AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘3 ಇಡಿಯಟ್ಸ್’ಗೂ ಸೋನಮ್ ವಾಂಗ್‌ಚುಕ್ ಸಂಬಂಧವಿಲ್ಲ: ಆಮೀರ್ ಖಾನ್

Sonam Wangchuk-Aamir Khan: ಅದ್ಭುತವಾದ ಸಂದೇಶ ಹೊಂದಿದ್ದ ಆ ಸಿನಿಮಾ ಭಾರತೀಯ ಚಿತ್ರರಂಗದ ಕಲ್ಟ್ ಸಿನಿಮಾ ಎನಿಸಿಕೊಂಡಿದೆ. ಆ ಸಿನಿಮಾ, ಭಾರತದ ಹೆಮ್ಮೆಯ ವಿಜ್ಞಾನಿ ಮತ್ತು ಈಗ ವಿದ್ಯಾರ್ಥಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದೆ ಎನ್ನಲಾಗಿತ್ತು. ಈ ಕುರಿತು ಹಲವಾರು ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಇದೀಗ ‘3 ಇಡಿಯಟ್ಸ್’ ಸಿನಿಮಾದ ನಾಯಕ ಆಮಿರ್ ಖಾನ್, ಆ ಸಿನಿಮಾಕ್ಕೂ ಸೋನಂ ವಾಂಗ್ಚುಕ್ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

‘3 ಇಡಿಯಟ್ಸ್’ಗೂ ಸೋನಮ್ ವಾಂಗ್‌ಚುಕ್ ಸಂಬಂಧವಿಲ್ಲ: ಆಮೀರ್ ಖಾನ್
Aamir Khan Sonam
ಮಂಜುನಾಥ ಸಿ.
|

Updated on: Jul 17, 2026 | 9:54 AM

Share

ಆಮಿರ್ ಖಾನ್ (Aamir Khan), ಮಾಧವನ್, ಶರ್ಮನ್ ಜೋಶಿ, ಕರೀನಾ ನಟಿಸಿ ರಾಜ್​​ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ ‘3 ಇಡಿಯಟ್ಸ್’ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ. ಅದ್ಭುತವಾದ ಸಂದೇಶ ಹೊಂದಿದ್ದ ಆ ಸಿನಿಮಾ ಭಾರತೀಯ ಚಿತ್ರರಂಗದ ಕಲ್ಟ್ ಸಿನಿಮಾ ಎನಿಸಿಕೊಂಡಿದೆ. ಆ ಸಿನಿಮಾ, ಭಾರತದ ಹೆಮ್ಮೆಯ ವಿಜ್ಞಾನಿ ಮತ್ತು ಈಗ ವಿದ್ಯಾರ್ಥಿಗಳ ಪರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಸೋನಂ ವಾಂಗ್ಚುಕ್ ಅವರ ಜೀವನ ಆಧರಿಸಿದೆ ಎನ್ನಲಾಗಿತ್ತು. ಈ ಕುರಿತು ಹಲವಾರು ಪೋಸ್ಟ್​​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಆದರೆ ಇದೀಗ ‘3 ಇಡಿಯಟ್ಸ್’ ಸಿನಿಮಾದ ನಾಯಕ ಆಮಿರ್ ಖಾನ್, ಆ ಸಿನಿಮಾಕ್ಕೂ ಸೋನಂ ವಾಂಗ್ಚುಕ್ ಅವರಿಗೂ ಸಂಬಂಧವಿಲ್ಲ ಎಂದಿದ್ದಾರೆ.

‘3 ಇಡಿಯಟ್ಸ್’ ಸಿನಿಮಾನಲ್ಲಿ ಸೈಲೆನ್ಸರ್ ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ, ಸೋನಂ ವಾಂಗ್ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ‘ಅವರ ಜೀವನ ಆಧರಿಸಿದ್ದ ‘3 ಇಡಿಯಟ್ಸ್’ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದ ನಟರು ಸಹ ಈ ಬಗ್ಗೆ ಮಾತನಾಡಬೇಕು’ ಎಂದಿದ್ದರು. ಇದೇ ಕಾರಣಕ್ಕೆ, ಲಂಡನ್​​ನ ಇಂಡಿಯನ್ ಫಿಲಂ ಫೆಸ್ಟಿವಲ್​​​ನ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ, ನಿರ್ಮಾಪಕ ಆಮಿರ್ ಖಾನ್ ಅವರಿಗೆ ‘3 ಇಡಿಯಟ್ಸ್’ ಸಿನಿಮಾ ಬಗ್ಗೆ ಮತ್ತು ಸೋನಂ ವಾಂಗ್ಚುಕ್ ಅವರ ಬಗ್ಗೆ ಪ್ರಶ್ನೆ ಎದುರಾಯ್ತು.

ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ‘ಲಗಾನ್’ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ನಟ ಆಮಿರ್ ಖಾನ್ ಭಾಗಿ ಆಗಿದ್ದರು. ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರಿಗೆ ಸೋನಮ್ ವಾಂಗ್‌ಚುಕ್ ಅವರ ಕುರಿತು ಪ್ರಶ್ನೆಯನ್ನು ಕೇಳಲಾಯಿತು. ‘3 ಇಡಿಯಟ್ಸ್’ ಸಿನಿಮಾದ ರಾಂಚೋ ಪಾತ್ರಕ್ಕೆ ಸೋನಮ್ ವಾಂಗ್‌ಚುಕ್ ಅವರ ಜೀವನ ಸ್ಫೂರ್ತಿ ಎಂಬುದು ವ್ಯಾಪಕವಾಗಿ ನಂಬಲ್ಪಟ್ಟಿದೆ, ಆದರೆ ಅದನ್ನು ಅಲ್ಲಗಳೆದ ಆಮೀರ್, ‘ಇಲ್ಲ, ಅದು ನಿಜವಲ್ಲ. ಅದು ತಪ್ಪು ಕಲ್ಪನೆ. ನಾವು ‘3 ಇಡಿಯಟ್ಸ್’ ಚಿತ್ರವನ್ನು ಮಾಡುತ್ತಿದ್ದಾಗ ಸೋನಮ್ ಅವರ ಬಗ್ಗೆ ನಮಗೆ ತಿಳಿದಿರಲಿಲ್ಲ. ನಾನು ಇತ್ತೀಚೆಗೆ ಚತುರ್ (ನಟ ಓಮಿ ವೈದ್ಯ) ಅವರ ವಿಡಿಯೋವನ್ನು ನೋಡಿದೆ, ಅವರು ಕೂಡ ಹಾಗೆಯೇ ಹೇಳಿದ್ದಾರೆ. ಆದರೆ ಅವರದ್ದು ತಪ್ಪು ಮಾಹಿತಿ. ರಾಜು ಅಥವಾ ಅಭಿಜತ್ (ರಾಜಕುಮಾರ್ ಹಿರಾನಿ ಅಥವಾ ಅಭಿಜತ್ ಜೋಶಿ – ‘3 ಇಡಿಯಟ್ಸ್’ ಸಿನಿಮಾದ ಬರಹಗಾರರು) ಯಾರಿಗೂ ಸೋನಮ್ ಅವರ ಬಗ್ಗೆ ತಿಳಿದಿರಲಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್‌ಗೆ ಕೊಲೆ ಬೆದರಿಕೆ; ಕೊಂದವರಿಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಅಯೋಧ್ಯೆ ಧಾರ್ಮಿಕ ಮುಖಂಡ

ಮುಂದುವರೆದು ಮಾತನಾಡಿದ ಆಮಿರ್ ಖಾನ್, ‘ಸೋನಮ್ ಅವರು ಮಾಡುತ್ತಿರುವ ಕೆಲಸ ಒಳ್ಳೆಯದು. ಅವರನ್ನು ಗೌರವಿಸಲು ಅವರು ‘3 ಇಡಿಯಟ್ಸ್’ ಚಿತ್ರದ ಪಾತ್ರದ ಮೇಲೆ ಆಧಾರಿತರಾಗಿರಬೇಕು ಎಂದೇನೂ ಇಲ್ಲ. ವಾಸ್ತವಿಕ ದೃಷ್ಟಿಕೋನದಿಂದ ನಾನು ಇದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾವೆಲ್ಲರೂ ಅವರ ಆರೋಗ್ಯ ಮತ್ತು ಜೀವನದ ಬಗ್ಗೆ ತುಂಬಾ ಕಳವಳ ಹೊಂದಿದ್ದೇವೆ. ಎಲ್ಲವೂ ಸುಖಾಂತ್ಯವಾಗಬೇಕೆಂದು ನಾವು ಆಶಿಸುತ್ತೇವೆ. ಅವರೆಲ್ಲರೂ (ಸೋನಂ) ಉಪವಾಸವನ್ನು ಕೈಬಿಡುತ್ತಾರೆ ಎಂದು ನಾವೆಲ್ಲರೂ ಆಶಿಸುತ್ತಿದ್ದೇವೆ’ ಎಂದು ಅಮೀರ್ ಹೇಳಿದರು.

‘3 ಇಡಿಯಟ್ಸ್’ ಚಿತ್ರದಲ್ಲಿ ಚತುರ್ ರಾಮಲಿಂಗಂ ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ ಅವರು ಸೋನಮ್ ವಾಂಗ್‌ಚುಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅಮೀರ್ ಖಾನ್ ಅವರ ಪಾತ್ರ ಫುನ್ಸುಖ್ ವಾಂಗ್ಡು ಸೋನಮ್ ವಾಂಗ್‌ಚುಕ್ ಅವರ ಜೀವನದಿಂದ ಸ್ಫೂರ್ತಿ ಪಡೆದಿದೆ ಎಂದು ಓಮಿ ನೆನಪಿಸಿದ್ದರು ಮತ್ತು ಅವರ ಆರೋಗ್ಯದ ಕಡೆಗೆ ಗಮನ ಹರಿಸುವಂತೆ ಎಲ್ಲರಿಗೂ ಒತ್ತಾಯಿಸಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೀಳುವ ಸ್ಥಿತಿಯಲ್ಲಿ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ
ಬೀಳುವ ಸ್ಥಿತಿಯಲ್ಲಿ 141 ವರ್ಷಗಳ ಇತಿಹಾಸವಿರುವ ಹಾರವಾಡ ಸರ್ಕಾರಿ ಶಾಲೆ
ಆಷಾಢ ಮಾಸದ ಮೊದಲ ಶುಕ್ರವಾರ ಶ್ರೀ ಚಾಮುಂಡೇಶ್ವರಿ ಅಲಂಕಾರ ಹೇಗಿದೆ ನೋಡಿ
ಆಷಾಢ ಮಾಸದ ಮೊದಲ ಶುಕ್ರವಾರ ಶ್ರೀ ಚಾಮುಂಡೇಶ್ವರಿ ಅಲಂಕಾರ ಹೇಗಿದೆ ನೋಡಿ
ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ಕೊಪ್ಪಳ ರೈಲು ನಿಲ್ದಾಣ!
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಷಾಢ ಶುಕ್ರವಾರ, ದಕ್ಷಿಣಾಯನವೂ ಶುರು: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಜೆಸಿಬಿ ಜೊತೆ ಆನೆಯ ಕಾಳಗ; ಇದು ನನ್ನ ಕಾಡು ಎಂದ ಗಜರಾಜ
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಥಾಣೆಯಲ್ಲಿ ಕಟ್ಟಡದಿಂದ ವಾಹನಗಳ ಮೇಲೆ ಬಿದ್ದ ಕ್ರೇನ್, ಓರ್ವ ಸಾವು
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಆಧುನೀಕರಣಗೊಂಡ 75 ರೈಲ್ವೆ ನಿಲ್ದಾಣಗಳು ನಾಳೆ ಮೋದಿಯಿಂದ ಲೋಕಾರ್ಪಣೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ಅಯೋಧ್ಯೆ ಹಗರಣ: ರಾಜ್ಯದ ಎಲ್ಲಾ ದೇವಾಲಯದ ಹುಂಡಿಗಳ ರಕ್ಷಣೆಗೆ ಬಿಗಿ ಭದ್ರತೆ
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?
ನ್ಯಾಯಬೆಲೆ ಅಂಗಡಿಯಲ್ಲಾಗುವ ಮೋಸ ತಡೆಯಲು ಬರಲಿದೆ ಹೊಸ ಯೋಜನೆ: ಏನದು?