Shocking Video: ಹೆಗಲ ಮೇಲೆ ಮಕ್ಕಳ ಶವ ಹೊತ್ತು 15 ಕಿ.ಮೀ ನಡೆದ ಪೋಷಕರು; ಆಘಾತಕಾರಿ ವಿಡಿಯೋ ವೈರಲ್
ಆರೋಗ್ಯ ಸೌಲಭ್ಯಗಳು ಅಥವಾ ಆ್ಯಂಬುಲೆನ್ಸ್‌ಗಳ ಕೊರತೆಯಿಂದಾಗಿ ಗಂಡ-ಹೆಂಡತಿ 15 ಕಿ.ಮೀ.ವರೆಗೆ ತಮ್ಮ ಭುಜದ ಮೇಲೆ ತಮ್ಮ ಇಬ್ಬರು ಮಕ್ಕಳ ಮೃತದೇಹಗಳನ್ನು ಹೊಂತ್ತುಕೊಂಡು ನಡೆದಿರುವ ಘಟನೆ ನಡೆದಿದೆ. ಅಳುತ್ತಾ ಅವರು ತಮ್ಮ ಮಕ್ಕಳ ಶವಗಳನ್ನು ಹೊತ್ತು ನಡೆಯುತ್ತಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಮುಂಬೈ: ಅನಾರೋಗ್ಯದಿಂದ ಮೃತಪಟ್ಟ ತಮ್ಮ ಇಬ್ಬರು ಮಕ್ಕಳ ಶವಗಳನ್ನು ಹೊತ್ತುಕೊಂಡು ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿರುವ ತಮ್ಮ ಗ್ರಾಮವನ್ನು ತಲುಪಲು ದಂಪತಿ ಬರೋಬ್ಬರಿ 15 ಕಿ.ಮೀ. ನಡೆದು ಸಾಗಿದ್ದಾರೆ. ತಮ್ಮ ಹೆಗಲ ಮೇಲೆ ಇಬ್ಬರು ಪುಟ್ಟ ಗಂಡು ಮಕ್ಕಳ ಶವಗಳನ್ನು ಹೊತ್ತುಕೊಂಡು ನಡೆಯುತ್ತಿರುವ ಗಂಡ-ಹೆಂಡತಿಯ ವಿಡಿಯೋ ಎಂಥವರ ಮನಸನ್ನೂ ಕರಗಿಸುವಂತಿದೆ.
ಮಹಾರಾಷ್ಟ್ರದ ಪಟ್ಟಿಗಾಂವ್ ಗ್ರಾಮದಲ್ಲಿ ಸೆಪ್ಟೆಂಬರ್ 4ರಂದು ಈ ಘಟನೆ ಸಂಭವಿಸಿದೆ. 6 ಮತ್ತು 3 ವರ್ಷ ವಯಸ್ಸಿನ ಇಬ್ಬರು ಅಣ್ಣ-ತಮ್ಮ ಸೆಪ್ಟೆಂಬರ್ 4ರಂದು ಜ್ವರದಿಂದ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಸರಿಯಾದ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಅವರ ಪೋಷಕರು ತಮ್ಮ ಮಕ್ಕಳನ್ನು ಸಾಂಪ್ರದಾಯಿಕ ಚಿಕಿತ್ಸೆಗಾಗಿ ಸ್ಥಳೀಯ ಪಂಡಿತರ ಬಳಿಗೆ ಕರೆದೊಯ್ದರು. ಆ ಪಂಡಿತ ಕೆಲವು ಗಿಡಮೂಲಿಕೆ ಔಷಧಗಳನ್ನು ನೀಡಿದರು. ಆದರೆ ಎರಡೂ ಮಕ್ಕಳ ಸ್ಥಿತಿಯು ಇನ್ನಷ್ಟು ಹದಗೆಟ್ಟಿತು. ಕೆಲವೇ ಗಂಟೆಗಳಲ್ಲಿ, ಸಹೋದರರಿಬ್ಬರೂ ಉಸಿರಾಡಲು ತೊಂದರೆ ಅನುಭವಿಸಿದರು.
ಇದನ್ನೂ ಓದಿ: Shocking News: ಅಮ್ಮನ ಪಕ್ಕ ಮಲಗಿದ್ದ ಮಗುವಿಗೆ ಕಚ್ಚಿದ ಹಾವು; ಮೂಢನಂಬಿಕೆಯಿಂದ ಶಿಶುವಿನ ಸಾವು
ಪಟ್ಟಿಗಾಂವ್‌ನಿಂದ ಜಿಮ್ಲಗಟ್ಟಾದಲ್ಲಿನ ಆರೋಗ್ಯ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯಿಲ್ಲದೆ ಮತ್ತು ಆ ಸಮಯದಲ್ಲಿ ಯಾವುದೇ ಆಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದೇ, ಪೋಷಕರಿಗೆ ತಮ್ಮ ಮಕ್ಕಳ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಅವರು ಜಿಮ್ಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಲು 15 ಕಿಲೋಮೀಟರ್‌ಗಳವರೆಗೆ ನದಿಗಳು, ಕೆಸರಿನ ಹಾದಿಗಳ ಮೂಲಕ ಓಡಿದರು. ಆದರೆ, ಅಷ್ಟರಲ್ಲಾಗಲೇ ಆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು.
दोन्ही लेकरांचे ‘मृतदेह’ खांद्यावर घेऊन चिखलातून वाट शोधत पुढे जात असलेले हे दाम्पत्य गडचिरोली जिल्ह्यातील अहेरी तालुक्यातील आहे.
आजोळी आलेल्या दोन भावंडांना ताप आला. वेळेत उपचार मिळाले नाही. दोन तासांतच दोघांचीही प्रकृती खालावली व दीड तासांच्या अंतराने दोघांनीही अखेरचा श्वास… pic.twitter.com/ekQBQHXeGu
— Vijay Wadettiwar (@VijayWadettiwar) September 5, 2024
15 ಕಿ.ಮೀ. ಮಕ್ಕಳನ್ನು ಹೊತ್ತುಕೊಂಡು ಹೋಗಿದ್ದ ದಂಪತಿ ಆ ಶವಗಳನ್ನು ಮತ್ತೆ ಮನೆಗೆ ತರಲು 15 ಕಿ.ಮೀ. ವಾಪಾಸ್ ಊರಿಗೆ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದಿದ್ದಾರೆ. ಅಂತಿಮವಾಗಿ ಆಸ್ಪತ್ರೆಯವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರೂ ದುಃಖಿತ ಪೋಷಕರು ಆ ಸಹಾಯವನ್ನು ನಿರಾಕರಿಸಿದರು. ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗಿದರು.
ಇದನ್ನೂ ಓದಿ: Crime News: ಮಗುವಿನ ಮೇಲೆ ಅತ್ಯಾಚಾರ, ಕೊಲೆ; ತನಗೆ ಗಲ್ಲು ಶಿಕ್ಷೆ ನೀಡಲು ಅಪರಾಧಿಯಿಂದ ನ್ಯಾಯಾಧೀಶರಿಗೆ ಮನವಿ
ಗಡ್ಚಿರೋಲಿ ಜಿಲ್ಲೆಯಲ್ಲಿ ಈ ರೀತಿಯ ಘಟನೆ ಹೊಸತೇನಲ್ಲ. ಭಮ್ರಗಡ್, ಎಟಪಲ್ಲಿ ಮತ್ತು ಅಹೇರಿ ತಹಸಿಲ್‌ಗಳ ಇತರ ದೂರದ ಹಳ್ಳಿಗಳಿಂದ ಇದೇ ರೀತಿಯ ದುರಂತಗಳು ಹಿಂದೆ ವರದಿಯಾಗಿವೆ. ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆಗಳು, ವೈದ್ಯಕೀಯ ತಜ್ಞರು ಮತ್ತು ಸಕಾಲಿಕ ಆಂಬ್ಯುಲೆನ್ಸ್ ಸೇವೆಗಳ ಕೊರತೆಯಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿವಾಸಿಗಳು ಅಸಹಾಯಕರಾಗುತ್ತಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ