‘ಕೊರೊನಾ ಒತ್ತಡ ನಿರ್ವಹಣೆಗೆ ಬ್ಯಾಂಕ್​ಗಳು ಸಶಕ್ತ, ಅವೇ ತೀರ್ಮಾನ ತೆಗೆದುಕೊಳ್ಳಬಹುದು’

|

Updated on: Sep 03, 2020 | 5:15 PM

ದೆಹಲಿ: ಬ್ಯಾಂಕ್ ಸಾಲದ ಕಂತು ಮೂಂದೂಡಿಕೆ (ಮೊರಟೋರಿಯಂ) ಅವಧಿಯಲ್ಲಿ ಬಡ್ಡಿ ಮೇಲಿನ ಚಕ್ರಬಡ್ಡಿ ಮನ್ನಾ ವಿಚಾರವಾಗಿ ಸುಪ್ರೀಂ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ಕಾರದ ಪರವಾಗಿ ತಮ್ಮ ವಾದವನ್ನು ಮಂಡನೆ ಮಾಡಿದ್ದಾರೆ. ಕೊರೊನಾ ಬಿಕ್ಕಟ್ಟು ಒತ್ತಡ ನಿರ್ವಹಣೆಗೆ ಬ್ಯಾಂಕ್‌ಗಳು ಸಶಕ್ತವಾಗಿವೆ. ‌‌ಬಡ್ಡಿದರ ಬದಲಾವಣೆ, ಸಾಲ ಮರುಪಾವತಿ ಅವಧಿ ವಿಸ್ತರಣೆಯ ಬಗ್ಗೆ ಬ್ಯಾಂಕ್‌ಗಳೇ ತೀರ್ಮಾನವನ್ನು ಕೈಗೊಳ್ಳಬಹುದು. ಬ್ಯಾಂಕ್‌ಗಳು ತೀರ್ಮಾನ ಕೈಗೊಳ್ಳುವುದಕ್ಕೆ ಯಾರೂ ತಡೆದಿಲ್ಲ. ನಿರ್ದಿಷ್ಟ ವರ್ಗದ ಸಾಲಗಾರರ ಸಂಕಷ್ಟ ಪರಿಹಾರ ನೀಡಲು ಬ್ಯಾಂಕ್‌ಗಳು […]

‘ಕೊರೊನಾ ಒತ್ತಡ ನಿರ್ವಹಣೆಗೆ ಬ್ಯಾಂಕ್​ಗಳು ಸಶಕ್ತ, ಅವೇ ತೀರ್ಮಾನ ತೆಗೆದುಕೊಳ್ಳಬಹುದು’
Follow us on

ದೆಹಲಿ: ಬ್ಯಾಂಕ್ ಸಾಲದ ಕಂತು ಮೂಂದೂಡಿಕೆ (ಮೊರಟೋರಿಯಂ) ಅವಧಿಯಲ್ಲಿ ಬಡ್ಡಿ ಮೇಲಿನ ಚಕ್ರಬಡ್ಡಿ ಮನ್ನಾ ವಿಚಾರವಾಗಿ ಸುಪ್ರೀಂ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸರ್ಕಾರದ ಪರವಾಗಿ ತಮ್ಮ ವಾದವನ್ನು ಮಂಡನೆ ಮಾಡಿದ್ದಾರೆ.

ಕೊರೊನಾ ಬಿಕ್ಕಟ್ಟು ಒತ್ತಡ ನಿರ್ವಹಣೆಗೆ ಬ್ಯಾಂಕ್‌ಗಳು ಸಶಕ್ತವಾಗಿವೆ. ‌‌ಬಡ್ಡಿದರ ಬದಲಾವಣೆ, ಸಾಲ ಮರುಪಾವತಿ ಅವಧಿ ವಿಸ್ತರಣೆಯ ಬಗ್ಗೆ ಬ್ಯಾಂಕ್‌ಗಳೇ ತೀರ್ಮಾನವನ್ನು ಕೈಗೊಳ್ಳಬಹುದು. ಬ್ಯಾಂಕ್‌ಗಳು ತೀರ್ಮಾನ ಕೈಗೊಳ್ಳುವುದಕ್ಕೆ ಯಾರೂ ತಡೆದಿಲ್ಲ. ನಿರ್ದಿಷ್ಟ ವರ್ಗದ ಸಾಲಗಾರರ ಸಂಕಷ್ಟ ಪರಿಹಾರ ನೀಡಲು ಬ್ಯಾಂಕ್‌ಗಳು ತಮ್ಮದೇ ಆದ ಮಾರ್ಗ ಅಳವಡಿಸಿಕೊಳ್ಳಬಹುದು ಅಂತಾ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಕೆಲ ತೀರ್ಮಾನ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳಬೇಕು
ಇದಕ್ಕೆ ಸುಪ್ರೀಂ ಕೋರ್ಟ್​ ನ್ಯಾಯಮೂರ್ತಿ ಅಶೋಕ್ ಭೂಷಣ್ ಪ್ರತಿಕ್ರಿಯಿಸಿ ಕೆಲವೊಂದು ನಿರ್ದೇಶನಗಳನ್ನು ರಿಸರ್ವ್ ಬ್ಯಾಂಕ್ ನೀಡಬೇಕು. ನೀವು ಏನು ಮಾಡ್ತೀರಿ ಎನ್ನುವುದನ್ನು ನೀವೇ ನಿರ್ಧರಿಸಿ. ಎಲ್ಲ ತೀರ್ಮಾನಗಳನ್ನು ಬ್ಯಾಂಕ್‌ಗಳಿಗೆ ಬಿಡಲು ಸಾಧ್ಯವಿಲ್ಲ. ಕೆಲವೊಂದು ತೀರ್ಮಾನವನ್ನ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಹೇಳಿದ್ದಾರೆ.

ಕೇಂದ್ರದ ನಿರ್ಧಾರದತ್ತ ಎಲ್ಲರ ಚಿತ್ತ..
ಇದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಮಗೆ ಸಮಸ್ಯೆ ಅರ್ಥವಾಗಿದೆ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಸೂಕ್ತ ಸೂಚನೆ ಪಡೆಯಬೇಕು ಎಂದು ಕೋರ್ಟ್​ಗೆ ತಿಳಿಸಿದ್ದಾರೆ.

ತಜ್ಞರ ಸಮಿತಿ ನಿರ್ಧರಿಸುತ್ತೆ -ಕೇಂದ್ರ ಸರ್ಕಾರದ ವಾದ
ಸಾಲದ ಪುನರ್ ರಚನೆ ಹಾಗೂ ನಿರ್ಣಯಕ್ಕೆ ತಜ್ಞರ ಸಮಿತಿ‌ ರಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ, RBI ತಿಳಿಸಿದೆ. ಯಾವ್ಯಾವ ಕ್ಷೇತ್ರಕ್ಕೆ ಹೇಗೆ ರಿಲೀಫ್ ಎಂಬ ನಿರ್ಧಾರವನ್ನ ತಜ್ಞರ ಸಮಿತಿ ನಿರ್ಧರಿಸುತ್ತೆ‌ ಎಂದು ಕೇಂದ್ರ ಸರ್ಕಾರ ತನ್ನ ವಾದ ಮಂಡಿಸಿದೆ.

MSMEಗಳಿಗೆ ಈಗಾಗಲೇ ಬ್ಯಾಂಕ್​ಗಳಿಂದ ರಿಲೀಫ್ ದೊರೆತಿದೆ. ಈ ಹಂತದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬೇಡ. ಹಣಕಾಸು ಇಲಾಖೆ, ಆರ್​ಬಿಐ ತಮ್ಮ‌ ಕೆಲಸ ಮಾಡ್ತಿವೆ ಎಂದು ಸುಪ್ರೀಂಕೋರ್ಟ್​ಗೆ ಕೇಂದ್ರ ಸರ್ಕಾರ ಮತ್ತು RBI ತಿಳಿಸಿದೆ.

‘ಆಗಸ್ಟ್ 31 ಕ್ಕೆ ಮರುಪಾವತಿ ಮಾಡದ ಸಾಲವನ್ನ NPA ಎಂದು ಘೋಷಿಸಬಾರದು’
ಈ  ವೇಳೆ, ಆಗಸ್ಟ್ 31 ಕ್ಕೆ ಮರುಪಾವತಿ ಮಾಡದ ಸಾಲವನ್ನ ಅನುತ್ಪಾದಕ ಸಾಲ ಎಂದು ಘೋಷಿಸಬಾರದು. ಸುಪ್ರೀಂ ಕೋರ್ಟ್​ನಲ್ಲಿ ಮಾರಾಟೋರಿಯಂ ಪ್ರಕರಣದ ವಿಚಾರಣೆ ಇತ್ಯರ್ಥವಾಗುವವರೆಗೂ ಘೋಷಣೆ ಮಾಡಬಾರದು ‌ಎಂದು ಸುಪ್ರೀಂ ಕೋರ್ಟ್​ನಿಂದ ರಿಸರ್ವ್ ಬ್ಯಾಂಕ್ ಮತ್ತು ಬ್ಯಾಂಕ್​ಗಳಿಗೆ ಸೂಚನೆ ನೀಡಲಾಗಿದೆ. ಮಾರಾಟೋರಿಯಂ ವಿಸ್ತರಣೆ, ಚಕ್ರಬಡ್ಡಿ ಮನ್ನಾ ಕೋರಿದ್ದ ಅರ್ಜಿ ವಿಚಾರಣೆ ಸೆಪ್ಟೆಂಬರ್ 10 ಕ್ಕೆ ಮುಂದೂಡಿಕೆಯಾಗಿದೆ.

Published On - 4:55 pm, Thu, 3 September 20