AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ

ಪಾಕಿಸ್ತಾನ(Pakistan) ಕೇಳುವ ಪ್ರಶ್ನೆಯನ್ನೇ ಕಾಂಗ್ರೆಸ್​(Congress) ಕೇಳುತ್ತಿದೆ.  ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದ್ದಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಪಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ಚಾಟಿ ಬೀಸಿದರು. ಕಾಂಗ್ರೆಸ್​ಗೆ ಭಾರತೀಯ ಸೈನಿಕರ ಬಲದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅಂದು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕೂಡ ಭಾರತೀಯ ಸೇನೆಯ ಬಳಿ ಕಾಂಗ್ರೆಸ್​ ಸಬೂತು ಕೇಳಿತ್ತು. ಬಳಿಕ ಸಾಕ್ಷ್ಯ ಸಿಕ್ಕ ಮೇಲೆ ಈ ಸರ್ಜಿಕಲ್ ಸ್ಟ್ರೈಕ್​ ನಮಗೆ ದೊಡ್ಡದೇನೂ ಅಲ್ಲ, ನಾವು ಕೂಡ ಮಾಡಿದ್ದೆವು ಎಂದು ಹೇಳಿಕೊಂಡು ಓಡಾಡಿತ್ತು.

ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದೆ: ಪ್ರಧಾನಿ ಮೋದಿ
ನರೇಂದ್ರ ಮೋದಿ Image Credit source: PTI
ನಯನಾ ರಾಜೀವ್
|

Updated on:Jul 29, 2025 | 8:14 PM

Share

ನವದೆಹಲಿ, ಜುಲೈ 29: ಪಾಕಿಸ್ತಾನ(Pakistan) ಕೇಳುವ ಪ್ರಶ್ನೆಯನ್ನೇ ಕಾಂಗ್ರೆಸ್​(Congress) ಕೇಳುತ್ತಿದೆ.  ಕಾಂಗ್ರೆಸ್​​ನ ರಿಮೋಟ್​ ಕಂಟ್ರೋಲ್ ಪಾಕಿಸ್ತಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಪಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್​ ವಿರುದ್ಧ ಚಾಟಿ ಬೀಸಿದರು. ಕಾಂಗ್ರೆಸ್​ಗೆ ಭಾರತೀಯ ಸೈನಿಕರ ಬಲದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅಂದು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕೂಡ ಭಾರತೀಯ ಸೇನೆಯ ಬಳಿ ಕಾಂಗ್ರೆಸ್​ ಸಬೂತು ಕೇಳಿತ್ತು. ಬಳಿಕ ಸಾಕ್ಷ್ಯ ಸಿಕ್ಕ ಮೇಲೆ ಈ ಸರ್ಜಿಕಲ್ ಸ್ಟ್ರೈಕ್​ ನಮಗೆ ದೊಡ್ಡದೇನೂ ಅಲ್ಲ, ನಾವು ಕೂಡ ಮಾಡಿದ್ದೆವು ಎಂದು ಹೇಳಿಕೊಂಡು ಓಡಾಡಿತ್ತು.

ಇನ್ನು ಬಾಲಾಕೋಟ್ ಏರ್​ ಸ್ಟ್ರೈಕ್ ಆದಾಗ ಕೂಡ ಫೋಟೊ ತೋರಿಸಿ, ಎಲ್ಲಿ, ಯಾವ ಜಾಗದಲ್ಲಿ ಯಾವ ಸಮಯದಲ್ಲಿ ದಾಳಿ ಮಾಡಿದಿರಿ ಎಂದು ಕಾಂಗ್ರೆಸ್​ ಕೇಳಿತ್ತು. ಪಾಕಿಸ್ತಾನವು ಕೂಡ ಇದನ್ನೇ ಕೇಳುತ್ತಿತ್ತು. ಅಭಿನಂದನ್ ಪಾಕ್​ನವರ ಕೈಯಲ್ಲಿ ಸಿಕ್ಕಿದಾಗ ಅವರ ಬಗ್ಗೆ ಆಲೋಚನೆ ಮಾಡುವ ಬದಲು ಅವರನ್ನು ಅಸ್ತ್ರದಂತೆ ಬಳಸಿ ನನ್ನ ಮೇಲೆ ದಾಳಿ ಮಾಡಲಾಯಿತು.

ಆದರೆ ಅಂದು ಅಭಿನಂದನ್ ಸುರಕ್ಷಿತವಾಗಿ ವಾಪಸಾದರು. ಆಗಲೂ ಕಾಂಗ್ರೆಸ್​​ಗೆ ಖುಷಿ ಇರಲಿಲ್ಲ. ಈಗ ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಸೈನಿಕರೊಬ್ಬರು ಪಾಕಿಸ್ತಾನದವರ ಕೈಯಲ್ಲಿ ಸಿಕ್ಕಾಗ ಕೂಡ ಇದೇ ರೀತಿ ಕೊಂಕು ಮಾತುಗಳನ್ನು ಕಾಂಗ್ರೆಸ್​ ಆಡಿತ್ತು.

ಮತ್ತಷ್ಟು ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ

ಆದರೆ ಸೈನಿಕರಿಗೆ ಏನೂ ಆಗದಂತೆ ವಾಪಸ್ ಕರೆದುಕೊಂಡು ಬಂದಿದ್ದೇವೆ. ಈ ಕಾಂಗ್ರೆಸ್​ ಪಾಕಿಸ್ತಾನ ಆಡಿಸಿದಂತೆ ಆಡುತ್ತಿದೆ. ಅದರ ರಿಮೋಟ್ ಕಂಟ್ರೋಲ್ ಪಾಕ್​ ಕೈಯಲ್ಲಿದೆ ಎಂದರು. ಆಪರೇಷನ್​ ಸಿಂಧೂರ್​​ನಂತಹ ಘಟನೆಗಳು ನಡೆದಾಗ ದೇಶದ ತಾಕತ್ತಿನ ಪರಿಚಯವಾಗುತ್ತದೆ.

ಪಾಕ್​ 1 ಸಾವಿರ ಮಿಸೈಲ್​ ಮೂಲಕ ದಾಳಿ ನಡೆಸಲು ಮುಂದಾಗಿತ್ತು? ಪಾಕಿಸ್ತಾನವು ಒಂದು ಸಾವಿರ ಮಿಸೈಲ್​ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಒಂದೊಮ್ಮೆ ಅದು ಭಾರತದ ಮೇಲೆ ಬಿದ್ದಿದ್ದರೆ ಇಲ್ಲಿಯ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಒಮ್ಮೆ ಆಲೋಚಿಸಲೇಬೇಕು. ಆದರೆ ಭಾರತೀಯ ಸೈನಿಕರು ಅದನ್ನು ಆಕಾಶದಲ್ಲಿಯೇ ಚೂರು ಚೂರು ಮಾಡಿದ್ದಾರೆ.

ಕಾಂಗ್ರೆಸ್​ ಮೀಡಿಯಾದಲ್ಲಿ ಹೆಡ್​​ಲೈನ್ ಆಗಬಹುದು ಆದರೆ ದೇಶದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಭಾರತದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಆದರೆ ಕಾಂಗ್ರೆಸ್​ ಇಲ್ಲಿಯವರೆಗೂ ಆಚರಿಸಿಲ್ಲ. ಇದು ಸೇನೆ ಬಗ್ಗೆ ಇರುವ ನೆಗೆಟಿವಿಟಿಯನ್ನು ತೋರಿಸುತ್ತದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:11 pm, Tue, 29 July 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ