ಭಾರತ ಮೂಲದ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ WMO 2021 ಪ್ರಶಸ್ತಿ

ಮಡಗಾಸ್ಕರ್​ನ ಮಳೆಗಾಲದ ಸಮಯ ಎನ್ನುವ ಶೀರ್ಷಿಕೆ ಬರಹದೊಂದಿಗೆ ಈ ಫೋಟೊ ಪ್ರಕಟಗೊಂಡಿತ್ತು. 13 ವಿಜೇತ ಫೋಟೊಗಳಲ್ಲಿ ಇದು ಕೂಡ ಒಂದಾಗಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ 2021ರ ಕ್ಯಾಲೆಂಡರ್​ನಲ್ಲಿ ಈ ಫೋಟೋ ಡಿಸ್​ಪ್ಲೇ ಆಗಲಿದೆ.

ಭಾರತ ಮೂಲದ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ WMO 2021 ಪ್ರಶಸ್ತಿ
ಶ್ರವಣ್​ ಕ್ಲಿಕ್ಕಿಸಿದ ಮಡಗಾಸ್ಕರ್​ ಚಿತ್ರ
Rajesh Duggumane

| Edited By: Ayesha Banu

Jan 04, 2021 | 3:44 PM

ಬೆಂಗಳೂರು: ನಗರದ ಹವ್ಯಾಸಿ ಛಾಯಾಗ್ರಾಹಕ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊಗೆ ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (WMO) ನೀಡುವ 2021ರ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಇವರು ಆಫ್ರಿಕಾದ ಮಡಗಾಸ್ಕರ್​ನ ಮೊರೊಂಡವದಲ್ಲಿ ಹವಾಮಾನದ ನಾಟಕೀಯ ವಿದ್ಯಮಾನವನ್ನು ಇವರು ಕ್ಲಿಕ್ಕಿಸಿದ್ದರು.

‘ಮಡಗಾಸ್ಕರ್​ನ ಮಳೆಗಾಲದ ಸಮಯ’ ಎನ್ನುವ ಶೀರ್ಷಿಕೆ ಬರಹದೊಂದಿಗೆ ಈ ಫೋಟೋ ಪ್ರಕಟಗೊಂಡಿತ್ತು. 13 ವಿಜೇತ ಫೋಟೋಗಳಲ್ಲಿ ಇದು ಕೂಡ ಒಂದಾಗಿದೆ. ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ 2021ರ ಕ್ಯಾಲೆಂಡರ್​ನಲ್ಲಿ ಈ ಫೋಟೊ ಪ್ರಕಟವಾಗಲಿದೆ.

ವಿಶ್ವದ ನಾನಾ ಕಡೆಗಳಿಂದ ಒಟ್ಟೂ 1100 ಫೋಟೋಗಳು ಸ್ಪರ್ಧೆಯಲ್ಲಿದ್ದವು. ಈ ಪೈಕಿ 70 ಚಿತ್ರಗಳನ್ನು ಶಾರ್ಟ್​ಲಿಸ್ಟ್​ ಮಾಡಲಾಗಿತ್ತು. ಈ ಪೈಕಿ WMOನ ಜ್ಯೂರಿಗಳು 13 ಫೋಟೊಗಳನ್ನು ಆಯ್ಕೆ ಮಾಡಿದ್ದರು. ಇದರಲ್ಲಿ ಶ್ರವಣ್​ ಅಯ್ಯರ್​ ಕ್ಲಿಕ್ಕಿಸಿದ ಫೋಟೊ ಕೂಡ ಇದೆ.

ಸ್ಥಳೀಯರೊಂದಿಗೆ ಹವ್ಯಾಸಿ ಛಾಯಾಗ್ರಾಹಕ ಶ್ರವಣ್

ಆಫ್ರಿಕಾದ ದ್ವೀಪ ರಾಷ್ಟ್ರ ಮಡಗಾಸ್ಕರ್​ನ ಮಳೆಗಾಲದ ಸಮಯದಲ್ಲಿ ನಾನು ಈ ಫೋಟೊ ಕ್ಲಿಕ್​ ಮಾಡಿದ್ದೇನೆ. ಈ ಭಾಗದಲ್ಲಿ ಇತ್ತೀಚೆಗೆ ತಾಪಮಾನ ಹೆಚ್ಚುತ್ತಿದೆ. ಈ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ ಶರವಣ್.

ಮಡಗಾಸ್ಕರ್​ ಅಲ್ಲದೆ, ಭೂತಾನ್​, ಕಪಾನ್​ನ ಪೂರ್ವ ಕರಾವಳಿ, ಸಿಂಗಾಪುರ, ಮಲೇಷಿಯಾ, ಥೈಲೆಂಡ್​, ಶ್ರೀಲಂಕಾ ಭಾರತ ಹಾಗೂ ಅಮೆರಿಕದಲ್ಲೂ ಇವರು ಫೋಟೋಗ್ರಫಿ​ ಮಾಡಿದ್ದಾರೆ.

Forbes ವಿಜ್ಞಾನ ಪ್ರಶಸ್ತಿ 2020: ವಾಣಿಜ್ಯ ಬಾಹ್ಯಾಕಾಶ ಉದ್ಯಮದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಗರಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada