
ಶಿಮ್ಲಾ, ಜೂನ್ 7: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಆರೋಗ್ಯದಲ್ಲಿ ದಿಢೀರನೆ ಏರುಪೇರಾಗಿದ್ದು, ತುರ್ತಾಗಿ ಅವರನ್ನು ಶಿಮ್ಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಸೋನಿಯಾ ಗಾಂಧಿ ಅವರಿಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉಂಟಾಗಿತ್ತು. “ಅವರು ಪ್ರಸ್ತುತ ಸ್ಥಿರವಾಗಿದ್ದಾರೆ ಮತ್ತು ವೈದ್ಯರು ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ” ಎಂದು ಹಿಮಾಚಲ ಪ್ರದೇಶ ಸರ್ಕಾರದ ಮೂಲಗಳು ತಿಳಿಸಿವೆ. ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಐಜಿಎಂಸಿ) ಹಿರಿಯ ವೈದ್ಯರು ಸೋನಿಯಾ ಗಾಂಧಿ (Sonia Gandhi) ಅವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆತರಲಾಗಿದೆ. ಅವರ ಸಂಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದೆ ಎಂದು ದೃಢಪಡಿಸಿದ್ದಾರೆ. ಅವರ ರಕ್ತದೊತ್ತಡ ಸ್ವಲ್ಪ ಹೆಚ್ಚಾಗಿದ್ದರೂ, ಅವರು ಆರೋಗ್ಯದಲ್ಲಿ ಸ್ಥಿರವಾಗಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇಂದು ದಿನನಿತ್ಯದ ವೈದ್ಯಕೀಯ ತಪಾಸಣೆಗಾಗಿ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯವರ ಪ್ರಧಾನ ಸಲಹೆಗಾರ (ಮಾಧ್ಯಮ) ನರೇಶ್ ಚೌಹಾಣ್ ಅವರ ಪ್ರಕಾರ, ಹಿರಿಯ ಕಾಂಗ್ರೆಸ್ ನಾಯಕಿಯನ್ನು ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಂದಾಗಿ ಕರೆತರಲಾಗಿದೆ. ಅವರು ಪ್ರಸ್ತುತ ಸ್ಥಿರರಾಗಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಗಾಂಧಿಯ ಆಸ್ತಿ ವಶಕ್ಕೆ ಮುಂದಾದ ಇಡಿ
ಖಾಸಗಿ ಭೇಟಿಗಾಗಿ ಶಿಮ್ಲಾದಲ್ಲಿರುವ ಸೋನಿಯಾ ಗಾಂಧಿ ಅವರು ಶಿಮ್ಲಾದ ಛರಾಬ್ರಾದಲ್ಲಿರುವ ಗಾಂಧಿ ಕುಟುಂಬದ ಖಾಸಗಿ ನಿವಾಸದಲ್ಲಿ ತಂಗಿದ್ದಾರೆ. ಅವರು ಭಾನುವಾರ ದೆಹಲಿಗೆ ಮರಳುವ ನಿರೀಕ್ಷೆಯಿದೆ. ಸೋನಿಯಾ ಗಾಂಧಿಯವರಿಗೆ ಆರೋಗ್ಯ ಕೆಟ್ಟ ಕಾರಣದಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆ ಮೂಲಗಳ ಪ್ರಕಾರ, ಅವರನ್ನು ತಜ್ಞ ವೈದ್ಯರ ತಂಡವು ವೈದ್ಯಕೀಯವಾಗಿ ಪರೀಕ್ಷಿಸುತ್ತಿದೆ.
Congress Parliamentary Party chairperson Sonia Gandhi has been brought to Indira Gandhi Medical College & Hospital in Shimla for routine health check-up due to some minor health issues. Doctors are examining her. She is stable. Details awaited: Naresh Chauhan, Principal Advisor… pic.twitter.com/As7QsoWsNe
— ANI (@ANI) June 7, 2025
ಸೋನಿಯಾ ಗಾಂಧಿಯವರನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆತರಲಾಯಿತು ಮತ್ತು ಅವರ ಸಂಪೂರ್ಣ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಯಿತು ಎಂದು ಐಜಿಎಂಸಿಯ ಹಿರಿಯ ವೈದ್ಯರು ದೃಢಪಡಿಸಿದ್ದಾರೆ. ಅವರ ರಕ್ತದೊತ್ತಡ ಸ್ವಲ್ಪ ಹೆಚ್ಚಿದ್ದರೂ, ಅವರು ಸ್ಥಿರವಾಗಿದ್ದಾರೆ. ಆಸ್ಪತ್ರೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಇಡಿ ಆರೋಪಪಟ್ಟಿ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ದೆಹಲಿ ಕೋರ್ಟ್ ನೋಟಿಸ್ ಜಾರಿ
ಇತ್ತೀಚಿನ ತಿಂಗಳುಗಳಲ್ಲಿ ಸೋನಿಯಾ ಗಾಂಧಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿರುವುದು ಇದೇ ಮೊದಲಲ್ಲ. ಫೆಬ್ರವರಿಯಲ್ಲಿ ಕೂಡ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಅವರನ್ನು ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಉನಾಗೆ ಎರಡು ದಿನಗಳ ಭೇಟಿ ನೀಡಿದ್ದ ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ತಮ್ಮ ಭೇಟಿಯನ್ನು ಮೊಟಕುಗೊಳಿಸಿ ಶಿಮ್ಲಾಗೆ ಹಿಂತಿರುಗಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಛರಾಬ್ರಾದಲ್ಲಿ ಖಾಸಗಿ ನಿವಾಸವಿದೆ. ಅಲ್ಲಿ ಗಾಂಧಿ ಕುಟುಂಬವು ಬೇಸಿಗೆಯಲ್ಲಿ ಸಮಯ ಕಳೆಯಲು ಹೆಚ್ಚಾಗಿ ಬರುತ್ತಿರುತ್ತದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ