ಕೊರೊನಾ ಲಸಿಕೆ ಉಚಿತವಾಗಿ ನೀಡಬೇಕು; ಪ್ರಧಾನಿಗೆ ಪತ್ರ ಬರೆದ ಸಿದ್ದರಾಮಯ್ಯ
ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೊವಿಡ್ ಲಸಿಕೆಗೆ ₹250 ಶುಲ್ಕ ನಿಗದಿಪಡಿಸಿರುವುದರಿಂದಾಗಿ ಶೇಕಡಾ 70 ರಷ್ಟಿರುವ ಬಡ ಜನತೆ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕೊವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ. ಈಗಾಗಲೇ ಭಾರತ ಎರಡು ಬಗೆಯ ಕೊವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ.
ಬೆಂಗಳೂರು: ಕೊರೊನಾ ಲಸಿಕೆ ವಿಚಾರವಾಗಿ ಧ್ವನಿ ಎತ್ತಿರುವ ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊರೊನಾ ಲಸಿಕೆ ಹಂಚಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಿಧಾನಗತಿಯಲ್ಲಿ ಸಾಗುತ್ತಿರುವ ಕೊರೊನಾ ಲಸಿಕೆ ಹಂಚಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಭಾರತದಲ್ಲಿ ಎರಡು ಲಸಿಕೆಗಳನ್ನು ಕಂಡು ಹಿಡಿಯಲಾಗಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಅವು ಜನರನ್ನು ತಲುಪದೇ ಇರುವುದು ವಿಷಾದನೀಯ ಎಂದಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದ ಫೋಟೋವನ್ನೂ ಹಂಚಿಕೊಂಡಿರುವ ಸಿದ್ದರಾಮಯ್ಯ, ಪತ್ರದಲ್ಲಿರುವ ವಿಷಯದ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ವ್ಯವಸ್ಥೆ ಕಲ್ಪಿಸಬೇಕು. ಕೊವಿಡ್ ಚಿಕಿತ್ಸೆ ಮತ್ತು ಲಸಿಕೆ ನಿಯಂತ್ರಣಕ್ಕಾಗಿಯೇ ಪಿ.ಎಂ ಕೇರ್ಸ್ ನಿಧಿಗೆ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಆ ನಿಧಿಯನ್ನು ಕೊವಿಡ್ ಲಸಿಕೆಯ ಉಚಿತ ವಿತರಣೆಗೆ ಬಳಸಬೇಕು ಎಂದು ಆಗ್ರಹಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೊವಿಡ್ ಲಸಿಕೆಗೆ ₹250 ಶುಲ್ಕ ನಿಗದಿಪಡಿಸಿರುವುದರಿಂದಾಗಿ ಶೇಕಡಾ 70 ರಷ್ಟಿರುವ ಬಡ ಜನತೆ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕೊವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ. ಈಗಾಗಲೇ ಭಾರತ ಎರಡು ಬಗೆಯ ಕೊವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಇಲ್ಲಿನ ವರೆಗೆ ಶೇಕಡಾ 0.5 ರಷ್ಟು ಜನಸಂಖ್ಯೆಗಷ್ಟೇ ಲಸಿಕೆ ನೀಡಿರುವುದು ವಿಷಾದನೀಯ ಬೆಳವಣಿಗೆ. ಇತ್ತೀಚೆಗೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಅನಾಹುತವಾದೀತು, ಎಚ್ಚರ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
My letter to @PMOIndia Shri. @narendramodi urging him to ensure that #Covid19 vaccine is administered free for everyone.
It is absolutely necessary to make it universally accessible for the nation to fight against the pandemic. pic.twitter.com/3v6lRZbxYU
— Siddaramaiah (@siddaramaiah) March 5, 2021
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲಿಯೂ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಲು ಪ್ರಧಾನಿ @narendramodi ಅವರು ವ್ಯವಸ್ಥೆ ಕಲ್ಪಿಸಬೇಕು. ಕೋವಿಡ್ ಚಿಕಿತ್ಸೆ ಮತ್ತು ಲಸಿಕೆ ನಿಯಂತ್ರಣಕ್ಕಾಗಿಯೇ ಪಿ.ಎಂ ಕೇರ್ಸ್ ನಿಧಿಗೆ ಕೇಂದ್ರ ಸರ್ಕಾರ ಹಣ ಸಂಗ್ರಹಿಸಿದೆ. ಆ ನಿಧಿಯನ್ನು ಕೋವಿಡ್ ಲಸಿಕೆಯ ಉಚಿತ ವಿತರಣೆಗೆ ಬಳಸಬೇಕು. 1/4 pic.twitter.com/V2h33bJVAS
— Siddaramaiah (@siddaramaiah) March 5, 2021
ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಕೋವಿಡ್ ಲಸಿಕೆಗೆ ರೂ.250 ಶುಲ್ಕ ನಿಗದಿಪಡಿಸಿರುವುದರಿಂದಾಗಿ ಶೇಕಡಾ 70 ರಷ್ಟಿರುವ ಬಡಜನತೆ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕೋವಿಡ್ ವಿರುದ್ಧದ ಸಮರಕ್ಕೆ ಹಿನ್ನಡೆಯಾಗಿದೆ. 2/4
— Siddaramaiah (@siddaramaiah) March 5, 2021
ಈಗಾಗಲೇ ಭಾರತ ಎರಡು ಬಗೆಯ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿದಿದ್ದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ದೇಶದಲ್ಲಿ ಇಲ್ಲಿನ ವರೆಗೆ ಶೇಕಡ 0.5 ರಷ್ಟು ಜನಸಂಖ್ಯೆಗಷ್ಟೆ ಲಸಿಕೆ ನೀಡಿರುವುದು ವಿಷಾದನೀಯ ಬೆಳವಣಿಗೆ. 3/4
— Siddaramaiah (@siddaramaiah) March 5, 2021
ಇತ್ತೀಚೆಗೆ ಕೊರೊನಾ ಸೋಂಕು ಉಲ್ಭಣಗೊಳ್ಳುತ್ತಿರುವುದು ಕಳವಳಕಾರಿ ಬೆಳವಣಿಗೆ. ಈ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿದರೆ ಅನಾಹುತವಾದೀತು, ಎಚ್ಚರ. 4/4 pic.twitter.com/p3R3WziL3w
— Siddaramaiah (@siddaramaiah) March 5, 2021
ಇದನ್ನೂ ಓದಿ: ‘ದೇಶದ ಕಂಪನಿಗಳಿಗೆ ಜಾಗತಿಕವಾಗಿ ಬೆಳೆಯಲು ಸಹಕಾರ ನೀಡಲು ಹಗಲಿರುಳು ಶ್ರಮಿಸುತ್ತಿದ್ದೇವೆ’; ಪ್ರಧಾನಿ ನರೇಂದ್ರ ಮೋದಿ
ವಿಧಾನಸೌಧ ಯಡಿಯೂರಪ್ಪಂದು ಅಲ್ಲ, ಕಾಗೇರಿದೂ ಅಲ್ಲ; ಶಾಸಕ ಸಂಗಮೇಶ್ರನ್ನು ಹೌಸ್ ಒಳಗೆ ಬಿಡ್ರಿ: ಸಿದ್ದರಾಮಯ್ಯ ಗುಡುಗು