ಸಿಯಾಚಿನ್​ನಲ್ಲಿ ಹಿಮಕುಸಿತ: ಇಬ್ಬರು ನಾಗರಿಕರು, ನಾಲ್ವರು ಯೋಧರು ಹುತಾತ್ಮ

ದೆಹಲಿ: ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್​ನಲ್ಲಿ ಹಿಮದಡಿ ಸಿಲುಕಿದ್ದ 6 ಯೋಧರು ಹುತಾತ್ಮರಾಗಿದ್ದಾರೆ. ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್​ನ ಉತ್ತರ ಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಭಾರೀ ಹಿಮಪಾತವಾಗಿತ್ತು. ಹಿಮದಡಿ 8 ಯೋಧರು ಸಿಲುಕಿಕೊಂಡಿದ್ದರು. ಎಲ್ಲ 8 ಜನರನ್ನು ಹಿಮಪಾತದಿಂದ ಭಾರತೀಯ ಸೇನೆ ಹೊರ ತೆಗೆದಿತ್ತು. ಆದ್ರೆ, ಹಿಮ ಕೊರೆತದಿಂದಾಗಿ 8 ಮಂದಿಯಲ್ಲಿ ಇಬ್ಬರು ಹಮಾಲಿಗಳ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಳಿದ ಇಬ್ಬರು ಯೋಧರಿಗೆ ಹತ್ತಿರದ ಸೇನಾ […]

ಸಿಯಾಚಿನ್​ನಲ್ಲಿ ಹಿಮಕುಸಿತ: ಇಬ್ಬರು ನಾಗರಿಕರು, ನಾಲ್ವರು ಯೋಧರು ಹುತಾತ್ಮ
ಸಾಧು ಶ್ರೀನಾಥ್​

Updated on: Nov 18, 2019 | 11:14 PM

ದೆಹಲಿ: ಕಾರಾಕೋರಂ ಪರ್ವತ ಶ್ರೇಣಿಯಲ್ಲಿರುವ ಸಿಯಾಚಿನ್​ನಲ್ಲಿ ಹಿಮದಡಿ ಸಿಲುಕಿದ್ದ 6 ಯೋಧರು ಹುತಾತ್ಮರಾಗಿದ್ದಾರೆ.

ಸಮುದ್ರ ಮಟ್ಟದಿಂದ 18 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್​ನ ಉತ್ತರ ಭಾಗದಲ್ಲಿ ಇಂದು ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಭಾರೀ ಹಿಮಪಾತವಾಗಿತ್ತು. ಹಿಮದಡಿ 8 ಯೋಧರು ಸಿಲುಕಿಕೊಂಡಿದ್ದರು. ಎಲ್ಲ 8 ಜನರನ್ನು ಹಿಮಪಾತದಿಂದ ಭಾರತೀಯ ಸೇನೆ ಹೊರ ತೆಗೆದಿತ್ತು. ಆದ್ರೆ, ಹಿಮ ಕೊರೆತದಿಂದಾಗಿ 8 ಮಂದಿಯಲ್ಲಿ ಇಬ್ಬರು ಹಮಾಲಿಗಳ ಮತ್ತು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಉಳಿದ ಇಬ್ಬರು ಯೋಧರಿಗೆ ಹತ್ತಿರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us