ಪಂಜಾಬ್: ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ಪಂಜಾಬ್ ನ್ಯಾಯಾಲಯವು (Punjab Court) ಏಳು ದಿನಗಳ ಜೈಲು ಶಿಕ್ಷೆಯನ್ನು ನೀಡಿದೆ. ಹೈ ಪ್ರೊಫೈಲ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗ್ಯಾಂಗ್‌ಸ್ಟರ್ ಬಿಷ್ಣೋಯ್‌ಗೆ ಪೊಲೀಸರಿಂದ ಭಾರೀ ಬಿಗಿ ಬಂದೋಬಸ್ತ್ ನೀಡಲಾಗಿದೆ. ಬಿಗಿ ಭದ್ರತೆಯ ನಡುವೆ ಆತನನ್ನು ಮಾನ್ಸಾದಿಂದ ಮೊಹಾಲಿಗೆ ಸಾಗಿಸಲಾಗುತ್ತಿದೆ. ಕುಖ್ಯಾತ ಗ್ಯಾಂಗ್‌ಸ್ಟರ್ ಆಗಿರುವ ಲಾರೆನ್ಸ್ ಬಿಷ್ಣೋಯ್ನನ್ನು (Lawrence Bishnoi) ಬುಲೆಟ್ ಪ್ರೂಫ್ ವಾಹನದಲ್ಲಿ ಸ್ಥಳಾಂತರಿಸಲಾಗುತ್ತಿದೆ. 24ಕ್ಕೂ ಹೆಚ್ಚು ಬೆಂಗಾವಲು ಪಡೆಯ ವಾಹನಗಳನ್ನು ನಿಯೋಜಿಸಲಾಗಿದ್ದು, 100 ಪೊಲೀಸರು ಆತನಿಗೆ ಸೆಕ್ಯುರಿಟಿ ನೀಡುತ್ತಿದ್ದಾರೆ.
ಮೊಹಾಲಿಯಲ್ಲಿ ಪಂಜಾಬ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಗ್ಯಾಂಗ್‌ಸ್ಟರ್ ವಿರುದ್ಧದ ಕಾರ್ಯಪಡೆ ಮತ್ತು ಇತರ ಏಜೆನ್ಸಿಗಳು ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆಯಲ್ಲಿ ಬಿಷ್ಣೋಯ್ ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸುತ್ತಿವೆ. ಪಂಜಾಬ್ ಪೊಲೀಸರು ಲಾರೆನ್ಸ್ ಬಿಷ್ಣೋಯ್ನನ್ನು ಇಂದು ಮುಂಜಾನೆ ಮಾನಸಾ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ: Sidhu Moosewala murder ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಸೆಲ್ಫಿ ಕ್ಲಿಕ್ಕಿಸಿದ್ದ ಅಭಿಮಾನಿ ಸೇರಿ 8 ಮಂದಿ ಬಂಧನ
ಮುಖ್ಯಮಂತ್ರಿಯ ನಿರ್ದೇಶನದ ಮೇರೆಗೆ ಪಂಜಾಬ್‌ನ ಅಡ್ವೊಕೇಟ್ ಜನರಲ್ ಸ್ವತಃ ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರಾಗಿ ರಿಮಾಂಡ್‌ಗೆ ಒತ್ತಾಯಿಸಿದ್ದಾರೆ. ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯು ಲಾರೆನ್ಸ್ ಬಿಷ್ಣೋಯ್ನನ್ನು ಬಂಧಿಸಲು ನ್ಯಾಯಾಲಯದ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದು, ಆತನ ವಿರುದ್ಧ ಸ್ಥಳೀಯ ಮಾನ್ಸಾ ನ್ಯಾಯಾಲಯ ಈಗಾಗಲೇ ಬಂಧನ ವಾರಂಟ್ ಹೊರಡಿಸಿದೆ.
#WATCH | Punjab police bring gangster Lawrence Bishnoi to Mansa district, Punjab
He will be presented before Chief Judicial Magistrate in Mansa court in connection with Sidhu Moose Wala murder case today. pic.twitter.com/bhO7KGT8sO
— ANI (@ANI) June 14, 2022
ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರು ಕೇಳಿಬಂದ ನಂತರ ಲಾರೆನ್ಸ್ ಬಿಷ್ಣೋಯ್ ಅವರ ವಕೀಲರು ದೆಹಲಿಯ ಪಟಿಯಾಲಾ ನ್ಯಾಯಾಲಯದಲ್ಲಿ ಜೈಲಿನಲ್ಲಿರುವ ದರೋಡೆಕೋರರಿಗೆ ಭದ್ರತೆಯನ್ನು ಹೆಚ್ಚಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಲಾರೆನ್ಸ್ ಬಿಷ್ಣೋಯ್ನನ್ನು ಪೊಲೀಸರು ನಕಲಿ ಎನ್ಕೌಂಟರ್ನಲ್ಲಿ ಕೊಲ್ಲಬಹುದು ಅಥವಾ ಆತನ ಎದುರಾಳಿ ಗ್ಯಾಂಗ್ ಆತನ ಮೇಲೆ ದಾಳಿ ನಡೆಸಬಹುದು ಎಂದು ವಕೀಲರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:44 am, Wed, 15 June 22