Karnataka Politics: ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಬೆನ್ನಲ್ಲೇ ಸಂಪುಟ ಸೇರಲು ಶಾಸಕರ ಪ್ರಯತ್ನ ಶುರು

Karnataka Politics: ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಬೆನ್ನಲ್ಲೇ ಸಂಪುಟ ಸೇರಲು ಶಾಸಕರ ಪ್ರಯತ್ನ ಶುರು
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಬೆನ್ನಲ್ಲೇ ಸಂಪುಟ ಸೇರಲು ಶಾಸಕರ ಭಾರಿ ಪ್ರಯತ್ನ ಕಂಡುಬಂದಿದೆ. ಹಲವು ಶಾಸಕರು ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ. ಶಾಸಕ ಎಂ.ಪಿ ಕುಮಾರಸ್ವಾಮಿ ತಮಗೆ ಸಚಿವ ಸ್ಥಾನದ ಆಕಾಂಕ್ಷೆ ಇದೆ ಎಂದು ಹೇಳಿಕೊಂಡಿದ್ದಾರೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದೆನೆ. ಹೈಕಮಾಂಡ್ ನನಗೆ ಈ ಬಾರಿ ಅವಕಾಶ ಕೊಡುತ್ತದೆ ಎಂದು‌ ಭರವಸೆ ಇದೆ ಎಂದು ಅವರು ಹೇಳಿದ್ದಾರೆ. ಯಾವುದೇ ಖಾತೆ ಕೊಟ್ಟರೂ ನಾನು ಸಮರ್ಥವಾಗಿ ನಿಭಾಯಿಸಲು ಸಿದ್ದನಾಗಿದ್ದೇನೆ. […]

TV9kannada Web Team

| Edited By: ganapathi bhat

Jul 28, 2021 | 5:41 PM

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಬೆನ್ನಲ್ಲೇ ಸಂಪುಟ ಸೇರಲು ಶಾಸಕರ ಭಾರಿ ಪ್ರಯತ್ನ ಕಂಡುಬಂದಿದೆ. ಹಲವು ಶಾಸಕರು ಸಚಿವ ಸ್ಥಾನದ ಇಂಗಿತ ವ್ಯಕ್ತಪಡಿಸಿದ್ದಾರೆ. ಶಾಸಕ ಎಂ.ಪಿ ಕುಮಾರಸ್ವಾಮಿ ತಮಗೆ ಸಚಿವ ಸ್ಥಾನದ ಆಕಾಂಕ್ಷೆ ಇದೆ ಎಂದು ಹೇಳಿಕೊಂಡಿದ್ದಾರೆ. ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದೆನೆ. ಹೈಕಮಾಂಡ್ ನನಗೆ ಈ ಬಾರಿ ಅವಕಾಶ ಕೊಡುತ್ತದೆ ಎಂದು‌ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ಯಾವುದೇ ಖಾತೆ ಕೊಟ್ಟರೂ ನಾನು ಸಮರ್ಥವಾಗಿ ನಿಭಾಯಿಸಲು ಸಿದ್ದನಾಗಿದ್ದೇನೆ. ಮೂರು ಬಾರಿ ಶಾಸಕನಾಗಿದ್ದೆ. ವಿದ್ಯಾವಂತ ಕೂಡ ಇದ್ದೇನೆ. ಹೀಗಾಗಿ ನನಗೆ ಸಂಪುಟ ಸೇರಲು ಅವಕಾಶ ಸಿಗುತ್ತದೆ ಎಂದು ಅಂದುಕೊಂಡಿದ್ದೆನೆ. ಬೊಮ್ಮಯಿ ಸಿಎಂ ಆಗಿರೋದು ತುಂಬಾ ಖುಷಿಯಾಗಿದೆ. ವಿರೋಧಿ ಪಕ್ಷಗಳು ತುಂಬಾ ಪ್ರಬಲವಾಗಿವೆ. ಹೀಗಾಗಿ ಈಗಾಗಲೇ ಬೊಮ್ಮಾಯಿ ಮುಖ್ಯಮಂತ್ರಿ ಆಗಿರೋದು ಉತ್ತಮ ಎಂದು ಎಂಪಿ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಸರ್ಕಾರದಲ್ಲಿ ವಲಸಿಗರಿಗೆ ಯಾವುದೇ ಸಮಸ್ಯೆಯಿಲ್ಲ. ಎಲ್ಲರಿಗೂ ಸಚಿವ ಸ್ಥಾನ ಕೊಡುವ ಭರವಸೆ ನೀಡಿದ್ದಾರೆ. ಎಲ್ಲರಿಗೂ ಪ್ರಾತಿನಿಧ್ಯ ಕೊಡುವುದಾಗಿಯೂ ಹೇಳಿದ್ದಾರೆ. ವರಿಷ್ಠರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ ಎಂದು ಕೆಐಎಬಿಯಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿಕೆ ನೀಡಿದ್ದಾರೆ.

ಶಾಸಕ ನೆಹರು ಓಲೇಕಾರ್​ಗೆ ಸಚಿವ ಸ್ಥಾ‌ನ ನೀಡಲು ಹಾವೇರಿಯಲ್ಲಿ ನೆಹರು ಓಲೇಕಾರ್ ಬೆಂಬಲಿಗರಿಂದ ಒತ್ತಾಯ ಕೇಳಿಬಂದಿದೆ. ಓಲೇಕಾರ್ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ. ಜಿಲ್ಲೆಯವರೇ ಸಿಎಂ ಆಗಿರುವುದರಿಂದ ಸಚಿವ ಸ್ಥಾನ ನೀಡಿ. ಓಲೇಕಾರಗೆ ಸಚಿವ ಸ್ಥಾನ ಕೊಟ್ರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿ ಎಂದು ಬೇಡಿಕೆ ಇಟ್ಟಿದ್ದಾರೆ.

ಮತ್ತೊಂದೆಡೆ ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಕೇಳಿಬಂದಿದೆ. ಈ ಸಂಬಂಧ, ದಾವಣಗೆರೆ ಜಿಲ್ಲೆಯ ಶಾಸಕರ ನಿಯೋಗ ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಆಗಮಿಸಿದೆ. ಸಿಎಂ ಬೊಮ್ಮಾಯಿ ಭೇಟಿಯಾಗಲಿರುವ ಶಾಸಕರು ಬೇಡಿಕೆ ಸಲ್ಲಿಸಲಿದ್ದಾರೆ.

ಕೆಲವರು ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗುತ್ತೆ ಎಂದು ಅಂದುಕೊಂಡಿದ್ದರು. ಈ ಅರಾಜಕತೆಯ ಲಾಭ ಪಡೆಯುವುದಕ್ಕೂ ಸಂಚು ರೂಪಿಸಿದ್ರು. ಆದರೆ ಈಗ ಅವರ ಹಗಲುಗನಸು ಭಗ್ನವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ಈಗ ಅಧಿಕಾರ ಹಸ್ತಾಂತರ ಜತೆಗೆ ಒಳ್ಳೆ ಆಡಳಿತ ನಿರೀಕ್ಷೆಯಿದೆ. ಸಿಎಂ ಬೊಮ್ಮಾಯಿ ಅನುಭವ ಅಭಿವೃದ್ಧಿಗೆ ಸಹಕಾರಿಯಾಗುತ್ತೆ. ಸಚಿವ ಸಂಪುಟ ರಚನೆ ಬಗ್ಗೆ ಸಿಎಂ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಇತ್ತ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಶಾಸಕ ಅರವಿಂದ ಬೆಲ್ಲದ್, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್​ ಭೇಟಿ ಮಾಡಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಆಗಮಿಸಿ ಭೇಟಿ ಮಾಡಿದ್ದಾರೆ.

ಇದನ್ನೂ ಓದಿ: ಸ್ವಕ್ಷೇತ್ರ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುವೆ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಕೇಂದ್ರ 2 ವರ್ಷದಿಂದ ರಾಜ್ಯಕ್ಕೆ ಅನ್ಯಾಯ ಮಾಡ್ತಿದೆ; ಅದರ ವಿರುದ್ಧ ಸೊಲ್ಲೆತ್ತುವ ಧೈರ್ಯ ತೋರಿ -ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಪತ್ರ

(Basavaraj Bommai Karnataka New CM Cabinet Formation Political Competition)

Follow us on

Related Stories

Most Read Stories

Click on your DTH Provider to Add TV9 Kannada