Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಗಾಂಧಿಯ ಆಸ್ತಿ ವಶಕ್ಕೆ ಮುಂದಾದ ಇಡಿ

2014ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ನೀಡಿದ ದೂರಿನಿಂದ ಶುರುವಾದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಂಗ್ ಇಂಡಿಯನ್ ಕೇವಲ 50 ಲಕ್ಷ ರೂ.ಗೆ 2,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಎಜೆಎಲ್ ಆಸ್ತಿಗಳನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಲಾಗಿತ್ತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಎಜೆಎಲ್ ಪ್ರಕಟಿಸುತ್ತಿದ್ದು, ಅದು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ. ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯಂಗ್ ಇಂಡಿಯನ್‌ನ ಬಹುಪಾಲು ಷೇರುದಾರರಾಗಿದ್ದು, ಇಬ್ಬರೂ ತಲಾ ಶೇ. 38ರಷ್ಟು ಷೇರುಗಳನ್ನು ಹೊಂದಿದ್ದಾರೆ. ಇದೀಗ ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇಡಿ) ಕ್ರಮಗಳನ್ನು ಪ್ರಾರಂಭಿಸಿದೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣ; ಸೋನಿಯಾ, ರಾಹುಲ್ ಗಾಂಧಿಯ ಆಸ್ತಿ ವಶಕ್ಕೆ ಮುಂದಾದ ಇಡಿ
New Project 2025 04 12t170726.200
Follow us
ಸುಷ್ಮಾ ಚಕ್ರೆ
| Updated By: ಡಾ. ಭಾಸ್ಕರ ಹೆಗಡೆ

Updated on:Apr 12, 2025 | 5:40 PM

ನವದೆಹಲಿ, ಏಪ್ರಿಲ್ 12: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿಗೆ (Rahul Gandhi) ಮತ್ತೊಮ್ಮೆ ಇಡಿ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ವಿರುದ್ಧದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಇಂದು ನೋಟಿಸ್ ಜಾರಿ ಮಾಡಿದೆ. ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬೈನ ಬಾಂದ್ರಾ ಪ್ರದೇಶದ ಆವರಣದಲ್ಲಿ ಮತ್ತು ಲಕ್ನೋದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಎಜೆಎಲ್ ಕಟ್ಟಡದಲ್ಲಿ ಶುಕ್ರವಾರ ಈ ನೋಟಿಸ್‌ಗಳನ್ನು ಅಂಟಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಏಪ್ರಿಲ್ 11ರಂದು ಕೇಂದ್ರ ತನಿಖಾ ಸಂಸ್ಥೆಯಾದ ಇಡಿ (ಜಾರಿ ನಿರ್ದೇಶನಾಲಯ) ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿನ ಆಸ್ತಿ ನೋಂದಣಿದಾರರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ ಆಸ್ತಿಗಳನ್ನು ಅಂದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಒಡೆತನದ ಕಂಪನಿಯಾದ ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ಕಟ್ಟಡಗಳಿವೆ. ಅವುಗಳನ್ನು ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.

ಇದನ್ನೂ ಓದಿ: ಅಧಿಕಾರಕ್ಕೆ ಬಂದರೆ ಶೇ.50ರ ಮೀಸಲಾತಿ ಮಿತಿ ರದ್ದು; ಅಹಮದಾಬಾದ್‌ನ ಕಾಂಗ್ರೆಸ್ ಸಮಾವೇಶದಲ್ಲಿ ರಾಹುಲ್ ಗಾಂಧಿ

ಇದನ್ನೂ ಓದಿ
Image
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
Image
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
Image
WITT 2025: ಪಿಎಂ ಮೋದಿ ಭಾಗಿ; ನೇರಪ್ರಸಾರ ವೀಕ್ಷಿಸಿ
Image
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?

ಈ ಪ್ರಕರಣವು ಒಮ್ಮೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸಿದ್ದ ಎಜೆಎಲ್ ಅನ್ನು ವೈಐಎಲ್ ಸ್ವಾಧೀನಪಡಿಸಿಕೊಳ್ಳುವಲ್ಲಿ ಹಣಕಾಸಿನ ಅಕ್ರಮಗಳು ಮತ್ತು ಹಣದ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದೆ. ಆರಂಭಿಕ ದೂರು ದಾಖಲಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಯಂಗ್ ಇಂಡಿಯನ್ 2,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಗಳ ಮೇಲೆ ಹಿಡಿತ ಸಾಧಿಸಲು ಎಜೆಎಲ್‌ನ ಆಸ್ತಿಗಳನ್ನು ದುರುದ್ದೇಶಪೂರಿತ ರೀತಿಯಲ್ಲಿ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು.

ಇಡಿ ಪ್ರಕಾರ, ಎಜೆಎಲ್‌ನ ಆಸ್ತಿಗಳಿಗೆ ಸಂಬಂಧಿಸಿದ 988 ಕೋಟಿ ರೂ.ಗಳ ಅಪರಾಧದ ಆದಾಯದ ಅಕ್ರಮ ವರ್ಗಾವಣೆಯನ್ನು ಬಹಿರಂಗಪಡಿಸಿದ ತನಿಖೆಗಳ ನಂತರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನವೆಂಬರ್ 2023ರಲ್ಲಿ, ಇಡಿ ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿನ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮತ್ತು 90.2 ಕೋಟಿ ರೂ.ಗಳ ಮೌಲ್ಯದ ಎಜೆಎಲ್ ಷೇರುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಮುಟ್ಟುಗೋಲನ್ನು ಏಪ್ರಿಲ್ 10ರಂದು ದೃಢಪಡಿಸಲಾಯಿತು.

ಇದನ್ನೂ ಓದಿ: ಸಂವಿಧಾನದ ಮೇಲಿನ ಹೀನಾಯ ದಾಳಿ; ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಕ್ಕೆ ಸೋನಿಯಾ ಗಾಂಧಿ ಆಕ್ರೋಶ

ಮುಂಬೈನ ಹೆರಾಲ್ಡ್ ಹೌಸ್‌ನಲ್ಲಿ ಪ್ರಸ್ತುತ 3 ಮಹಡಿಗಳ ನಿವಾಸಿಯಾಗಿರುವ ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಟ್ಸ್‌ಗೆ ಪ್ರತ್ಯೇಕ ನೋಟಿಸ್ ನೀಡಲಾಗಿದೆ. ಭವಿಷ್ಯದ ಎಲ್ಲಾ ಬಾಡಿಗೆ ಪಾವತಿಗಳನ್ನು ನೇರವಾಗಿ ಇಡಿಗೆ ಠೇವಣಿ ಇಡುವಂತೆ ಕಂಪನಿಗೆ ನಿರ್ದೇಶಿಸಲಾಗಿದೆ.

ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?:

2021ರಲ್ಲಿ ಪ್ರಾರಂಭವಾದ ಇಡಿ ತನಿಖೆಯು ಸುಬ್ರಮಣಿಯನ್ ಸ್ವಾಮಿ ಅವರು 2014ರಲ್ಲಿ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನಿಂದ ಹುಟ್ಟಿಕೊಂಡಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಯಂಗ್ ಇಂಡಿಯನ್ ಮೂಲಕ 50 ಲಕ್ಷ ರೂ. ಮೊತ್ತಕ್ಕೆ ಎಜೆಎಲ್​ ನ 2,000 ಕೋಟಿ ರೂ. ಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:20 pm, Sat, 12 April 25

ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಇದು ದೋಷಾರೋಪಣೆ ಮಾಡುವ ಸಮಯ ಅಲ್ಲ: ಶಿವಕುಮಾರ್
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
ಸುತ್ತೂರು ಮಠದಲ್ಲಿ ಮಗುವಿಗೆ ನಾಮಕರಣ ಮಾಡಿದ ಸಿದ್ದರಾಮಯ್ಯ
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಪಹಲ್ಗಾಮ್ ದಾಳಿಕೋರ ಆಸಿಫ್ ಶೇಖ್ ಮನೆಯಲ್ಲಿ ಸ್ಫೋಟ, ಬೆಂಕಿ, ನೆಲಸಮ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?