‘ನನ್ನ ಫೋನ್​ ಹ್ಯಾಕ್ ಆಗಿದೆ..ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಗಂಭೀರ ಸಂದರ್ಭವಿದೆ’-ಮಮತಾ ಬ್ಯಾನರ್ಜಿ

| Updated By: Lakshmi Hegde

Updated on: Jul 28, 2021 | 4:43 PM

Mamata Banerjee: ಬಿಜೆಪಿ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಾಗಬೇಕು ಎಂದು ಮಮತಾ ಬ್ಯಾನರ್ಜಿ ಕರೆ ಕೊಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷಗಳು ಒಂದಾಗಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ನನ್ನ ಫೋನ್​ ಹ್ಯಾಕ್ ಆಗಿದೆ..ದೇಶದಲ್ಲಿ ತುರ್ತು ಪರಿಸ್ಥಿತಿಗಿಂತಲೂ ಗಂಭೀರ ಸಂದರ್ಭವಿದೆ’-ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಇಂದು ಪೆಗಾಸಸ್​ ಸ್ಪೈವೇರ್ (Pegasus Spyware)​ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಕಟುವಾಗಿ ಟೀಕೆ ಮಾಡಿದ್ದಾರೆ. ದೇಶದಲ್ಲಿ ಪ್ರಸ್ತುತ ತುರ್ತು ಪರಿಸ್ಥಿತಿ (Emergency) ಗಿಂತಲೂ ಗಂಭೀರವಾದ ಸನ್ನಿವೇಶವಿದೆ ಎಂದು ಹೇಳಿದ್ದಾರೆ. ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್​ ಇತರರನ್ನು ಭೇಟಿಯಾದ ನಂತರ ಮಾತನಾಡಿದ ಅವರು, ಪೆಗಾಸಸ್​ ಎಂದರೆ ಏನು? ಇದೊಂದು ಅತಿದೊಡ್ಡ ವೈರಸ್​ ಆಗಿದೆ. ನಮ್ಮ ಸುರಕ್ಷತೆ ಮತ್ತು ಭದ್ರತೆಗಳೆಲ್ಲ ಅಪಾಯದಲ್ಲಿವೆ. ಇಲ್ಲಿ ಯಾರಿಗೂ ಸ್ವಾತಂತ್ರ್ಯವಿಲ್ಲ ಎಂದಿದ್ದಾರೆ.

ನನ್ನ ಫೋನ್ ಹ್ಯಾಕ್​ ಆಗಿದೆ..ಅಭಿಷೇಕ್ ಬ್ಯಾನರ್ಜಿ, ಪ್ರಶಾಂತ್​ ಕಿಶೋರ್​ ಫೋನ್ ಹ್ಯಾಕ್​ ಆಗಿ ತುಂಬ ದಿನಗಳಾಯಿತು. ಈಗ ಎದುರಾಗಿರುವುದು ಜೀವನ, ಆಸ್ತಿ ಮತ್ತು ಭದ್ರತೆಗೆ ಸಂಬಂಧಪಟ್ಟ ಗಂಭೀರ ವಿಚಾರವಾಗಿದೆ. ಇದರಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡಬೇಕು. ಪೆಗಾಸಸ್​ ಸ್ಪೈವೇರ್​ ಬಗ್ಗೆ ಸುಪ್ರೀಂಕೋರ್ಟ್​ ಉಸ್ತುವಾರಿಯಲ್ಲಿ ವಿಚಾರಣೆಯಾಗಬೇಕು ಎಂದು ಹೇಳಿದರು.
ಹಾಗೇ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಾಗಬೇಕು ಎಂದು ಮಮತಾ ಬ್ಯಾನರ್ಜಿ ಕರೆ ಕೊಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ಮುಂಬರುವ ದಿನಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪಕ್ಷಗಳು ಒಂದಾಗಬೇಕು. ಕಾಲಕಾಲಕ್ಕೆ ಒಂದಾಗಿ ಸೇರಿ ಸಭೆ ನಡೆಸಿ, ಚರ್ಚೆ ನಡೆಸಬೇಕು. ಸಂಸತ್ತಿನ ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ.

ಇಂದು ನಾನು ಸೊನಿಯಾ ಗಾಂಧಿ, ಅರವಿಂದ್​ ಕೇಜ್ರಿವಾಲ್​ರನ್ನು ಭೇಟಿಯಾಗಿದ್ದೇನೆ. ನಿನ್ನೆ ಲಾಲೂ ಪ್ರಸಾದ್ ಯಾದವ್​ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಹೀಗೆ ಪ್ರತಿದಿನ ಒಬ್ಬೊಬ್ಬರನ್ನು ಭೇಟಿಯಾಗುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಬಿಜೆಪಿ ವಿರುದ್ಧ ಒಂದಾಗುವ ಪ್ರತಿಪಕ್ಷಗಳ ನಾಯಕರಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ರಾಜಕೀಯ ಭವಿಷ್ಯ ಹೇಳುವ ಜ್ಯೋತಿಷಿ ಅಲ್ಲ. ಅದೆಲ್ಲ ಕಾಲಕ್ಕೆ ತಕ್ಕಂತೆ, ಸನ್ನಿವೇಶ, ವ್ಯವಸ್ಥೆ ಮೇಲೆ ಅವಲಂಬಿತವಾಗಿರುತ್ತದೆ. ಆ ಸ್ಥಾನವನ್ನು ಇನ್ಯಾರೇ ನಿಭಾಯಿಸಿದರೂ ನನಗೆ ಸಮಸ್ಯೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮತ್ತು ಸೋನಿಯಾ ಗಾಂಧಿ ನಡುವೆ ಮಹತ್ವದ ಭೇಟಿ, ಸಂಯುಕ್ತ ವಿರೋಧ ಪಕ್ಷ ರಚನೆ ಕುರಿತು ನಡೆಯಲಿದೆ ಚರ್ಚೆ

Karnataka Politics: ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಬೆನ್ನಲ್ಲೇ ಸಂಪುಟ ಸೇರಲು ಶಾಸಕರ ಪ್ರಯತ್ನ ಶುರು