AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬದಲಾಗ್ತಾರಾ? ಇಲ್ಲ 2024ರ ಲೋಕಸಭೆ ಚುನಾವಣೆ ತನಕ ಇರ್ತಾರಾ?

ಗಾಂಧಿ ಕುಟುಂಬಯೇತರ ನಾಯಕನನ್ನು ಕಾಂಗ್ರೆಸ್​ ಅಧ್ಯಕ್ಷ ಮಾಡಲು ಇದೇ ಮೊದಲ ಬಾರಿಗೆ ಚುನಾವಣೆ ನಡೆಯಲಿದೆ,. ಇದರ ಮಧ್ಯೆ ಬಿಜೆಪಿ ಅಧ್ಯಕ್ಷ ಬದಲಾವಣೆ ಚರ್ಚೆಗಳು ಆರಂಭವಾಗಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬದಲಾಗ್ತಾರಾ? ಇಲ್ಲ  2024ರ ಲೋಕಸಭೆ ಚುನಾವಣೆ ತನಕ ಇರ್ತಾರಾ?
ಜೆಪಿ ನಡ್ಡಾ
TV9 Web
| Updated By: Digi Tech Desk|

Updated on:Sep 26, 2022 | 6:45 PM

Share

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ತಯಾರಿ ಆರಂಭವಾಗಿದೆ. ಇದಕ್ಕೆ ಪೂರಕವೆಂಬಂತೆ ಭಾರತ್ ಜೋಡೊ ಯಾತ್ರೆ ಮೂಲಕ ಕಾಂಗ್ರೆಸ್ Congress) ಪುಟಿದೇಳಲು ಇನ್ನಿಲ್ಲದ ಕಸರತ್ತು ನಡೆಸಿದೆ. ಬಿಜೆಪಿ ನೀತಿಗಳು, ಆಡಳಿತ ವೈಖರಿ, ಸಂಘರ್ಷದ ವಿರುದ್ಧ ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ಜನರ ಮನ ಗೆಲ್ಲುವುದಕ್ಕೆ ಯಾತ್ರೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸಹ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ತಂತ್ರಗಾರಿಕೆ ಶುರುವಿಟ್ಟುಕೊಂಡಿದೆ. ಇದರ ಮಧ್ಯೆ ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಯಾರಾಗ್ತಾರೆ ಎನ್ನುವ ಚರ್ಚೆಗಳು ಶುರುವಾಗಿವೆ.

ಹೌದು….ಈಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅಧಿಕಾರಾವಧಿಯು 20 ಜನವರಿ 2023ಕ್ಕೆ ಮುಕ್ತಾಯಗೊಳ್ಳುಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ ಸಾರಥ್ಯವನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಲೋಕಸಭಾ ಚುನಾವಣೆ ಗದ್ದಲದ ಮಧ್ಯೆ ಪಕ್ಷವನ್ನು ಮುನ್ನಡೆಸುವ ಸಮರ್ಥ ನಾಯಕ ಯಾರಿದ್ದಾರೆ? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಹಲವು ರಾಜ್ಯಗಳಲ್ಲಿ ಅಸೆಂಬ್ಲಿ ಎಲೆಕ್ಷನ್

ಹಲವು ರಾಜ್ಯಗಳಲ್ಲಿ ಮುಂದಿನ ವರ್ಷ ಅಂದ್ರೆ 2023ರಲ್ಲಿ ಅಸ್ಲೆಂಬಿ ಚುನಾವಣೆಗಳು ಎದುರಾಗಲಿವೆ. ಕರ್ನಾಟಕ, ಗುಜರಾತ್, ಮಧ್ಯ ಪ್ರದೇಶ, ತೆಲಂಗಾಣ, ತ್ರಿಪುರ, ಹಿಮಾಚಲ ಪ್ರದೇಶ, ರಾಜಸ್ಥಾನ, ಮೇಘಾಲಯ, ಮಿಜೋರಾಮ್ ಸೇರಿದಂತೆ ಇನ್ನು ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. ಇದರ ಮಧ್ಯೆ ಜೆಪಿ ನಡ್ಡಾ ಅವರನ್ನು ಇನ್ನಷ್ಟು ವರ್ಷಗಳ ಕಾಲ ಅಂದ್ರೆ ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೂ ನಡ್ಡಾ ಅವರನ್ನೇ ಮುಂದುವರೆಸುವ ಸಾಧ್ಯತೆಗಳಿವೆ.

2024ರ ವರೆಗೆ ನಡ್ಡಾ ಮುಂದುವರಿಕೆ

ಯೆಸ್…ದೇಶದ ಹಲವು ರಾಜ್ಯಗಳಲ್ಲಿ ಅಸ್ಲೆಂಬಿ ಚುನಾವಣೆಗಳು ಇರುವುದರಿಂದ ಜೆಪಿ ನಡ್ಡಾ ಅವರನ್ನೇ ಮುಂದುವರಿಸುವ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ ಚುನಾವಣೆ ನಡುವೆ ಅಧ್ಯಕ್ಷರ ಬದಲಾವಣೆ ಮಾಡಿದ್ರೆ, ಪಕ್ಷದಲ್ಲಿ ಏರಿಳಿತವಾಗಲಿವೆ. ಹೊಸ ಅಧ್ಯಕ್ಷ ಬಂದು ಪದಾಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುವಷ್ಟು ಸಮಯ ಇಲ್ಲ. ಹೀಗಾಗಿ ಸಧ್ಯಕ್ಕೆ ಅಧ್ಯಕ್ಷರ ಬದಲಾವಣೆಗೆ ಕೈ ಹಾಕುವುದು ಅನುಮಾನ.

ಹೀಗೆ ಎಲ್ಲಾ ಆಳ ಅಗಲ- ಅಳೆದು ತೂಗಿದ್ದು, ಅಂತಿಮವಾಗಿ ಜೆಪಿ ನಡ್ಡಾ ಅವರೇ 2024 ರವರೆಗೆ ಮುಂದುವರಿಯಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೊದಲ ಏಳು ತಿಂಗಳು ಜಗತ್ ಪ್ರಕಾಶ್ ನಡ್ಡಾ ಬಿಜೆಪಿಯ ಕಾರ್ಯಾಧ್ಯಕ್ಷರಾಗಿದ್ದ ನಡ್ಡಾ, 20 ಜನವರಿ 2020 ರಂದು ಅವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ತಮ್ಮ ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಸಕ್ರೀಯರಾಗಿರುವ ಜೆಪಿ ನಡ್ದಾ ತಮ್ಮ ಕ್ಲೀನ್ ಇಮೇಜ್ ಗಾಗಿ ಹೆಸರುವಾಸಿಯಾಗಿದ್ದಾರೆ. ಇದಲ್ಲದೆ ಅವರು RSS ಜೊತೆಗೆ ನಿಕಟ ಸಂಬಂಧ ಹೊಂದಿದ್ದಾರೆ.

ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Mon, 26 September 22