Sanjay Raut: ಶೂಟ್ ಮಾಡಿದರೂ, ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ; ಬಿಜೆಪಿ ವಿರುದ್ಧ ಗುಡುಗಿದ ಸಂಜಯ್ ರಾವತ್

ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ನನ್ನನ್ನು ಗುಂಡಿಕ್ಕಿ ಅಥವಾ ಜೈಲಿಗೆ ಕಳುಹಿಸಿದರೂ ನಾನು ಭಯ ಪಡುವುದಿಲ್ಲ. ಎಲ್ಲರ ವಿರುದ್ಧ ಹೋರಾಡಿ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಸಂಜಯ್ ರಾವತ್‌ ಹೇಳಿದ್ದಾರೆ.

Sanjay Raut: ಶೂಟ್ ಮಾಡಿದರೂ, ಜೈಲಿಗೆ ಹಾಕಿದರೂ ನಾನು ಹೆದರುವುದಿಲ್ಲ; ಬಿಜೆಪಿ ವಿರುದ್ಧ ಗುಡುಗಿದ ಸಂಜಯ್ ರಾವತ್
ಸಂಜಯ್ ರಾವುತ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Apr 05, 2022 | 7:08 PM

ನವದೆಹಲಿ: ಸುಮಾರು ರೂ. 1,034 ಕೋಟಿ ರೂ. ಮೌಲ್ಯದ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವತ್ (Sanjay Raut) ಅವರಿಗೆ ಸಂಬಂಧಿಸಿದ ಕೆಲ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಇಂದು ಜಪ್ತಿ ಮಾಡಿದೆ. ಮಹಾರಾಷ್ಟ್ರದ ಅಲಿಬಾಗ್​ನಲ್ಲಿರುವ 9 ಕೋಟಿ ರೂ. ಮೌಲ್ಯದ ಭೂಮಿ ಮತ್ತು ದಾದರ್ ಉಪನಗರದಲ್ಲಿರುವ 2 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಜಪ್ತಿಯಾಗಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಜಯ್ ರಾವತ್, ಕೇಂದ್ರ ಸರ್ಕಾರದ ಏಜೆನ್ಸಿಗಳು ನನ್ನ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡರೂ, ನನ್ನ ಶೂಟ್ ಮಾಡಿದರೂ, ಜೈಲಿಗೆ ಕಳುಹಿಸಿದರೂ ನಾನು ಹೆದರುವುದಿಲ್ಲ. ನಾನು ನಿಜವಾದ ಶಿವ ಸೈನಿಕ. ನನಗೆ ಸಂಬಂಧಿಸಿದ 1 ರೂ. ಕಪ್ಪು ಹಣ ಸಿಕ್ಕರೂ ನನ್ನ ಸಂಪೂರ್ಣ ಆಸ್ತಿಯನ್ನು ಬಿಜೆಪಿಗೆ ದಾನ ಮಾಡುತ್ತೇನೆ ಎಂದು ಹೇಳಿದ್ದಾರೆ.

ಯಾರು ಏನೇ ಹೇಳಿದರೂ, ನನ್ನ ವಿರುದ್ಧ ಏನೇ ಷಡ್ಯಂತ್ರ ರೂಪಿಸಿದರೂ ನಾನು ಹೆದರುವುದಿಲ್ಲ. ಕೊನೆಗೂ ಸತ್ಯವೇ ಮೇಲುಗೈ ಸಾಧಿಸುತ್ತದೆ. ನಾನು ಯಾವುದಕ್ಕೂ ಹೆದರುವವನಲ್ಲ, ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ನನ್ನನ್ನು ಗುಂಡಿಕ್ಕಿ ಅಥವಾ ಜೈಲಿಗೆ ಕಳುಹಿಸಿದರೂ ನಾನು ಭಯ ಪಡುವುದಿಲ್ಲ. ಎಲ್ಲರ ವಿರುದ್ಧ ಹೋರಾಡಿ ನಾನು ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.

ಸಂಜಯ್ ರಾವತ್‌ಗೆ ಬೆಂಬಲ ವ್ಯಕ್ತಪಡಿಸಿದ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ “ಏನೇನು ಆಗುತ್ತಿದೆಯೋ ಅದು ರಾಜಕೀಯ ದ್ವೇಷದ ಭಾಗವಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಲ್ಲ” ಎಂದು ಹೇಳಿದ್ದಾರೆ. ಮುಂಬೈನಲ್ಲಿನ ‘ಚಾಲ್’ ಮರು ಅಭಿವೃದ್ಧಿಗೆ ಸಂಬಂಧಿಸಿದ 1,034 ಕೋಟಿ ರೂ. ಮೌಲ್ಯದ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಲಗತ್ತಿಸಲಾಗಿದೆ.

ಫೆಬ್ರವರಿಯಲ್ಲಿ ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಉದ್ಯಮಿ ಪ್ರವೀಣ್ ರಾವತ್ ಅವರನ್ನು ಇಡಿ ಬಂಧಿಸಿತ್ತು. ನಂತರ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು. ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಪ್ರವೀಣ್ ರಾವತ್ ಅವರ ಪತ್ನಿ ಮಾಧುರಿಯೊಂದಿಗಿನ ಸಂಬಂಧಕ್ಕಾಗಿ ಸಂಸ್ಥೆಯು ಕಳೆದ ವರ್ಷ ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್ ಅವರನ್ನು ಪ್ರಶ್ನಿಸಿತ್ತು.

ಇದನ್ನೂ ಓದಿ: ವೈನ್ ಮದ್ಯವಲ್ಲ; ಸೂಪರ್ ಮಾರ್ಕೆಟ್​ಗಳಲ್ಲಿ ವೈನ್ ಮಾರಾಟಕ್ಕೆ ಅನುಮತಿ ನೀಡಿದ ಸರ್ಕಾರದ ನಡೆಗೆ ಸಂಜಯ್ ರಾವತ್ ಸಮರ್ಥನೆ

ಇ.ಡಿ. ಅಧಿಕಾರಿಗಳು ಕಿರುಕುಳ ನೀಡುತ್ತಾರೆ, ಬೆದರಿಸುತ್ತಾರೆ: ವೆಂಕಯ್ಯ ನಾಯ್ಡುರಿಗೆ ಪತ್ರ ಬರೆದ ಶಿವಸೇನೆ ಎಂಪಿ ಸಂಜಯ್ ರಾವತ್​