Sonali Phogat Death Case: ಸೋನಾಲಿ ಆಪ್ತ ಸಹಾಯಕರೇ ಒತ್ತಾಯ ಪೂರ್ವಕವಾಗಿ ಡ್ರಗ್ಸ್ ನೀಡಿದರು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಒತ್ತಾಯ ಪೂರ್ವಕವಾಗಿ ಡ್ರಗ್ಸ್ ಮಿಶ್ರಿತ ಜ್ಯೂಸ್ನ್ನು ನೀಡಿದ ಇಬ್ಬರು ಅವರ ಆಪ್ತ ಸಹಾಯಕರನ್ನು ಸಿಬಿಐ ತನಿಖಾ ಮಾಡಿದೆ. ಕೇಂದ್ರೀಯ ತನಿಖಾ ದಳ ಸೋಮವಾರ ಇಬ್ಬರು ಆರೋಪಿಗಳ ವಿರುದ್ಧ ಗೋವಾದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಮುಂಬೈ: ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಒತ್ತಾಯ ಪೂರ್ವಕವಾಗಿ ಡ್ರಗ್ಸ್ ಮಿಶ್ರಿತ ಜ್ಯೂಸ್ನ್ನು ನೀಡಿದ ಇಬ್ಬರು ಅವರ ಆಪ್ತ ಸಹಾಯಕರನ್ನು ಸಿಬಿಐ ತನಿಖಾ ಮಾಡಿದೆ. ಹರಿಯಾಣ ಬಿಜೆಪಿ ನಾಯಕಿಯ ಸಹಚರರು, ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಸುಖ್ವಿಂದರ್ ಸಿಂಗ್ ಬಲವಂತವಾಗಿ ಮಾದಕ ದ್ರವ್ಯ ನೀಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಇಬ್ಬರನ್ನೂ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಕೇಂದ್ರೀಯ ತನಿಖಾ ದಳ ಸೋಮವಾರ ಇಬ್ಬರು ಆರೋಪಿಗಳ ವಿರುದ್ಧ ಗೋವಾದ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ಮೊದಲು ಗೋವಾ ಪೊಲೀಸರು ಆರಂಭಿಕ ತನಿಖೆಯನ್ನು ನಿರ್ವಹಿಸಿದ್ದರು.
ಅಂಜುನಾ ಬೀಚ್‌ನಲ್ಲಿರುವ ಪ್ರಸಿದ್ಧ ರೆಸ್ಟೋರೆಂಟ್-ಕಮ್-ನೈಟ್‌ಕ್ಲಬ್ ಕರ್ಲೀಸ್‌ನಲ್ಲಿ ಆರೋಪಿಗಳು ಫೋಗಟ್ ಅವರಿಗೆ ಬಲವಂತವಾಗಿ ಮೆಥಾಂಫೆಟಮೈನ್ ಡ್ರಗ್ಸ್ (ಮೆಥ್) ಕುಡಿಯಲು ಒತ್ತಾಯಿಸಿದರು ಎಂದು ಗೋವಾ ಪೊಲೀಸರು ಭದ್ರತಾ ಕ್ಯಾಮೆರಾ ದೃಶ್ಯಗಳು ಮತ್ತು ಆರೋಪಿಗಳ ತಪ್ಪೊಪ್ಪಿಗೆಗಳನ್ನು ಉಲ್ಲೇಖಿಸಿದ್ದಾರೆ.
ಸೋನಾಲಿ ಫೋಗಟ್ ಡ್ರಗ್ಸ್ ಮಿಶ್ರಿತ ಜ್ಯೂಸ್ ಕುಡಿಯುವ ಮೊದಲು ಆಕೆಗೆ ಅಸೌಖ್ಯ ಇತ್ತು, ನಂತರ ಡ್ರಗ್ಸ್ ಮಿಶ್ರಿತ ಜ್ಯೂಸ್ ಕುಡಿದ ನಂತರ ಸೋನಾಲಿ ಫೋಗಟ್ ನಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರು ತಂಗಿದ್ದ ಗ್ರ್ಯಾಂಡ್ ಲಿಯೋನಿ ಎಂಬ ಹೋಟೆಲ್‌ಗೆ ಅವರ ಸಹಚರರು ಕರೆದೊಯ್ದಿದ್ದಾರೆ. ಮರುದಿನ ಬೆಳಿಗ್ಗೆ ಸೋನಾಲಿ ಫೋಗಟ್ ಅವರನ್ನು ಸೇಂಟ್ ಆಂಥೋನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ವೈದ್ಯರು ತಿಳಿಸಿದ್ದರು.
ಇದನ್ನು ಓದಿ: ಸೋನಾಲಿ ಫೋಗಟ್ ತಂಗಿದ್ದ ಹೋಟೆಲ್‌ಗೆ ಸಿಬಿಐ ದಾಳಿ
ಕರ್ಲೀಸ್ ರೆಸ್ಟೋರೆಂಟ್‌ನ ಮಾಲೀಕ ಎಡ್ವಿನ್ ನ್ಯೂನ್ಸ್ ಅವರನ್ನು ತೆಲಂಗಾಣ ಪೊಲೀಸರು ಡ್ರಗ್ ಪ್ರಕರಣದಲ್ಲಿ ಗೋವಾದ ಅಂಜುನಾದಲ್ಲಿ ಬಂಧಿಸಿದ್ದರು. ಸೆಪ್ಟೆಂಬರ್‌ನಲ್ಲಿ ಸೋನಾಲಿ ಫೋಗಟ್ ಸಾವಿನ ನಂತರ ಬಂಧಿಸಲಾದ ಐದು ವ್ಯಕ್ತಿಗಳಲ್ಲಿ ನ್ಯೂನ್ಸ್ ಕೂಡ ಒಬ್ಬರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದರು. ಮೂರು ತಿಂಗಳ ಹಿಂದೆ ತೆಲಂಗಾಣದಲ್ಲಿ ಡ್ರಗ್ಸ್ ದಂಧೆಯಲ್ಲಿ ಹೈದರಾಬಾದ್ ಪೊಲೀಸರಿಗೆ ಬೇಕಾಗಿರುವ ಡ್ರಗ್ ಡೀಲರ್‌ಗಳಲ್ಲಿ ನ್ಯೂನ್ಸ್ ಕೂಡ ಒಬ್ಬರು. ಹಾಗಾಗಿ ಅವರನ್ನು ಬಂಧನ ಮಾಡಲಾಗಿತ್ತು.
ಸೋನಾಲಿ ಫೋಗಟ್ 2019 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು. 2008ರಲ್ಲಿ ಬಿಜೆಪಿಗೆ ಸೇರಿದರು, ಆರು ವರ್ಷಗಳ ಹಿಂದೆ ನಿಧನರಾದ ಅವರ ಪತಿ ಸಂಜಯ್ ಫೋಗಟ್ ಅವರು ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಸಕ್ರಿಯರಾಗಿದ್ದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ