗಳಲ್ಲಿ ಪಾಕಿಸ್ತಾನ ಸೇನೆಗೆ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸಿತು . ಕಾರ್ಯಾಚರಣೆಯ ಉದ್ದೇಶವನ್ನು ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸಾಧಿಸಲಾಗಿದೆ ಎಂದು ಪ್ರತಿಪಾದಿಸಿದರು.
ಆಪರೇಷನ್ ಸಿಂಧೂರ್ ‘ಆತ್ಮನಿರ್ಭರ ಭಾರತ’ದ ಶಕ್ತಿಯನ್ನು ಮೊದಲ ಬಾರಿಗೆ ಜಗತ್ತಿಗೆ ಪ್ರದರ್ಶಿಸಿದೆ ಎಂದು ಹೇಳಿದರು. ಭಾರತದಲ್ಲಿ ತಯಾರಿಸಿದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಬಳಕೆಯು ಭಾರತದ ಸ್ವಾವಲಂಬನೆಯನ್ನು ಪ್ರದರ್ಶಿಸಿದ್ದಲ್ಲದೆ, ಪಾಕಿಸ್ತಾನದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಮಿತಿಗಳನ್ನು ಸಹ ಬಹಿರಂಗಪಡಿಸಿದೆ ಎಂದು ಅವರು ಎತ್ತಿ ತೋರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




