AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’; ತಮ್ಮ ಬಂಧನಕ್ಕಾಗಿಯೇ 2 ಕೋಟಿ ರೂ. ಖರ್ಚಾಗಿದೆ ಎಂದು ಸೋನಮ್ ವಾಂಗ್​ಚುಕ್ ಆರೋಪ

ಲಡಾಖ್‌ನ ಖ್ಯಾತ ಪರಿಸರವಾದಿ, ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಬಂಧನದಲ್ಲಿಡಲು ಸರ್ಕಾರ ಬರೋಬ್ಬರಿ 2 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಗಂಭೀರ ಆರೋಪ ಮಾಡಿರುವ ಅವರು, "ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?" ಎಂದು ಆಕ್ರೋಶದಿಂದ ಪ್ರಶ್ನಿಸಿದ್ದಾರೆ. ಪ್ರಾಮಾಣಿಕ ನಾಗರಿಕರು ಕಟ್ಟುವ ತೆರಿಗೆ ಹಣವನ್ನು ದೇಶದ ಅಭಿವೃದ್ಧಿ, ಶಿಕ್ಷಣ ಮತ್ತು ಪರಿಸರ ಸಂರಕ್ಷಣೆಗೆ ಬಳಸುವ ಬದಲು, ಶಾಂತಿಯುತ ಹೋರಾಟಗಾರರನ್ನು ಹತ್ತಿಕ್ಕಲು ಮತ್ತು ಬಂಧಿಸಲು ವೆಚ್ಚ ಮಾಡಲಾಗುತ್ತಿದೆ ಎಂದು ಸೋನಮ್ ವಾಂಗ್‌ಚುಕ್ ಕಿಡಿಕಾರಿದ್ದಾರೆ.

‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’; ತಮ್ಮ ಬಂಧನಕ್ಕಾಗಿಯೇ 2 ಕೋಟಿ ರೂ. ಖರ್ಚಾಗಿದೆ ಎಂದು ಸೋನಮ್ ವಾಂಗ್​ಚುಕ್ ಆರೋಪ
Sonam Wangchuk
ಸುಷ್ಮಾ ಚಕ್ರೆ
|

Updated on: Nov 18, 2026 | 3:19 PM

Share

ನವದೆಹಲಿ, ನವೆಂಬರ್ 18: ಕಳೆದ ಹಲವು ತಿಂಗಳುಗಳಿಂದ ತಮ್ಮ ಬಂಧನ ಮತ್ತು ಭದ್ರತಾ ವ್ಯವಸ್ಥೆಗಳಿಗಾಗಿ ಸರ್ಕಾರ ಸುಮಾರು 2 ಕೋಟಿ ರೂ. ಖರ್ಚು ಮಾಡಿದೆ ಎಂದು ಆರೋಪಿಸಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ತೆರಿಗೆದಾರರ ಹಣದ ಬಳಕೆಯ ಕುರಿತು ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಾಂಗ್‌ಚುಕ್, ಲಡಾಖ್ ನಿವಾಸಿಯಾಗಿರುವುದರಿಂದ ತಮಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ಇದೆ. ಆದರೂ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ತಾವು ನಿರಂತರವಾಗಿ ತೆರಿಗೆ ಪಾವತಿಸುತ್ತಾ ಬಂದಿರುವುದಾಗಿ ಹೇಳಿದ್ದಾರೆ. ಆದರೆ, ಸಾರ್ವಜನಿಕರ ಹಣವನ್ನು ಬಳಸುತ್ತಿರುವ ರೀತಿಯನ್ನು ನೋಡಿದ ನಂತರ ತಾವು ತೆರಿಗೆ ಪಾವತಿಸುವುದನ್ನು ಮುಂದುವರಿಸಬೇಕೇ? ಎಂಬ ಗೊಂದಲ ಉಂಟಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್​ಎಸ್​ಎ) ತಮ್ಮನ್ನು 6 ತಿಂಗಳ ಕಾಲ ಜೋಧ್‌ಪುರ ಜೈಲಿನಲ್ಲಿ ಇರಿಸಲು ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವಾಂಗ್‌ಚುಕ್ ಹೇಳಿಕೊಂಡಿದ್ದಾರೆ. ಅಲ್ಲದೆ, ಸುಮಾರು 24 ಭದ್ರತಾ ಸಿಬ್ಬಂದಿ ಮತ್ತು 12 ವಾಹನಗಳನ್ನು ಒಳಗೊಂಡ ತಮ್ಮ 2 ತಿಂಗಳ ಗೃಹಬಂಧನಕ್ಕೂ ಅಷ್ಟೇ ಪ್ರಮಾಣದ ಹಣವನ್ನು ವ್ಯಯಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಲಡಾಖ್‌ನ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಸೋನಮ್ ವಾಂಗ್‌ಚುಕ್ ಬಂಧನ

“ಇದು ದೇಶದ ಸುರಕ್ಷತೆಗಾಗಿ ಅಲ್ಲ, ಭ್ರಷ್ಟ ರಾಜಕಾರಣಿಗಳ ಸುರಕ್ಷತೆಗಾಗಿ ಮಾಡುತ್ತಿರುವ ಖರ್ಚು” ಎಂದು ಬರೆದಿರುವ ಅವರು, ಲಡಾಖ್‌ನ ಜ್ವಲಂತ ಸಮಸ್ಯೆಗಳಿಗಿಂತ ತಮ್ಮನ್ನು ಬಂಧನದಲ್ಲಿಡುವುದಕ್ಕೇ ಆಡಳಿತವು ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ದೂರಿದ್ದಾರೆ.

ಲಡಾಖ್‌ನ ಗಡಿ, ಶಾಲೆಗಳು ಮತ್ತು ಆಸ್ಪತ್ರೆಗಳ ಬಗ್ಗೆ ಪ್ರಶ್ನೆ:

ಸಾರ್ವಜನಿಕರ ಹಣವನ್ನು ಕೇಂದ್ರಾಡಳಿತ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಬಳಸಬೇಕು ಎಂದು ಹೋರಾಟಗಾರ ವಾಂಗ್‌ಚುಕ್ ವಾದಿಸಿದ್ದಾರೆ. ಲಡಾಖ್‌ನ ಕುರಿಗಾಹಿಗಳು ತಮ್ಮ ಸಾಂಪ್ರದಾಯಿಕ ಹುಲ್ಲುಗಾವಲುಗಳ ದೊಡ್ಡ ಭಾಗವನ್ನು ಚೀನಾಕ್ಕೆ ಕಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಗಡಿಯಲ್ಲಿರುವ ಸೈನಿಕರಿಗೆ ಉತ್ತಮ ಸೌಲಭ್ಯಗಳ ಅಗತ್ಯವಿದೆ ಎಂದಿದ್ದಾರೆ.

ಇದರೊಂದಿಗೆ, ಲಡಾಖ್‌ನಲ್ಲಿ ಉತ್ತಮ ಶಾಲೆಗಳು ಮತ್ತು ಆಸ್ಪತ್ರೆಗಳ ಅಗತ್ಯವನ್ನೂ ಪ್ರಸ್ತಾಪಿಸಿರುವ ಅವರು, ಈ ವಿಷಯಗಳಿಗೆ ಸರ್ಕಾರವು ಹೆಚ್ಚಿನ ಗಮನ ಮತ್ತು ಅನುದಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬದಲಾವಣೆಗೆ ಕರೆ:

ತಾವು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ? ಅಥವಾ ಮುಂದಿನ ಚುನಾವಣೆಯ ಮೂಲಕ ಸರ್ಕಾರವನ್ನು ಬದಲಾಯಿಸಲು ಜನರೆಲ್ಲರೂ ಒಂದಾಗಬೇಕೇ? ಎಂದು ಕೇಳುವ ಮೂಲಕ ವಾಂಗ್‌ಚುಕ್ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ. ತಾವು ಕೇವಲ ಚುನಾವಣಾ ಬದಲಾವಣೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆಯೇ ಹೊರತು ಬೇರೆ ಯಾವುದೇ ಮಾರ್ಗದ ಬಗ್ಗೆ ಅಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ‘3 ಇಡಿಯಟ್ಸ್’ಗೂ ಸೋನಮ್ ವಾಂಗ್‌ಚುಕ್ ಸಂಬಂಧವಿಲ್ಲ: ಆಮೀರ್ ಖಾನ್

ಅಂದಹಾಗೆ, 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10(26)ರ ಅಡಿಯಲ್ಲಿ, ಲಡಾಖ್ ಸೇರಿದಂತೆ ನಿರ್ದಿಷ್ಟ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡಗಳ ಸದಸ್ಯರು ಆ ಪ್ರದೇಶಗಳೊಳಗಿನ ಮೂಲಗಳಿಂದ ಗಳಿಸುವ ಅರ್ಹ ಆದಾಯದ ಮೇಲೆ ಆದಾಯ ತೆರಿಗೆ ಪಾವತಿಸುವುದರಿಂದ ವಿನಾಯಿತಿ ಪಡೆದಿದ್ದಾರೆ. ಈ ನಿಬಂಧನೆಯ ಷರತ್ತುಗಳಿಗೆ ಒಳಪಟ್ಟು, ಡಿವಿಡೆಂಡ್‌ಗಳು ಮತ್ತು ಭದ್ರತೆಗಳ ಮೇಲಿನ ಬಡ್ಡಿಯ ಮೂಲಕ ಬರುವ ಆದಾಯಕ್ಕೂ ಈ ವಿನಾಯಿತಿ ಅನ್ವಯಿಸುತ್ತದೆ.

ವಿನಾಯಿತಿ ಇದ್ದರೂ ತೆರಿಗೆ ಪಾವತಿ:

ತಮ್ಮ ಪೋಸ್ಟ್‌ನಲ್ಲಿ ಈ ವಿನಾಯಿತಿಯನ್ನು ಉಲ್ಲೇಖಿಸಿರುವ ವಾಂಗ್‌ಚುಕ್, ತಾವು ತೆರಿಗೆ ವಿನಾಯಿತಿಗೆ ಅರ್ಹರಾಗಿದ್ದರೂ ಸಹ ದೇಶಕ್ಕೆ ಕೊಡುಗೆ ನೀಡುವ ಸಲುವಾಗಿ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ವಾಂಗ್‌ಚುಕ್ ಅವರ ಸಂಚಾರದ ಮೇಲಿನ ನಿರ್ಬಂಧಗಳು ಮತ್ತು ಲಡಾಖ್‌ಗೆ ಹೆಚ್ಚಿನ ಸಾಂವಿಧಾನಿಕ ರಕ್ಷಣೆ ಹಾಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಗಳ ಕುರಿತು ವಾಂಗ್‌ಚುಕ್ ಮತ್ತು ಲಡಾಖ್ ಆಡಳಿತದ ನಡುವೆ ನಡೆಯುತ್ತಿರುವ ನಿರಂತರ ಸಂಘರ್ಷದ ನಡುವೆಯೇ ಈ ಹೇಳಿಕೆ ಹೊರಬಿದ್ದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
"ಬಿಜೆಪಿ ಸರ್ಕಾರವಿದ್ದಾಗಲೇ ಪರಿಹಾರ ಕೊಡದವರು ಈಗ ಕೊಡ್ತಾರಾ?"
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
'ಕುಮಾರಸ್ವಾಮಿ ಹೇಳಿಕೆ ಸುಳ್ಳು': ಎಂ.ಬಿ. ಪಾಟೀಲ್​​ ತಿರುಗೇಟು
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಸಿದ್ದರಾಮಯ್ಯ ಕಡೆಗಣನೆ ಆರೋಪಕ್ಕೆ ಡಿಸಿಎಂ ಪರಮೇಶ್ವರ್ ಸ್ಪಷ್ಟನೆ
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
ಮಂಡ್ಯ ಹೆದ್ದಾರಿಯಲ್ಲಿ ಕಾಂಗ್ರೆಸ್ ಮುಖಂಡನ ಬರ್ತ್‌ಡೇ ದರ್ಬಾರ್
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
‘ಡಾಲಿಯಿಂದ ಮೋಸ ಆಗಿದೆ’; ರೀಷ್ಮಾ ನಾಣಯ್ಯ ಆರೋಪಕ್ಕೆ ಕಾರಣ ಏನು?
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ರಾಜ್ಯದಲ್ಲಿ ಆಸ್ತಿ ಮಾರ್ಗಸೂಚಿ ದರ ಏರಿಕೆ ಸಾಧ್ಯತೆ; ಸುಳಿವು ಕೊಟ್ಟ ಡಿಸಿಎಂ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಒಟ್ಟು 16 ಸಾವಿರ ಕೋಟಿ ಬಿಡುಗಡೆ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಮೇಲುಕೋಟೆಯಲ್ಲಿ ರಾಜಮುಡಿ ಉತ್ಸವಸ್ವಾಮಿಯ ದರ್ಶನಕ್ಕೆ ಹರಿದುಬಂದ ಭಕ್ತಗಣ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಉಡುಪಿ: ವಿದ್ಯುತ್ ತಂತಿ ತಗುಲಿ ಹುಲ್ಲು ಸಾಗಿಸುತ್ತಿದ್ದ ಲಾರಿಗೆ ಬೆಂಕಿ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ
ಗಾನವಿ ಖಾಸಗಿವಿಷಯ ಬಿಚ್ಚಟ್ಟ ಸೌಂದರ್ಯಾ