ದೇಶದ ರಾಷ್ಟ್ರೀಯ ಭದ್ರತೆ, ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪಾದ ಮಾಹಿತಿಯನ್ನು ಹರಡುವುದಕ್ಕಾಗಿ ಭಾರತ ಸರ್ಕಾರವು ಯೂಟ್ಯೂಬ್ (Youtube) ಚಾನೆಲ್‌ಗಳಿಂದ ಕೆಲವು ವಿಡಿಯೊಗಳನ್ನು ಮತ್ತೊಮ್ಮೆ ನಿರ್ಬಂಧಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಬಾರಿ 10 ಯೂಟ್ಯೂಬ್ ಚಾನೆಲ್‌ಗಳಿಂದ 45 ಯೂಟ್ಯೂಬ್ ವಿಡಿಯೊಗಳನ್ನು ನಿರ್ಬಂಧಿಸಿದೆ. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು 2021 ರ ನಿಬಂಧನೆಗಳ ಅಡಿಯಲ್ಲಿ 23.09.2022 ರಂದು ಸಂಬಂಧಿಸಿದ ವಿಡಿಯೊಗಳನ್ನು ನಿರ್ಬಂಧಿಸಲು ಆದೇಶಗಳನ್ನು ನೀಡಲಾಗಿದೆ. ನಿರ್ಬಂಧಿಸಲಾದ ವೀಡಿಯೊಗಳು 1 ಕೋಟಿ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದವು ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಧಾರ್ಮಿಕ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಉದ್ದೇಶದಿಂದ ಹರಡಿದ ಸುಳ್ಳು ಸುದ್ದಿಗಳು ಮತ್ತು ಮಾರ್ಫ್ ಮಾಡಿದ ವಿಡಿಯೊಗಳನ್ನು ಇದು ಒಳಗೊಂಡಿತ್ತು. ಕೆಲವು ಸಮುದಾಯಗಳ ಧಾರ್ಮಿಕ ಹಕ್ಕುಗಳನ್ನು ಸರ್ಕಾರ ಕಸಿದುಕೊಂಡಿದೆ, ಧಾರ್ಮಿಕ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಬೆದರಿಕೆಗಳು, ಭಾರತದಲ್ಲಿ ಅಂತರ್ಯುದ್ಧದ ಘೋಷಣೆ ಇತ್ಯಾದಿ ತಪ್ಪಾದ ಮಾಹಿತಿಗಳನ್ನು ಈ ವಿಡಿಯೊಗಳಲ್ಲಿ ಪ್ರಸಾರ ಮಾಡಲಾಗಿದೆ. ಇಂತಹ ವೀಡಿಯೊಗಳು ಕೋಮು ಸೌಹಾರ್ದತೆಗೆ ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಸಾಮರ್ಥ್ಯವನ್ನು ಹೊಂದಿವೆ ಎಂದು ಕಂಡುಬಂದಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.
ಅಗ್ನಿಪಥ್ ಯೋಜನೆ, ಭಾರತೀಯ ಸಶಸ್ತ್ರ ಪಡೆಗಳು, ಭಾರತದ ರಾಷ್ಟ್ರೀಯ ಭದ್ರತಾ ಉಪಕರಣ, ಕಾಶ್ಮೀರ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿರುವ ವಿಡಿಯೊಗಳಲ್ಲು ಸಚಿವಾಲಯವು ನಿರ್ಬಂಧಿಸಿದೆ ಎಂದು ಅದು ಹೇಳಿದೆ.
ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳ ದೃಷ್ಟಿಕೋನದಿಂದ ಇವು ಸುಳ್ಳು ಮತ್ತು ಸೂಕ್ಷ್ಮ ವಿಷಯ ಎಂದು ಗಮನಿಸಲಾಗಿದೆ. ಕೆಲವು ವಿಡಿಯೊಗಳು ಭಾರತದ ಭೂಪ್ರದೇಶದ ಹೊರಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಭಾಗಗಳೊಂದಿಗೆ ಭಾರತದ ತಪ್ಪಾದ ಬಾಹ್ಯ ಗಡಿಯನ್ನು ಚಿತ್ರಿಸಲಾಗಿದೆ. ಇಂತಹ ಕಾರ್ಟೋಗ್ರಾಫಿಕ್ ತಪ್ಪು ನಿರೂಪಣೆಯು ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.
ಸಚಿವಾಲಯವು ನಿರ್ಬಂಧಿಸಿದ ವಿಷಯವು ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಭಾರತದ ಸ್ನೇಹ ಸಂಬಂಧಗಳು ಮತ್ತು ದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಹಾನಿಕಾರಕವಾಗಿದೆ ಎಂದು ಕಂಡುಬಂದಿದೆ ಅದರಂತೆ, 2000 ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69 ಎ ವ್ಯಾಪ್ತಿಯೊಳಗೆ ವಿಷಯವನ್ನು ಒಳಗೊಂಡಿದೆ, ”ಎಂದು ಅದು ಹೇಳಿದೆ.
Published On - 6:15 pm, Mon, 26 September 22