10 ನಿಮಿಷದಲ್ಲಿ ನಿಮ್ಮ ಹುಟ್ಟಡಗಿಸಲು ನಮಗೆ ಗೊತ್ತು: ಆರ್ಎಸ್ಎಸ್ಗೆ ಬಹಿರಂಗ ಬೆದರಿಕೆಯೊಡ್ಡಿದ ಎಸ್‌ಡಿಪಿಐ ನಾಯಕ
ಆರ್‌ಎಸ್‌ಎಸ್ ನವರಲ್ಲಿ ಹೇಳುವುದೇನೆಂದರೆ ನಿಮ್ಮ ಮುಂದೆ ನಾವು ಸೋಲೊಪ್ಪುವುದಿಲ್ಲ. ಒಂದೋ ಈ ದೇಶದಲ್ಲಿ ನಮ್ಮ ಆದರ್ಶಗಳು ಗೆಲ್ಲುತ್ತವೆ ಅಥವಾ ನಾವು ಕನಸು ಕಾಣುವ ಹುತಾತ್ಮತೆಯನ್ನು ನಾವು ಸ್ವೀಕರಿಸುತ್ತೇವೆ...
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ವಿರುದ್ಧ ಕೇಂದ್ರದ ‘ಆಪರೇಷನ್ ಆಕ್ಟೋಪಸ್’ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಪಿಎಫ್ಐಯ ರಾಜಕೀಯ ಸಂಘಟನೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಾಯಕ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೊ ಕೇರಳದ್ದು. ಇಲ್ಲಿರುವ ವ್ಯಕ್ತಿ ಮಲಯಾಳಂನಲ್ಲಿ ಬೆದರಿಕೆಯೊಡ್ಡಿದ್ದಾನೆ. ಪಿಎಫ್ಐ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಳಿ ನಡೆಸಿದ್ದರ ಬೆನ್ನಲ್ಲೇ, ಸಂಘಪರಿವಾರದ ಕಾರ್ಯಕರ್ತರು ಮತ್ತು ಅವರ ಆಸ್ತಿಗಳ ಮೇಲೆ ಪಿಎಫ್ಐ ಹಾನಿಯುಂಟು ಮಾಡಿದೆ. ಮಧುರೈ, ಸೇಲಂ ಮತ್ತು ಕನ್ಯಾಕುಮಾರಿಯಲ್ಲಿ ಪಿಎಫ್ಐ ಕಾರ್ಯಕರ್ತರು ಬಲಪಂಥೀಯರ ಕಚೇರಿಗಳ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಹಾನಿಯುಂಟು ಮಾಡಿದ್ದಾರೆ. ವಿಡಿಯೊದಲ್ಲಿ ಎಸ್‌ಡಿಪಿಐ ಮುಖಂಡರೊಬ್ಬರು ರಸ್ತೆ ಮಧ್ಯದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ್ದಾರೆ.
“Either our Ideology (Islamic) will win in this country or else we will attain martyrdom that we are awaiting….your agencies need the cover of night to arrest us but we need only 10 seconds to finish you in broad daylight” PFI leaders speech in front of Kerala Police!! pic.twitter.com/TU74Sw0ZVn
— നചികേതസ് (@nach1keta) September 23, 2022
ವಿಡಿಯೊದಲ್ಲೇನಿದೆ?
ಆರ್‌ಎಸ್‌ಎಸ್ ನವರಲ್ಲಿ ಹೇಳುವುದೇನೆಂದರೆ ನಿಮ್ಮ ಮುಂದೆ ನಾವು ಸೋಲೊಪ್ಪುವುದಿಲ್ಲ. ಒಂದೋ ಈ ದೇಶದಲ್ಲಿ ನಮ್ಮ ಆದರ್ಶಗಳು ಗೆಲ್ಲುತ್ತವೆ ಅಥವಾ ನಾವು ಕನಸು ಕಾಣುವ ಹುತಾತ್ಮತೆಯನ್ನು ನಾವು ಸ್ವೀಕರಿಸುತ್ತೇವೆ. ನೀವು ಕತ್ತಲೆಯ ಹಿಂದೆ ನಿಂತು ನಮ್ಮ ಕಾರ್ಯಕರ್ತರ ಮೇಲೆ ಮೇಲೆ ದಾಳಿ ಮಾಡಿದಾಗ, ಹಗಲು ಹೊತ್ತಿನಲ್ಲಿ ನಾವು ನಿಮ್ಮನ್ನು 10 ಸೆಕೆಂಡುಗಳಲ್ಲಿ ಹುಟ್ಟಡಗಿಸಬಲ್ಲೆವು. ನಿಮ್ಮ ಬೆದರಿಕೆಗೆ ಮಣಿಯದೆ ಮುಂದೆ ಹೋಗುವ ಒಂದು ಸಂಘಟನೆ ಮತ್ತು ಅದರ ಕಾರ್ಯಕರ್ತರು ಇಲ್ಲಿರುವುದು ಎಂದು ಎಸ್‌ಡಿಪಿಐ ಮುಖಂಡ ಹೇಳಿದಾಗ ಪ್ರೇಕ್ಷಕರು ಅವರನ್ನು ಹುರಿದುಂಬಿಸಿ ಘೋಷಣೆ ಕೂಗಿದ್ದಾರೆ.
ಕೇರಳ ಸರ್ಕಾರವನ್ನು ದೂಷಿಸಿದ ಬಿಜೆಪಿ
ಬಿಜೆಪಿ ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್ ಈ ಕೃತ್ಯವನ್ನು ಖಂಡಿಸಿದ್ದು, ಪಿಎಫ್‌ಐ-ಎಸ್‌ಡಿಪಿಐ ಕೇರಳ ಸರ್ಕಾರದೊಂದಿಗೆ ಶಾಮೀಲಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ. ನಾವು ಪಿಎಫ್‌ಐಗಳು ಮತ್ತು ಎಸ್‌ಡಿಪಿಐಗಳ ಈ ರೀತಿಯ ನಡವಳಿಕೆಯನ್ನು ಕಂಡಿದ್ದೇವೆ. ಇದು ಹೊಸದೇನಲ್ಲ. ಎನ್‌ಐಎ ಇದರ ಮೂಲವನ್ನು ಪತ್ತೆ ಹಚ್ಚುತ್ತಿದ್ದು ಅವರು ಈ ದುಷ್ಕರ್ಮಿಗಳನ್ನು ಮಟ್ಟ ಹಾಕಲಿದ್ದಾರೆ ಎಂದಿದ್ದಾರೆ. ನಾಗರಿಕ ಸಮಾಜದಲ್ಲಿ ಈ ರೀತಿಯ ಬೆದರಿಕೆಗಳು ವರ್ಕೌಟ್ ಆಗದ ಕಾರಣ ಈ ಜನರು ರಾಷ್ಟ್ರ ವಿರೋಧಿಗಳು ಮಾತ್ರವಲ್ಲದೆ ನಾಗರಿಕತೆಯ ವಿರೋಧಿಗಳೂ ಆಗಿದ್ದಾರೆ. ರಾಜ್ಯದಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ ಕೇರಳದಲ್ಲಿ ಮಾತ್ರ ಏಕೆ? ಆಡಳಿತದಲ್ಲಿ ಕೆಲವು ಕುತಂತ್ರವಿದ್ದು, ಈ ಕೋನವನ್ನೂ ತನಿಖೆ ಮಾಡಬೇಕು. ಬೇರೆ ರಾಜ್ಯಗಳಲ್ಲೂ ಈ ಬಂಧನ ನಡೆದಿದೆಯಾದರೂ ಯಾರೂ ಬಹಿರಂಗವಾಗಿ ಹೊರಗೆ ಬಂದು ಬೆದರಿಕೆ ಹಾಕಿಲ್ಲ. ಈ ಬಗ್ಗೆ ಆಡಳಿತ ಮತ್ತು ಎಡ ಸರ್ಕಾರ ಏನು ಮಾಡುತ್ತಿದೆ? ಈ ವಿಚಾರವನ್ನು ನಿಧಾನಕ್ಕೆ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆಯ ಮೇಲೆ ಒತ್ತಡವಿದೆಯೇ? ಈ ಕ್ರಮಗಳು ರಾಷ್ಟ್ರವಿರೋಧಿಯಾಗಿದ್ದು, ಸಹಿಸುವುದಿಲ್ಲ ಎಂದು ಅವರು ಹೇಳಿದರು.
ಕೇರಳದಲ್ಲಿ ಎಡಪಕ್ಷಗಳು ಆಡಳಿತ ನಡೆಸುತ್ತಿದ್ದು, ರಾಜ್ಯದಲ್ಲಿ ಪ್ರತಿಪಕ್ಷಗಳು ಪಿಎಫ್‌ಐ ಮತ್ತು ಎಸ್‌ಡಿಪಿಐಗೆ ಬೆಂಬಲ ನೀಡುತ್ತಿವೆ, ಈ ಕಾರಣಕ್ಕಾಗಿ ಅವರು ಬಹಿರಂಗವಾಗಿ ಬರುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಅವರು ರಾಜ್ಯದಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರಿಗೆ ಬೆದರಿಕೆ ಹಾಕಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅವರ ದೇಶವಿರೋಧಿ ಸಂಘಟನೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳನ್ನು ತಡೆಯುತ್ತಿದೆ ಅದಕ್ಕಾಗಿಯೇ ಅವರು ಅವುಗಳನ್ನು ಮುಗಿಸಲು ಬಯಸುತ್ತಾರೆ ಎಂದು ಬಿಜೆಪಿಯ ಗೋಪಾಲಕೃಷ್ಣ ಹೇಳಿದ್ದಾರೆ.
Published On - 5:59 pm, Mon, 26 September 22