ಶುಭಾಂಶು ಶುಕ್ಲಾ
ನವದೆಹಲಿ, ಜನವರಿ 25: ಅಂತಾರಾಷ್ಟ್ರೀಯ ಸ್ಪೇಸ್ ಸ್ಟೇಷನ್ಗೆ ಪೈಲಟ್ ಆಗಿ ಹೋಗಿ ಬಂದ ಭಾರತದ ಮೊದಲ ಗಗನಯಾತ್ರಿ ಎನಿಸಿರುವ ಶುಭಾಂಶು ಶುಕ್ಲಾ ಅವರಿಗೆ ಸರ್ಕಾರ ಅಶೋಕ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದೆ. ಅಶೋಕ ಚಕ್ರವು ಶಾಂತಿಕಾಲದ ಅತ್ಯುನ್ನತ ಶೌರ್ಯ ಪ್ರಶಸ್ತಿ ಎನಿಸಿದೆ. ಭಾರತೀಯ ವಾಯು ಪಡೆಯ ಗ್ರೂಪ್ ಕ್ಯಾಪ್ಟನ್ ಆಗಿರುವ ಶುಭಾಂಶು ಅವರು ಇಸ್ರೋ ವತಿಯಿಂದ ಗಗನಯಾತ್ರಿಯಾಗಿ ಸ್ಪೇಸ್ಎಕ್ಸ್ನ ಡ್ರಾಗಾನ್ ಗಗನನೌಕೆ ಮೂಲಕ ಐಎಸ್ಎಸ್ ತಲುಪಿದ್ದರು.
ಶುಭಾಂಶು ಶುಕ್ಲಾ ಅವರಿಗೆ ನಾಳೆ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಶೋಕ ಚಕ್ರ ಪ್ರಶಸ್ತಿ ದಯಪಾಲಿಸಲಿದ್ದಾರೆ. ಶುಭಾಂಶುವೂ ಸೇರಿದಂತೆ ಒಟ್ಟು 70 ಮಂದಿಯನ್ನು ಶೌರ್ಯ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ಆರು ಮಂದಿಗೆ ಮರಣೋತ್ತರ ಪ್ರಶಸ್ತಿಗಳು ಸಿಗಲಿವೆ. ಈ 70 ಗ್ಯಾಲಂಟ್ರಿ ಅವಾರ್ಡ್ಗಳಲ್ಲಿ ಒಂದು ಅಶೋಕ ಚಕ್ರ, 3 ಕೀರ್ತಿ ಚಕ್ರ, 13 ಶೌರ್ಯ ಚಕ್ರ, 1 ಬಾರ್ ಟು ಸೇನಾ ಮೆಡಲ್ ಮತ್ತು 44 ಸೇನಾ ಮೆಡಲ್ಗಳು ಸೇರಿವೆ.
ಇದನ್ನೂ ಓದಿ: Padma Awards 2026: ಪದ್ಮ ಪ್ರಶಸ್ತಿಗೆ ಯಾರೆಲ್ಲ ಭಾಜನ? ಇಲ್ಲಿದೆ ಮಾಹಿತಿ
2026ರ ಗಣರಾಜ್ಯೋತ್ಸವದಂದು 70 ಶೌರ್ಯ ಪ್ರಶಸ್ತಿಗಳ ಪಟ್ಟಿ
ಅಶೋಕ ಚಕ್ರ
- ವಾಯುಪಡೆ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ
ಕೀರ್ತಿ ಚಕ್ರ
- ಮೇಜರ್ ಅರ್ಶದೀಪ್ ಸಿಂಗ್
- ನಯೀಬ್ ಸುಬೇದಾರ್ ದೋಲೇಶ್ವರ್ ಸುಬ್ಬ
- ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್
ಶೌರ್ಯ ಚಕ್ರ
- ಲೆಫ್ಟಿನೆಂಟ್ ಕರ್ನಲ್ ಘಟಗೆ ಆದಿತ್ಯ ಶ್ರೀಕುಮಾರ್
- ಮೇಜರ್ ಅನ್ಶುಲ್ ಬಲ್ಟೂ
- ಮೇಜರ್ ಶಿವಕಾಂತ್ ಯಾದವ್
- ಮೇಜರ್ ವಿವೇಕ್
- ಮೇಜರ್ ಲೇಶಾಂಗದೆಮ್ ದೀಪಕ್ ಸಿಂಗ್
- ಕ್ಯಾಪ್ಟನ್ ಯೋಗೇಂದರ್ ಸಿಂಗ್ ಠಾಕೂರ್
- ಸುಬೇದಾರ್ ಪಿ ಎಚ್ ಮೋಸಸ್
- ಲ್ಯಾನ್ಸ್ ದಫಾದರ್ ಬಲದೇವ್ ಚಂದ್ (ಮರಣೋತ್ತರ)
- ರೈಫಲ್ಮ್ಯಾನ್ ಮಂಗಲಮ್ ಸ್ಯಾಂಗ್ ವೈಫೇ
- ರೈಫಲ್ಮ್ಯಾನ್ ಧುರ್ಬ ಜ್ಯೋತಿ ದತ್ತ
- ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ
- ಲೆಫ್ಟಿನೆಂಟ್ ಕಮಾಂಡರ್ ರೂಪಾ ಎ
- ಅಸಿಸ್ಟೆಂಟ್ ಕಮಾಂಡೆಂಟ್ ವಿಪಿನ್ ವಿಲ್ಸನ್
ಬಾರ್ ಟು ಸೇನಾ ಮೆಡಲ್
- ಲ್ಯಾನ್ಸ್ ಹವೀಲ್ದಾರ್ ಸತ್ಯ ಪಾಲ್ ಸಿಂಗ್
ಇದನ್ನೂ ಓದಿ: ವೀರ ಪ್ರಶಸ್ತಿ ವಿಜೇತರಿಂದ ಹಿಡಿದು ಸ್ತಬ್ಧಚಿತ್ರಗಳ ಮೆರವಣಿಗೆ, ಈ ಬಾರಿಯ ರಿಪಬ್ಲಿಕ್ ಪೆರೇಡ್ ಅದ್ಭುತ
ಸೇನಾ ಮೆಡಲ್
- ಕರ್ನಲ್ ಅಮಿತ್ ದಾಧವಾಲ್
- ಲೆಫ್ಟಿನೆಂಟ್ ಕರ್ನಲ್ ಮೂಡಿಗೆರೆ ರಾಜಗೋಪಾಲ್ ಸುಹಾಸ್
- ಲೆಫ್ಟಿನೆಂಟ್ ಕರ್ನಲ್ ಪ್ರದೀಪ್ ಶೌರ್ಯ ಆರ್ಯ
- ಮೇಜರ್ ಕುಲಬೀರ್ ಸಿಂಗ್ ಮೋಹನ್
- ಮೇಜರ್ ಅನೀಶ್ ಚಂದ್ರನ್ ಸಿ
- ಮೇಜರ್ ಚರಣ್ಜೀತ್ ಸಿಂಗ್
- ಮೇಜರ್ ನಾಗವಿಗ್ನೇಶ್ ಕೆ.ಎ.
- ಮೇಜರ್ ರೋಹಿತ್ ಕುಮಾರ್
- ಮೇಜರ್ ಶಿವಪ್ರಸಾದ್ ಕೆ
- ಮೇಜರ್ ಅಕ್ಷಯ್ ಆನಂದ್
- ಮೇಜರ್ ಸಿ ಸಾಯಿ ವಿವೇಕ್
- ಮೇಜರ್ ವಿಶ್ವ ಪ್ರಕಾಶ್ ದುಬೇ
- ಮೇಜರ್ ರೋಹಿತ್ ಕುಮಾರ್
- ಮೇಜರ್ ರವಿ ಕುಮಾರ್ ಸಿಂಗ್
- ಮೇಜರ್ ತುಷಾರ್ ನಾಗ್ರೇಕ್
- ಕ್ಯಾಪ್ಟನ್ ಅಜಿಂಕ್ಯ ಪಂಡಿತ್ ಕಣಸೆ
- ಕ್ಯಾಪ್ಟನ್ ಜಗದೀಪ್ ನಾರಾಯಣ್
- ಕ್ಯಾಪ್ಟನ್ ಪ್ರಭಾತ್ ಕುಮಾರ್ ಸಿಂಗ್
- ಕ್ಯಾಪ್ಟನ್ ಗುರಶರಣ್ ಸಿಂಗ್
- ಸುಬೇದಾರ್ ಧರಂವೀರ್ (ಮರಣೋತ್ತರ)
- ಸುಬೇದಾರ್ ರಾಜ್ ಕುಮಾರ್ ಮಂಝಿ
- ಸುಬೇದಾರ್ ಗೋಪಾಲ್ ಸಿಂಗ್
- ಸುಬೇದಾರ್ ಕುಲದೀಪ್ ಸಿಂಗ್ (ಮರಣೋತ್ತರ)
- ಸುಬೇದಾರ್ ಶಮಸ್ ದಿನ್
- ನಯೀಬ್ ಸುಬೇದಾರ್ ಮೊಹಮದ್ ಇಕ್ಬಾಲ್ ತೀಲಿ
- ನಯೀಬ್ ಸುಬೇದಾರ್ ಪವನ್ ಕುಮಾರ್
- ನಯೀಬ್ ಸುಬೇದಾರ್ ಸರಿಫುಲ್ ಮಂಡಲ್
- ನಯೀಬ್ ರಿಸಾಲ್ದಾರ್ ರಾಣ ಪ್ರತಾಪ್ ಸಿಂಗ್
- ಹವೀಲ್ದಾರ್ ಝಂಟು ಅಲಿ ಶೇಖ್ (ಮರಣೋತ್ತರ)
- ಹವೀಲ್ದಾರ್ ಆನಂದ್ ಸುಮನ್ ರಾಣಾ
- ಹವೀಲ್ದಾರ್ ಮಕ್ಸೂದ್ ದೀನ್
- ಹವೀಲ್ದಾರ್ ಪೂರನ್ ಸಿಂಗ್ ಖರಾಯತ್
- ಹವೀಲ್ದಾರ್ ಮೊಹಮ್ಮದ್ ಸರೋಜ್ ಖಾನ್
- ಹವೀಲ್ದಾರ್ ಯಾಂಗ್ ದೋರ್ಜೀ ಲಾಮಾ
- ಲ್ಯಾನ್ಸ್ ದಫಾದಾರ್ ಭಾರವಾದ್ ಮೆಹುಲ್ಭಾಯ್ ಮೆಪಾಭಾಯ್ (ಮರಣೋತ್ತರ)
- ನಾಯ್ಕ್ ರಂಜಯ್ ಕುಮಾರ್
- ಲ್ಯಾನ್ಸ್ ನಾಯ್ಕ್ ಅಶೋಕ್ ಕುಮಾರ್ ಭಿಂದರ್
- ಸಿಪಾಯ್ ಶಬೀರ್ ಅಹ್ಮದ್
- ಸಿಪಾಯ್ ಗ್ಯಾಕಾರ್ ಸಂದೀಪ್ ಪಾಂಡುರಂಗ್ (ಮರಣೋತ್ತರ)
- ಸಿಪಾಯಿ ಕದಾವೋಹುಮ್ ಬೆಲ್ಲಾಯ್
- ರೈಫಲ್ಮ್ಯಾನ್ ವಾಯಿಕೋಂ ಮೋಹನ್ ಸಿಂಗ್
- ರೈಫಲ್ಮ್ಯಾನ್ ತಂಗ್ಗೋಲುನ್ ಸಿಂಗ್ಸನ್
- ಪ್ಯಾರಟ್ರೂಪರ್ ಬ್ರಿಂಗರ್ ಎಚ್ಕೆ
- ಪ್ಯಾರಾಟ್ರೂಪರ್ ದೀಪ್ಚಂದ್ ಕರಗ್ವಾಲ್
ನೌಕಾ ಸೇನಾ ಮೆಡಲ್
- ಕಮಾಂಡರ್ ನರದೀಪ್ ಸಿಂಗ್
- ಲೆಫ್ಟಿನೆಂಟ್ ಕಮಾಂಡರ್ ರಿಷಭ್ ಪುರ್ಬಿಯಾ
- ಕಮಾಂಡರ್ ರಾಜೇಶ್ವರ್ ಕುಮಾರ್ ಶರ್ಮಾ
- ಲೆಫ್ಟಿನೆಂಟ್ ಕಮಾಂಡರ್ ಪ್ರಶಾಂತ್ ರಾಜ್
- ಕಮಾಂಡರ್ ಹರಪ್ರೀತ್ ಸಿಂಗ್
- ಕ್ಯಾಪ್ಟನ್ ಪಿಯೂಶ್ ಕಟಿಯಾರ್
ವಾಯು ಸೇನಾ ಮೆಡಲ್
- ವಿಂಗ್ ಕಮಾಂಡರ್ ಶೋಭಿತ್ ವ್ಯಾಸ್
- ಜೂನಿಯರ್ ವಾರಂಟ್ ಆಫೀಸರ್ ಕೃಪಾಲ್ ಸಿಂಗ್ ಸಲಾರಿಯಾ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ