ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ, ಉತ್ತರ ಕರ್ನಾಟಕ ಅಭಿವೃದ್ಧಿ: ರಂಭಾಪುರಿ, ಹಿರೇಮಠ ಶ್ರೀಗಳಿಂದ ವಿವಿಧ ಬೇಡಿಕೆ

TV9 Digital Desk

| Edited By: ganapathi bhat

Updated on: Jul 28, 2021 | 3:11 PM

ಬಿ.ಎಸ್. ಯಡಿಯೂರಪ್ಪ ಪದತ್ಯಾಗದಿಂದ‌ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ ಬೇಸರದಲ್ಲಿತ್ತು. ಅದನ್ನು ಸರಿದೂಗಿಸಲು ಮತ್ತೋರ್ವ ವೀರಶೈವ ಲಿಂಗಾಯತ ಸಮುದಾಯದ ನಾಯಕನ ನೇಮಕವಾಗಿದೆ ಎಂದು ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.

ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ, ಉತ್ತರ ಕರ್ನಾಟಕ ಅಭಿವೃದ್ಧಿ: ರಂಭಾಪುರಿ, ಹಿರೇಮಠ ಶ್ರೀಗಳಿಂದ ವಿವಿಧ ಬೇಡಿಕೆ
ರಂಭಾಪುರಿ ಶ್ರೀ

ಬೆಳಗಾವಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೇಮಕ ವಿಚಾರಕ್ಕೆ ಸಂಬಂಧಿಸಿ ವಿವಿಧ ಮಠಾಧೀಶರು, ಸ್ವಾಮೀಜಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಬಸವರಾಜ್ ಬೊಮ್ಮಾಯಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಅದು ಅವರ ಪಕ್ಷದ ಒಗ್ಗಟ್ಟು, ದೂರದೃಷ್ಟಿಗೆ ಸಾಕ್ಷಿ ಎಂದು ಬೆಳಗಾವಿಯ ಹುಕ್ಕೇರಿ ಹಿರೇಮಠದಲ್ಲಿ ರಂಭಾಪುರಿ ಜಗದ್ಗುರು ಹೇಳಿಕೆ ನೀಡಿದ್ದಾರೆ.

ಸಿಎಂ ರೇಸ್‌ನಲ್ಲಿ ನಾಲ್ಕೈದು ಜನರ ಹೆಸರು ಕೇಳಿ ಬರ್ತಿತ್ತು. ಆದರೆ, ಬಸವರಾಜ್ ಬೊಮ್ಮಾಯಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಪದತ್ಯಾಗದಿಂದ‌ ಬಹುಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ ಬೇಸರದಲ್ಲಿತ್ತು. ಅದನ್ನು ಸರಿದೂಗಿಸಲು ಮತ್ತೋರ್ವ ವೀರಶೈವ ಲಿಂಗಾಯತ ಸಮುದಾಯದ ನಾಯಕನ ನೇಮಕವಾಗಿದೆ ಎಂದು ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ ಚಾಣಾಕ್ಷ್ಯ ರಾಜಕಾರಣಿ, ದಕ್ಷ ಆಡಳಿತಗಾರ, ಯಾವುದೇ ಆರೋಪಗಳಿಲ್ಲ. ಬಿಜೆಪಿಯ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಸಾಮರ್ಥ್ಯವಿದೆ. ಯಡಿಯೂರಪ್ಪ ಹೆಚ್ಚಿನ ಮುತುವರ್ಜಿ ವಹಿಸಿದ್ದು ಕಾಣುತ್ತಿದೆ. ಬಿಎಸ್‌ವೈ ಮಾತಿಗೆ ರಾಷ್ಟ್ರೀಯ ನಾಯಕರು ಗೌರವ ಕೊಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಕರೆ ಮಾಡಿದ್ರು ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬಸವರಾಜ ಬೊಮ್ಮಾಯಿ ಕರೆ ಮಾಡಿದ್ರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡ್ತಿದೀನಿ ಆಶೀರ್ವಾದ ಮಾಡಿ ಎಂದ್ರು. ಮೈಸೂರು ಪ್ರಾಂತ್ಯದಲ್ಲಿ ಆಗುತ್ತಿದ್ದ ಅಭಿವೃದ್ಧಿ ಕಾರ್ಯಗಳು ಉತ್ತರ ಕರ್ನಾಟಕದಲ್ಲಿ ಆಗ್ತಿಲ್ಲ ಎಂಬ ಕೂಗು ಕೇಳಿಬರ್ತಿತ್ತು. ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ವರ್ಷಗಳಿಂದ ಅಧಿವೇಶನ ಆಗಿಲ್ಲ. ರಾಜಧಾನಿ ಬೆಂಗಳೂರಿನ ಕಾರ್ಯಾಲಯಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರ ಮಾಡಬೇಕು. ಇದರಿಂದ ಅಭಿವೃದ್ಧಿಗೆ ಶಕ್ತಿ‌ ಬರುತ್ತೆ. ಇದರ ಕಡೆ ಬೊಮ್ಮಾಯಿ ಹೆಚ್ಚಿನ ಲಕ್ಷ್ಯ ವಹಿಸಲಿ ಎಂದು ರಂಭಾಪುರಿ ಶ್ರೀಗಳು ಸಲಹೆ ನೀಡಿದ್ದಾರೆ.

ಬಿಎಸ್‌ವೈ ದೂರದೃಷ್ಟಿ, ಸಂಕಲ್ಪಿತ ಯೋಜನೆ ಸಾಕಾರಗೊಳಿಸುವಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಅಭಿವೃದ್ಧಿ ಕಾರ್ಯಕುಂಠಿತ ಹೊಂದಿದೆ ಅದಕ್ಕೆ ವೇಗ ತರಬೇಕು. ಈವರೆಗೂ ಬಿಜೆಪಿ ಗುಂಪುಗಳಾಗಿ ಕೆಲಸ ಮಾಡ್ತಿದ್ವು. ಈಗ ಬೊಮ್ಮಾಯಿ ಸಿಎಂ ಆದ ಮೇಲೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿ. ಸಿಎಂ ಬಸವರಾಜ್ ಬೊಮ್ಮಾಯಿಗೆ ಮಾರ್ಗದರ್ಶನ ಆಶೀರ್ವಾದ ಸದಾ ಇದೆ. ಬಿಎಸ್‌ವೈ ದೂರದೃಷ್ಟಿ, ಸಂಕಲ್ಪಿತ ಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಬೊಮ್ಮಾಯಿ ಕೆಲಸ ಮಾಡಲಿ ಎಂದು ಬೆಳಗಾವಿಯಲ್ಲಿ ರಂಭಾಪುರಿ ಪೀಠದ ಜಗದ್ಗುರು ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿ ಆಗ್ತಿಲ್ಲ ಎಂಬ ಕೂಗು ಇದ್ದೇ ಇದೆ ಉತ್ತರ ಕರ್ನಾಟಕ ಅಭಿವೃದ್ಧಿಗೆ ಎಲ್ಲಾ ನಾಯಕರು ಬಸವರಾಜ ಬೊಮ್ಮಾಯಿ ಬೆಂಬಲಿಸಲಿ ಎಂದು ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬರೀ ದಕ್ಷಿಣ ಕರ್ನಾಟಕ ಮಾತ್ರ ಅಭಿವೃದ್ಧಿ ಆಗ್ತಿದೆ. ಉತ್ತರ ಕರ್ನಾಟಕ ಅಭಿವೃದ್ಧಿ ಆಗ್ತಿಲ್ಲ ಎಂಬ ಕೂಗು ಇದ್ದೇ ಇದೆ. ಅದರಲ್ಲೂ ಸುವರ್ಣ ವಿಧಾನ ಸೌಧ ಈವರೆಗೂ ಕಾರ್ಯ ಚಟುವಟಿಕೆಯಲ್ಲಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಕಚೇರಿಗಳನ್ನ ಸ್ಥಳಾಂತರ ಮಾಡಲು ನಾವು ಸ್ವಾಮಿಗಳು ಒತ್ತಾಯ ಮಾಡುತ್ತಿದ್ದೇವೆ. ಬಹಳಷ್ಟು ಹೋರಾಟಗಾರರು ಹೋರಾಟ ಮಾಡಿದ್ದಾರೆ. ಇವತ್ತು ಉತ್ತರ ಕರ್ನಾಟಕ ಧೀಮಂತ ರಾಜಕಾರಣಿ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅಖಂಡ ಕರ್ನಾಟಕದ ಅಭಿವೃದ್ಧಿ ಜೊತೆ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲಿ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿರುವುದನ್ನು ಸರಿ ಪಡಿಸಬೇಕು. ಹಿಂದಿನವರು ಏ‌ನೇನೋ ಹೇಳಿ ಹೋದ್ರು ಆಗಲಿಲ್ಲ. ಸುವರ್ಣಸೌಧಕ್ಕೆ ಬೇಗ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು. ಮಲತಾಯಿ ಧೋರಣೆಯನ್ನ ಮಾಡದೇ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಮಾಡದಿದ್ದರೆ ನಾವು ನಿಯೋಗ ತೆಗೆದುಕೊಂಡು ಹೋಗಿ ಮಾಡಿಸ್ತೀವಿ ನಾಡಿನ ಅಭಿವೃದ್ಧಿಗಾಗಿ ಯಾವಾಗಲೂ ಮಠಾಧೀಶರು ಸಿಎಂ ಬಳಿ ಹೋಗಲು ಸನ್ನದ್ಧ. ಸುವರ್ಣ ವಿಧಾನ ಸೌಧಕ್ಕೆ ಬೇಗ ಕಚೇರಿ ಸ್ಥಳಾಂತರ ಮಾಡುವ ಭರವಸೆ ಇದೆ, ಮಾಡದಿದ್ದರೆ ನಾವು ನಿಯೋಗ ತೆಗೆದುಕೊಂಡು ಹೋಗಿ ಮಾಡಿಸ್ತೀವಿ. ಈ ಬಾರಿ ಬಸವರಾಜ ಬೋಮ್ಮಾಯಿ ಅವರು ನಮಗೆ ನಿರಾಶೆ ಮಾಡುವುದಿಲ್ಲ ಎಂಬ ಆಶಾಭಾವನೆ ನನ್ನದು. ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡಬೇಕು, ಮಾಡಲೇಬೇಕು ಇದು ನಮ್ಮ ಹಕ್ಕೊತ್ತಾಯ ಎಂದು ಹೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಅವರಿಗೆ ಗಡಿ ಸಮಸ್ಯೆ ಬಗ್ಗೆ ಹೆಚ್ಚಾಗಿ ಗೊತ್ತಿದೆ. ಉತ್ತರ ಕರ್ನಾಟಕ ನಾಯಕರು ಎಲ್ಲರೂ ಬಸವರಾಜ ಬೊಮ್ಮಾಯಿಗೆ ಬೆಂಬಲಿಸಬೇಕು. ಉತ್ತರ ಕರ್ನಾಟಕದ ನಾಯಕರು ಪಕ್ಷಭೇದ ಮರೆತು ಒಂದಾಗಿ ಕೆಲಸ ಮಾಡಬೇಕು. ಅಭಿವೃದ್ಧಿ ವಿಚಾರವಾಗಿ ನಮ್ಮ ಉತ್ತರ ಕರ್ನಾಟಕ ಶಾಸಕರು ಸಿಎಂ ಬೆಂಬಲಕ್ಕೆ ನಿಲ್ಲಬೇಕು. ಕಳೆದ ಎರಡು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ಆಗಿಲ್ಲ. ಈ ವರ್ಷವಾದ್ರು ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆಂದು ಹುಕ್ಕೇರಿ ಹಿರೇಮಠದ ಶ್ರೀಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಜನಪರ ಆಡಳಿತದ ಭರವಸೆ ನೀಡಿದ ಬಸವರಾಜ ಬೊಮ್ಮಾಯಿ; ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಏರಿಕೆ

Basavaraj Bommai: ಅಧಿಕಾರ ಸ್ವೀಕರಿಸಿದ ಮರುದಿನವೇ ಸಿಎಂ ಪ್ರವಾಸ; ನಾಳೆ ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಸ್ಥಳಗಳಿಗೆ ಬಸವರಾಜ ಬೊಮ್ಮಾಯಿ ಭೇಟಿ

(Rambhapuri Swamiji Hukkeri Hirematha Swamiji on Karnataka New CM Basavaraj Bommai North Karnataka Development)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada