ತಿರುಮಲ ಪ್ರವಾಹದ ಹೆಸರಿನಲ್ಲಿ ಫೇಕ್​ ವಿಡಿಯೋಗಳೂ ವೈರಲ್​ ಆಗ್ತಿವೆ: ಟಿಟಿಡಿ ಇಒ ಹೇಳಿಕೆ

| Updated By: Lakshmi Hegde

Updated on: Nov 21, 2021 | 3:29 PM

ವಿಪರೀತ ಮಳೆಯಿಂದಾಗಿ ಮೊದಲ ಹಾಗೂ ಎರಡನೇ ಬೆಟ್ಟದ ರಸ್ತೆಯಲ್ಲಿ ವಿವಿಧೆಡೆ ದೊಡ್ಡದೊಡ್ಡ ಕಲ್ಲುಗಳು ಉರುಳಿಬಿದ್ದಿವೆ. ಪರ್ವತಗಳು ಕುಸಿದಿವೆ. ಹಾಗಾಗಿ ಇದೆರಡೂ ಘಾಟ್​​ಗಳನ್ನು ಮುಚ್ಚಲಾಗಿದೆ.

ತಿರುಮಲ ಪ್ರವಾಹದ ಹೆಸರಿನಲ್ಲಿ ಫೇಕ್​ ವಿಡಿಯೋಗಳೂ ವೈರಲ್​ ಆಗ್ತಿವೆ: ಟಿಟಿಡಿ ಇಒ ಹೇಳಿಕೆ
ಟಿಟಿಡಿ ಇಒ
Follow us on

ಆಂಧ್ರಪ್ರದೇಶದಲ್ಲಿ ವಿಪರೀತ ಮಳೆ ಸುರಿಯುತ್ತಿದ್ದು ಇದುವರೆಗೆ ಸುಮಾರು 29 ಜನರ ಜೀವ ಹೋಗಿದೆ. ಅದರಲ್ಲೂ  ತಿರುಪತಿ ತಿರುಮಲ ದೇಗುಲದ ಸುತ್ತಲೂ ಜಲಾವೃತವಾಗಿತ್ತು. ಈ ಸಂಬಂಧ ಸೋಷಿಯಲ್​ ಮೀಡಿಯಾಗಳಲ್ಲಿ ಹಲವು ವಿಡಿಯೋಗಳೂ ವೈರಲ್​ ಆಗುತ್ತಿವೆ. ರಸ್ತೆಗಳಲ್ಲೆಲ್ಲ ನೀರು ತುಂಬಿರುವ, ಸಣ್ಣಸಣ್ಣ ಜಲಪಾತಗಳೇ ಸೃಷ್ಟಿಯಾಗಿರುವ ಹಲವು ವಿಡಿಯೋಗಳು ಹರಿದಾಡುತ್ತಿವೆ. ಆದರೆ ತಿರುಪತಿಯದ್ದು ಎಂದು ಕ್ಯಾಪ್ಷನ್​ ಕೊಟ್ಟ ವಿಡಿಯೋಗಳೆಲ್ಲ ಅಲ್ಲಿಯದಲ್ಲ. ತಿರುಪತಿಯಲ್ಲುಂಟಾದ ಪ್ರವಾಹಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಫೇಕ್​ ವಿಡಿಯೋಗಳು ಹರಿದಾಡುತ್ತಿದ್ದು, ಅದನ್ನು ನಂಬಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇಒ (executive officer ) ಡಾ. ಕೆ.ಎಸ್​. ಜವಾಹರ್ ರೆಡ್ಡಿ ತಿಳಿಸಿದ್ದಾರೆ.

ವಿಪರೀತ ಮಳೆಯಿಂದಾಗಿ ಮೊದಲ ಹಾಗೂ ಎರಡನೇ ಬೆಟ್ಟದ ರಸ್ತೆಯಲ್ಲಿ ವಿವಿಧೆಡೆ ದೊಡ್ಡದೊಡ್ಡ ಕಲ್ಲುಗಳು ಉರುಳಿಬಿದ್ದಿವೆ. ಪರ್ವತಗಳು ಕುಸಿದಿವೆ. ಹಾಗಾಗಿ ಇದೆರಡೂ ಘಾಟ್​​ಗಳನ್ನು ಮುಚ್ಚಲಾಗಿದೆ. ಎಲ್ಲವೂ ಸರಿಯಾದ ಬಳಿಕ ಯಾತ್ರಾರ್ಥಿಗಳಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ.  ರಸ್ತೆಗೆ ಬಿದ್ದಿರುವ ಕಲ್ಲುಬಂಡೆಗಳನ್ನು ತೆರವುಗೊಳಿಸಬೇಕು. ಅದಾದ ಬಳಿಕವಷ್ಟೇ ರಸ್ತೆ ಸಂಚಾರಕ್ಕೆ ಮುಕ್ತವಾಗುತ್ತದೆ. ಕೆಲವರು ಯಾವ್ಯಾವುದೋ ಪ್ರವಾಹದ ವಿಡಿಯೋಗಳನ್ನೆಲ್ಲ ತಿರುಪತಿಯದ್ದು ಎಂದು ಹೇಳಿ ವೈರಲ್ ಮಾಡುತ್ತಿದ್ದಾರೆ. ಅದನ್ನು ನೋಡಿ ತಿರುಪತಿ-ತಿರುಮಲದಲ್ಲಿ ಸಿಲುಕಿರುವ ಜನರು ಕಂಗಾಲಾಗಿದ್ದಾರೆ. ದಯವಿಟ್ಟು ಯಾರೂ ಗಾಬರಿ ಆಗಬಾರದು ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಭಾರತ ಶೀಘ್ರದಲ್ಲೇ ವಿಶ್ವಕ್ಕೆ ಹಡಗುಗಳನ್ನು ನಿರ್ಮಿಸಲಿದೆ: ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆಗೊಳಿಸಿ ರಾಜನಾಥ್ ಸಿಂಗ್ ಹೇಳಿಕೆ