ತಮಿಳುನಾಡಿನ ದಿಟ್ಟ ಹೆಜ್ಜೆ; ರಾಜ್ಯಪಾಲರು, ರಾಷ್ಟ್ರಪತಿಯ ಒಪ್ಪಿಗೆಯಿಲ್ಲದೆ 10 ಕಾಯ್ದೆಗಳನ್ನು ಪ್ರಕಟಿಸಿದ ಸ್ಟಾಲಿನ್
ತಮಿಳುನಾಡು ಸರ್ಕಾರ ಇಂದು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳಿಂದ ಒಪ್ಪಿಗೆ ಪಡೆಯದೆ 10 ಕಾಯ್ದೆಗಳನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರವು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಒಪ್ಪಿಗೆ ಪಡೆಯದೆ ಕಾಯ್ದೆಗಳನ್ನು ಪ್ರಕಟಿಸಿದ್ದು ಇದೇ ಮೊದಲು. ತಮಿಳುನಾಡು ರಾಜ್ಯಪಾಲರು ಮಸೂದೆಗಳನ್ನು ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ರಾಜ್ಯಪಾಲರು ಇಂತಹ ವಿಳಂಬ ಧೋರಣೆ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

ಚೆನ್ನೈ, ಏಪ್ರಿಲ್ 12: ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ (Tamil Nadu Government) ಇಂದು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳಿಂದ (President Droupadi Murmu) ಒಪ್ಪಿಗೆ ಪಡೆಯದೆ 10 ಕಾಯ್ದೆಗಳನ್ನು ಪ್ರಕಟಿಸಿದೆ. ರಾಜ್ಯ ಸರ್ಕಾರವೊಂದು ರಾಜ್ಯಪಾಲರ ಅನುಮೋದನೆಯಿಲ್ಲದೆ ಕಾಯ್ದೆಗಳನ್ನು ಪ್ರಕಟಿಸಿದ್ದು ಇದೇ ಮೊದಲು. ಇದರೊಂದಿಗೆ, ರಾಜ್ಯ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕದಲ್ಲಿನ ಎಲ್ಲಾ ಅಡೆತಡೆಗಳನ್ನು ಸ್ಟಾಲಿನ್ ಸರ್ಕಾರ ಬಗೆಹರಿಸಿಕೊಂಡಿದೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಅಪ್‌ಲೋಡ್ ಮಾಡಿದ ಒಂದು ದಿನದ ನಂತರ ರಾಜ್ಯ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್ (Supreme Court) ರಾಜ್ಯಪಾಲರ ವಿಳಂಬ ಧೋರಣೆಯನ್ನು ಖಂಡಿಸಿತ್ತು. ಹಾಗೇ, ರಾಜ್ಯಪಾಲರು ಕಾಯ್ದಿರಿಸಿದ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳಿಗೂ 3 ತಿಂಗಳ ಗಡುವನ್ನು ನೀಡಿ ಮಹತ್ವದ ಆದೇಶ ಹೊರಡಿಸಿತ್ತು.
“ಮಾನ್ಯ ಸುಪ್ರೀಂ ಕೋರ್ಟ್, W.P.(C) No.1239/2023ರಲ್ಲಿ ದಿನಾಂಕ 08.04.2025ರಂದು ನೀಡಿದ ಆದೇಶದಲ್ಲಿ ಮೇಲೆ ತಿಳಿಸಲಾದ ಮಸೂದೆಯನ್ನು ಕಾಯ್ದಿರಿಸಿದ ದಿನಾಂಕದ ನಂತರ ಮಾನ್ಯ ರಾಷ್ಟ್ರಪತಿಗಳು ಮಾಡಿದ ಎಲ್ಲಾ ಕ್ರಮಗಳು ಕಾನೂನುಬಾಹಿರ ಮತ್ತು ಮಾನ್ಯ ರಾಜ್ಯಪಾಲರು ಸದರಿ ಮಸೂದೆಯನ್ನು ಒಪ್ಪಿಗೆಗಾಗಿ ಅವರಿಗೆ ಸಲ್ಲಿಸಿದ ದಿನಾಂಕದಂದು ಸಮ್ಮತಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ಆದೇಶಿಸಿದೆ. ಆದ್ದರಿಂದ, 08.04.2025ರಂದು ಮಾನ್ಯ ಭಾರತದ ಸುಪ್ರೀಂ ಕೋರ್ಟ್‌ನ ಮೇಲಿನ ಆದೇಶಗಳ ಪ್ರಕಾರ, 2022ರ 48ರ LA ಮಸೂದೆಯನ್ನು ಮಾನ್ಯ ರಾಜ್ಯಪಾಲರು 18 ನವೆಂಬರ್ 2023ರಂದು ಸಮ್ಮತಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ” ಎಂದು ತಮಿಳುನಾಡು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಮತ್ತೆ ಬಿಜೆಪಿ-ಎಐಎಡಿಎಂಕೆ ಮೈತ್ರಿ; ಎಡಪ್ಪಾಡಿ ಪಳನಿಸ್ವಾಮಿ ಸಿಎಂ ಅಭ್ಯರ್ಥಿ
ಈ ಕಾಯ್ದೆಗಳು ರಾಜ್ಯ ಸರ್ಕಾರವು ರಾಜ್ಯ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸಲು ಅಧಿಕಾರ ನೀಡಿದೆ. ಕಾನೂನಿನ ನಿಬಂಧನೆಯನ್ನು ಕಾರ್ಯಗತಗೊಳಿಸಲು ಉದ್ದೇಶಪೂರ್ವಕ ಲೋಪದ ಆಧಾರದ ಮೇಲೆ ಕುಲಪತಿಗಳನ್ನು ತೆಗೆದುಹಾಕುವ ಅಧಿಕಾರವನ್ನು ಕಾಯ್ದಿರಿಸಲಾಗಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಈ ಕಾಯ್ದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿದು ನಂತರ ಅವುಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದರು.
A historic and unprecedented victory for the DMK and the people of Tamil Nadu, led by the resolute leadership of TN CM @mkstalin! For the first time, a state government has enacted 10 bills without the assent of the Governor, ++ pic.twitter.com/T2Bo6y5RBU
— Mannu (@meharaazzz) April 12, 2025
ಡಿಎಂಕೆ ಸಂಸದರ ಪ್ರತಿಕ್ರಿಯೆ:
ಡಿಎಂಕೆ ಸಂಸದ ಪಿ. ವಿಲ್ಸನ್ ಅವರು ಈ ನಿರ್ಧಾರದ ಮೂಲಕ ಇತಿಹಾಸವನ್ನು ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ. ” ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತಮಿಳುನಾಡು ಸರ್ಕಾರವು ಸರ್ಕಾರಿ ಗೆಜೆಟ್‌ನಲ್ಲಿ 10 ಕಾಯ್ದೆಗಳನ್ನು ಪ್ರಕಟಿಸಿದೆ ಮತ್ತು ಅವು ಜಾರಿಗೆ ಬರುತ್ತವೆ! ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಹಿ ಇಲ್ಲದೆ, ಸುಪ್ರೀಂ ಕೋರ್ಟ್‌ನ ತೀರ್ಪಿನ ಬಲದಿಂದ ಜಾರಿಗೆ ಬಂದ ಭಾರತದ ಶಾಸಕಾಂಗದ ಮೊದಲ ಕಾಯ್ದೆಗಳಾಗಿರುವುದರಿಂದ ಇವು ಇತಿಹಾಸವನ್ನು ನಿರ್ಮಿಸಿವೆ” ಎಂದು ಅವರು ಹೇಳಿದ್ದಾರೆ.
Pursuant to the order of the Hon. SC the Tamil Nadu Government has notified the 10 Acts on the Government Gazette and they come into force!
History is made as these are the first Acts of any legislature in India to have taken effect without the signature of the Governor /… https://t.co/X86hh7bRT9 pic.twitter.com/nSGy3qjcvC
— P. Wilson (@PWilsonDMK) April 12, 2025
ಏಪ್ರಿಲ್ 8ರಂದು, 10 ಪ್ರಮುಖ ಮಸೂದೆಗಳಿಗೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವ ನಿರ್ಧಾರಕ್ಕಾಗಿ ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ನಿರ್ಧಾರವನ್ನು “ಕಾನೂನುಬಾಹಿರ” ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಈ ತೀರ್ಪು ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸ್ವಾಗತಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Sat, 12 April 25