ಅಂದು ಸೋನಿಯಾ ಗಾಂಧಿ ಕಾಲರ್ ಹಿಡಿದೆಳೆಯಲು ಪ್ರಯತ್ನಿಸಿದ್ದರು: ಬಿಜೆಪಿ ಸಂಸದ ನಿಶಿಕಾಂತ್ ದುಬೆ
ಅಂದು ಕಾಂಗ್ರೆಸ್ ಸಚಿವ ವಿ ನಾರಾಯಣಸಾಮಿ ಅವರು ವಿಧೇಯಕವನ್ನು ಮಂಡಿಸುತ್ತಿದ್ದರು. ಸಮಾಜವಾದಿ ಪಕ್ಷದ ಯಶವೀರ್ ಸಿಂಗ್ ಅವರು ಪರಿಶಿಷ್ಟ ಜಾತಿಯ ಸಂಸದರಾಗಿದ್ದರು. ಈ ಜನರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಮಾತನಾಡುತ್ತಾರೆ. ಯಶವೀರ್ ಸಿಂಗ್ ಅವರು ನಾರಾಯಣಸಾಮಿ ಅವರಿಂದ ಪೇಪರ್ ಕಸಿದುಕೊಂಡಿದ್ದರು. ಆಗ ಲೋಕಸಭೆಯಲ್ಲಿ, ಸೋನಿಯಾ ಗಾಂಧಿ ಅವರ (ಯಶವೀರ್ ಸಿಂಗ್) ಕಾಲರ್ ಹಿಡಿಯಲು ಪ್ರಯತ್ನಿಸಿದ್ದರು
ದೆಹಲಿ ಸೆಪ್ಟೆಂಬರ್ 20: ಲೋಕಸಭೆಯಲ್ಲಿ (Lok Sabha) ಬುಧವಾರ ಮಹಿಳಾ ಮೀಸಲಾತಿ ಮಸೂದೆ (Women’s Reservation Bill) ಚರ್ಚೆ ನಡೆಯುುತ್ತಿರುವಾಗ ಮಾತನಾಡಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ (Nishikant Dubey), 2012ರಲ್ಲಿ ಲೋಕಸಭೆಯಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿ ಮಸೂದೆ ಚರ್ಚೆ ವೇಳೆ ಏನಾಗಿತ್ತು ಎಂಬುದನ್ನು ಅವರು ಸೋನಿಯಾ ಗಾಂಧಿ (Sonia Gandhi) ಅವರಿಗೆ ನೆನಪಿಸಿದ್ದಾರೆ. ಇದೇ ಸದನದಲ್ಲಿ ವಿ ನಾರಾಯಣಸಾಮಿ ಅವರು ಎಸ್‌ಸಿ/ಎಸ್‌ಟಿಗಳಿಗೆ ಬಡ್ತಿ ಕೋಟಾದ ಮಸೂದೆಯನ್ನು ಮಂಡಿಸುತ್ತಿದ್ದಾಗ ಸಮಾಜವಾದಿ ಪಕ್ಷದ ಎಸ್‌ಸಿ ನಾಯಕ ಯಶವೀರ್ ಸಿಂಗ್, ಅವರ ಕೈಯಿಂದ ಮಸೂದೆ ಪ್ರತಿಯನ್ನು ಕಸಿದಿದ್ದರು. ಇದೇ ಸಂಸತ್ತಿನಲ್ಲಿ ಮೇಡಂ ಸೋನಿಯಾ ಗಾಂಧಿ ಅವರ ಕೊರಳಪಟ್ಟಿ ಎಳೆಯಲು ಮೊದಲು ಬಂದವರು ಎಂದು ಬಿಜೆಪಿ ಸಂಸದ ದುಬೆ ಹೇಳಿದ್ದಾರೆ. ಬಡ್ತಿಯಲ್ಲಿ ಮೀಸಲಾತಿ ತರುವ ವಿಧೇಯಕದ ಬಗ್ಗೆ ನಾನು ಮಾತನಾಡುವಾಗ, ಈ ಬೆಂಚುಗಳಲ್ಲಿದ್ದವರೆಲ್ಲರೂ ತಮ್ಮ ಕಾಲ ಮೇಲೆ ನಿಲ್ಲುತ್ತಾರೆ.
ಅಂದು ಕಾಂಗ್ರೆಸ್ ಸಚಿವ ವಿ ನಾರಾಯಣಸಾಮಿ ಅವರು ವಿಧೇಯಕವನ್ನು ಮಂಡಿಸುತ್ತಿದ್ದರು. ಸಮಾಜವಾದಿ ಪಕ್ಷದ ಯಶವೀರ್ ಸಿಂಗ್ ಅವರು ಪರಿಶಿಷ್ಟ ಜಾತಿಯ ಸಂಸದರಾಗಿದ್ದರು. ಈ ಜನರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬಗ್ಗೆ ಮಾತನಾಡುತ್ತಾರೆ. ಯಶವೀರ್ ಸಿಂಗ್ ಅವರು ನಾರಾಯಣಸಾಮಿ ಅವರಿಂದ ಪೇಪರ್ ಕಸಿದುಕೊಂಡಿದ್ದರು. ಆಗ ಲೋಕಸಭೆಯಲ್ಲಿ, ಸೋನಿಯಾ ಗಾಂಧಿ ಅವರ (ಯಶವೀರ್ ಸಿಂಗ್) ಕಾಲರ್ ಹಿಡಿಯಲು ಪ್ರಯತ್ನಿಸಿದ್ದರು. ಆಗ ನಾನು ಅವರಿಗೆ, ‘ನೀವು ಇಲ್ಲಿ ಸರ್ವಾಧಿಕಾರಿಯಲ್ಲ, ನೀವು ರಾಣಿಯಲ್ಲ, ನೀವು ಇಲ್ಲಿ ಜಗಳವಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ ಎಂದು ದುಬೆ ಹೇಳಿದ್ದಾರೆ ಬಿಜೆಪಿ ಮಧ್ಯಪ್ರವೇಶಿಸದಿದ್ದರೆ ತಮ್ಮ ಪಕ್ಷದ ಸಂಸದರು ಬದುಕುಳಿಯುತ್ತಿರಲಿಲ್ಲ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದರು. ನೀವು ಸಂಸದರನ್ನು ಕೊಲೆ ಮಾಡಲು ಯತ್ನಿಸಿದ್ದೀರಿ. ಈಗ ನೀವು ಮೈತ್ರಿ ಮಾಡಿಕೊಂಡಿದ್ದೀರಿ” ಎಂದು ದುಬೆ ವಾಗ್ದಾಳಿ ನಡೆಸಿದ್ದಾರೆ.
2012ರಲ್ಲಿ ಏನಾಯಿತು?
2012 ರ ಸುದ್ದಿ ವರದಿಗಳು ಲೋಕಸಭೆಯಲ್ಲಿನ ಗೊಂದಲದ ಸಮಯದಲ್ಲಿ ಗಾಂಧಿಯವರ ಹಸ್ತಕ್ಷೇಪದ ಬಗ್ಗೆ ಹೇಳುತ್ತವೆ. ಪುದುಚೇರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾರಾಯಣಸಾಮಿ ಅವರಿಂದ ಪೇಪರ್ ಕಸಿದುಕೊಂಡ ಯಶವೀರ್ ಸಿಂಗ್ ಅವರನ್ನು ಹಿಡಿದುಕೊಂಡು “ನೀವು ಏನು ಮಾಡುತ್ತಿದ್ದೀರಿ” ಎಂದು ಕೇಳಿದ್ದರು ಎಂದು ವರದಿಯಾಗಿದೆ. ಅವರು ಸಿಂಗ್ ಅವರ ಕೈಯಿಂದ ಪತ್ರಿಕೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರು, ಆದರೆ ಸಾಧ್ಯವಾಗಲಿಲ್ಲ ಎಂದು ಮಾಧ್ಯಮ ವರದಿಗಳು ಹೇಳುತ್ತವೆ. ಆಗಿನ ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿದ್ದ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರು ನಮ್ಮ ಸಂಸದರ ಮೇಲಿನ ದಾಳಿಯನ್ನು ಖಂಡಿಸಿದ್ದರು.
ಎಡಪಕ್ಷದ ನಾಯಕರಿಗೆ ಬಿಜೆಪಿ ಮನ್ನಣೆ
“ಮಹಿಳಾ ಮೀಸಲಾತಿ ಮಸೂದೆಯ ಪರವಾಗಿ ಹೆಚ್ಚು ಮಾತನಾಡಿದ ಇಬ್ಬರು ಮಹಿಳೆಯರು ಎಂದರೆ ಬಂಗಾಳದ ಗೀತಾ ಮುಖರ್ಜಿ ಮತ್ತು ಬಿಜೆಪಿಯ ಸುಷ್ಮಾ ಸ್ವರಾಜ್. ಅವರಿಲ್ಲದೆ ನಾವು ಈ ದಿನಾಂಕವನ್ನು ನೋಡುವುದಿಲ್ಲ. ಆದರೆ ಸೋನಿಯಾ ಜಿ ಅವರನ್ನು ಉಲ್ಲೇಖಿಸಲಿಲ್ಲ. ಇದು ಯಾವ ರೀತಿಯ ರಾಜಕೀಯ? ದುಬೆ ಕೇಳಿದರು. ಮುಖರ್ಜಿ ಅವರು 1980 ಮತ್ತು 2000 ರ ನಡುವೆ ಬಂಗಾಳದ ಪನ್ಸ್ಕುರಾದಿಂದ ಸಿಪಿಐನ ಏಳು ಬಾರಿ ಸಂಸದರಾಗಿದ್ದರು.
ಬುಧವಾರ ನಡೆದ ಚರ್ಚೆಯಲ್ಲಿ ಸೋನಿಯಾ ಗಾಂಧಿ ಅವರು ಮಹಿಳಾ ಮೀಸಲಾತಿ ಮಸೂದೆಗೆ ತಮ್ಮ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸಿದ್ದು, ಮಸೂದೆ ತಕ್ಷಣವೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ನಾನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಕಳೆದ 13 ವರ್ಷಗಳಿಂದ, ಭಾರತೀಯ ಮಹಿಳೆಯರು ತಮ್ಮ ರಾಜಕೀಯ ಜವಾಬ್ದಾರಿಗಳಿಗಾಗಿ ಕಾಯುತ್ತಿದ್ದಾರೆ. ಈಗ ಅವರನ್ನು ಇನ್ನೂ ಕೆಲವು ವರ್ಷಗಳು – ಎರಡು ವರ್ಷ, ನಾಲ್ಕು ವರ್ಷ, ಆರು ವರ್ಷ, ಎಂಟು ವರ್ಷ ಕಾಯಲು ಕೇಳಲಾಗುತ್ತಿದೆ. ಭಾರತೀಯ ಮಹಿಳೆಯರೊಂದಿಗೆ ಇಂತಹ ವರ್ತನೆ ಸೂಕ್ತವೇ?” ಎಂದು ಸೋನಿಯಾ ಗಾಂಧಿ ಹೇಳಿದರು.
ಈ ಮಸೂದೆ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುತ್ತದೆ. ಜನಗಣತಿ ಮತ್ತು ಡಿಲಿಮಿಟೇಶನ್ ಕಾರ್ಯ ಮುಗಿದ ನಂತರವೇ ಮೀಸಲಾತಿ ಜಾರಿಗೆ ಬರಲಿದೆ.
ಇದನ್ನೂ ಓದಿ: ಶೇ33 ಮಹಿಳಾ ಮೀಸಲಾತಿಗೆ ನಿರ್ಣಯ ಅಂಗೀಕರಿಸಿದ ಮೊದಲ ಪಕ್ಷ ಬಿಜೆಪಿ: ಮೇಘವಾಲ್
ಮಹಿಳಾ ಮೀಸಲಾತಿ ಬಗ್ಗೆ ನಿಶಿಕಾಂತ್ ದುಬೆ ಹೇಳಿದ್ದೇನು?
ಮಸೂದೆಯನ್ನು ತಕ್ಷಣವೇ ಏಕೆ ಜಾರಿಗೆ ತರುತ್ತಿಲ್ಲ ಎಂಬ ಸೋನಿಯಾ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಿದ ನಿಶಿಕಾಂತ್ ದುಬೆ, ನೀವು ಸಂವಿಧಾನದ ವಿರುದ್ಧ ಏಕೆ ಹೋಗುತ್ತೀರಿ, ಮೊದಲು ಜನಗಣತಿ ಮಾಡಿ ನಂತರ ಡಿಲಿಮಿಟೇಶನ್ ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ನಂತರ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
“ನಾನು ಈ ಘಮಾಂಡಿಯಾ ಮೈತ್ರಿಯ ಎಲ್ಲಾ ಭಾಷಣಗಳನ್ನು ಓದಿದ್ದೇನೆ. ಇಂದು ಸೋನಿಯಾ ಜಿ ಮಾತನಾಡುವಾಗ, ಅವರು ರಾಜಕೀಯಕ್ಕಿಂತ ಮೇಲೇರುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಈ ಮೀಸಲಾತಿಗಾಗಿ ಹೆಚ್ಚು ಹೋರಾಡಿದ ಇಬ್ಬರು ಮಹಿಳೆಯರಾದ ಸುಷ್ಮಾ ಸ್ವರಾಜ್ ಅಥವಾ ಗೀತಾ ಮುಖರ್ಜಿ ಹೆಸರನ್ನು ಸೋನಿಯಾ ಜಿ ತೆಗೆದುಕೊಂಡಿಲ್ಲ. ಆದರೆ ನೀವು ಕ್ರೆಡಿಟ್ ತೆಗೆದುಕೊಂಡಿದ್ದೀರಿ ಎಂದು ದುಬೆ ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Wed, 20 September 23