ಸ್ವಕ್ಷೇತ್ರ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುವೆ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ

ಸ್ವಕ್ಷೇತ್ರ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿ ಜತೆಗೆ ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವೆ ಎಂದು ಅಭಿನಂದನಾ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಸ್ವಕ್ಷೇತ್ರ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುವೆ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 28, 2021 | 4:04 PM

ಬೆಂಗಳೂರು: ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮೂಲದ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ನೇಮಕಗೊಳ್ಳುತ್ತಿದ್ದಂತೆ ಅವರ ಸ್ವಕ್ಷೇತ್ರ  ಶಿಗ್ಗಾಂವಿ ಮತ್ತು ಹಾವೇರಿ ಜಿಲ್ಲೆಯಿಂದ ಸಾವಿರಾರು ಅಭಿಮಾನಿಗಳು ಬೆಂಗಳೂರಿಗೆ ಧಾವಿಸಿ ಬಂದಿದ್ದಾರೆ. ಅರಮನೆ ಮೈದಾನಕ್ಕೆ ಆಗಮಿಸಿದ ತಮ್ಮಅಭಿಮಾನಿಗಳು ಮತ್ತು ಬೆಂಬಲಿಗರನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆ ಮೈದಾನದ ತ್ರಿಪುರ ವಾಸಿನಿ ವೇದಿಕೆಗೆ ಬಂದಿದ್ದಾರೆ.

‘ಹಾವೇರಿ ಹುಲಿ’ಗೆ ಜಯವಾಗಲಿ ಎಂದು ಬೆಂಬಲಿಗರಿಂದ ಹರ್ಷೋದ್ಘಾರ:

ಹಾವೇರಿ ಜಿಲ್ಲೆ ಹಾಗೂ ಶಿಗ್ಗಾಂವ್ ಕ್ಷೇತ್ರದ ಜನತೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದರು.  ಕಾರ್ಯಕ್ರಮದಲ್ಲಿ ಭಾಗಿಯಾಗಲು ನೂತನ ಸಿಎಂ ಬಸವರಾಜ್ ಬೊಮ್ಮಾಯಿ ವೇದಿಕೆಗೆ ಬರುತ್ತಿದ್ದಂತೆ ಅಭಿಮಾನಿಗಳು ಹಾವೇರಿ ಹುಲಿಗೆ ಜೈ ಅಂತಾ ಹರ್ಷೋದ್ಘಾರ ಮಾಡಿದರು.

ಈ ವೇಳೆ ಹೆಬ್ಬುಲಿ ಹುಲಿ ಹುಲಿ ಅಂತಾ ಅಭಿಮಾನಿಗಳು ಕೂಗು ಹಾಕಿದಾಗ ಹೇ ಸುಮ್ನಿರಪ್ಪ ಆ ರೀತಿ ಬೇಡ ಅಂತಾ ನೂತನ ಸಿಎಂ ಬೊಮ್ಮಾಯಿ ಸೂಚಿಸಿದರು. ಸ್ಥಾನದ ಬಲಕ್ಕಿಂತ ಸೇವೆ ಮಾಡುವುದು ಬಹಳ ಮುಖ್ಯ. ನಾನು ನಿಮ್ಮ ಹೃದಯದಲ್ಲಿದ್ದೇನೆ. ನಾನು ಮುಂದಿನ ಮುಖ್ಯಮಂತ್ರಿ ಎಂಬುದು ನನಗೆ ನಿನ್ನೆ ಸಂಜೆ 7 ಗಂಟೆಗೆ ಗೊತ್ತಾಗಿದ್ದು. ಆದ್ರೆ ಟಿವಿಯವರು ಅಡ್ವಾನ್ಸ್ ಆಗಿ ಹೊಡೆದಿದ್ರು. ನೀವೂ ಅಡ್ವಾನ್ಸ್ ಆಗಿ ಬಂದುಬಿಟ್ರಿ. ನಾನು ಶಿಗ್ಗಾಂವ್ ಕ್ಷೇತ್ರವನ್ನ ಪ್ರವಾಸ ಮಾಡ್ತೀನಿ ಎಂದರು.

ನನಗೆ ಶಕ್ತಿ ತುಂಬಿದವರು ನೀವು, ನಿಮ್ಮ ಬೆಂಬಲದಲ್ಲಿ ನನಗೆ ಎಷ್ಟು ಶಕ್ತಿ ಇದೆ ಅನ್ನೋದು ಗೊತ್ತಿದೆ. ನನಗೆ ಹೆಗಲಿಗೆ ಹೆಗಲು ಕೊಟ್ಟಿದ್ದೀರಿ. ಹೆಜ್ಜೆಯಲ್ಲಿ ಹೆಜ್ಜೆಯಿಟ್ಟು ಸಾಧನೆ ಮಾಡಿದ್ದೀರಿ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ನಿಮ್ಮನ್ನ ಪಡೆದುಕೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯ. ನಿಮ್ಮನ್ನೆಲ್ಲ ನೋಡಿದಾಗ ಅತ್ಮವಿಶ್ವಾಸ ಹೆಚ್ಚಾಗುತ್ತೆ, ಆದಮ್ಯವಾದ ಶಕ್ತಿ ಬರುತ್ತದೆ. ನಿಮ್ಮೀ ಶಕ್ತಿ-ಬೆಂಬಲದಿಂದ ಮುಂದೆ ಇಟ್ಟ ಹೆಜ್ಜೆಯನ್ನ ಯಾವತ್ತೂ ಹಿಂದೆ ಇಟ್ಟಿಲ್ಲ ಎಂದು ಬಸವರಾಜ ಬೊಮ್ಮಾಯಿ ಎದೆತುಂಬಿ ಈ ಸಂದರ್ಭದಲ್ಲಿ ಹೇಳಿದರು. ನಾನು ಎಷ್ಟೇ ಮೇಲೆ ಹೋದರೂ ನಾನು ನಿಮ್ಮ ಬಸಣ್ಣನೇ: ಈ ವೇಳೆ, ತಮ್ಮನ್ನು ಅಭಿನಂದಿಸಲು ಬಂದಿದ್ದ ಸಾವಿರಾರು ಮಂದಿಯನ್ನುದ್ದೇಶಿಸಿ ಮಾತನಾಡಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಶಿಗ್ಗಾಂವಿ ಕ್ಷೇತ್ರದ ಪ್ರತಿ ಹಳ್ಳಿಯ ಮನೆಯಲ್ಲೂ ನಾನಿದ್ದೇನೆ. ಸ್ಥಾನದ ಬಲಕ್ಕಿಂತ ಸೇವೆ ಮಾಡುವುದು ಬಹಳ ಮುಖ್ಯ. ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನತೆಗೆ ವಿಶೇಷ ವ್ಯವಸ್ಥೆ ಮಾಡುತ್ತೇನೆ ಎಂದರು. ಇದೇ ವೇಳೆ, ಸ್ವಕ್ಷೇತ್ರ ಶಿಗ್ಗಾಂವಿಯನ್ನು ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ. ರಾಜ್ಯದ ಅಭಿವೃದ್ಧಿ ಜತೆಗೆ ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡುವೆ ಎಂದು ಅಭಿನಂದನಾ ಸಮಾರಂಭದಲ್ಲಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ನಮ್ಮ ಜಿಲ್ಲೆ ಹಾಗೂ ಕ್ಷೇತ್ರದ ಜನತೆಗೆ ವಿಶೇಷ ವ್ಯವಸ್ಥೆಯನ್ನ ಮಾಡುತ್ತೇನೆ. ಅವರು ನಮ್ಮ ಅನ್ನದಾತರು. ನಿಮ್ಮ ಜೊತೆಗೆ ಕೆಲಸ ಹೋರಾಟ ಮಾಡಿರುವಂತಹದ್ದು ಎಲ್ಲಾ ನೆನಪಿದೆ. ನನಗೆ ಹಿರಿಯರಾದ ಉದಾಸಿಯವರು ನೆನಪಿಗೆ ಬರುತ್ತಿದ್ದಾರೆ. 12 ತಾಲ್ಲೂಕಿಗೆ ಅವರ ಸೇವೆ ಅಪಾರವಾಗಿದೆ. ಇವತ್ತು ಅವರು ನಮ್ಮ ನಡುವೆ ಇಲ್ಲ. ಎಲ್ಲೇ ಇದ್ದರೂ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂದು ಬಸವರಾಜ ಬೊಮ್ಮಾಯಿ ಗದ್ಗದಿತರಾದರು.

ಎಲ್ಲಾ ವರ್ಗದ ಜನತೆಗೆ ನ್ಯಾಯ ಒದಗಿಸಲು ಬದ್ದನಾಗುತ್ತೇನೆ. ಸ್ವಲ್ಪ ತಾಳ್ಮೆಯೂ ಬೇಕು, ಸಹಕಾರವೂ ಬೇಕು. ನಿಮಗೋಸ್ಕರ ವಿಶೇಷ ಸಮಾರಂಭವನ್ನ ಏರ್ಪಡಿಸುತ್ತೇನೆ. ನಾನು ಎಷ್ಟೇ ಮೇಲೆ ಹೋದರೂ ನಾನು ನಿಮ್ಮ ಬಸಣ್ಣನೇ. ನೀವೂ ಕೂತರೀ, ನಾನೇ ಅಲ್ಲಿ ಬಂದು ಹೋಗ್ತೇನೆ ಅಂತಾ ಜನ ಇದ್ದ ಕಡೆಗೆ ಬಸವರಾಜ ಬೊಮ್ಮಾಯಿ ತೆರಳಿದರು. ಆ ವೇಳೆ ನೂತನ ಸಿಎಂ ಮಾತನಾಡಿಸಲು ಮುಗಿಬಿದ್ದ ಜನ, ಹೂ ಗುಚ್ಛಗಳನ್ನ ನೀಡುತ್ತಾ ಅಭಿನಂದನೆ ಸಲ್ಲಿಸಿದರು.

(will build shiggaon into model constitution declares karnataka new cm basavaraj bommai)

Published On - 3:41 pm, Wed, 28 July 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್