ಶ್ರೀನಗರ: ದಶಕಗಳ ನಂತರ ಜಮ್ಮು ಮತ್ತು ಕಾಶ್ಮೀರದ (Jammu and Kashmir) ಜನರಿಗೆ ಮತ್ತೆ ಮಲ್ಟಿಪ್ಲೆಕ್ಸ್ಗಳಲ್ಲಿ ಚಲನಚಿತ್ರ (Cinema) ನೋಡುವ ಭಾಗ್ಯ ದೊರೆತಿದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ (Srinagar) ಸೋನ್ವಾರದಲ್ಲಿ ಮಂಗಳವಾರ (ಸೆ.20) ಮಲ್ಟಿಪ್ಲೆಕ್ಸ್ವೊಂದನ್ನು (Multiplex) ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಲಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ.
ವರದಿಯ ಪ್ರಕಾರ, ಮಲ್ಟಿಪ್ಲೆಕ್ಸ್ನಲ್ಲಿ, ಅಮೀರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಈ INOX ಮಲ್ಟಿಪ್ಲೆಕ್ಸ್ ಒಟ್ಟು 520 ಆಸನಗಳ ಸಾಮರ್ಥ್ಯದ ಮೂರು ಚಿತ್ರಮಂದಿರಗಳನ್ನು ಹೊಂದಿರುತ್ತದೆ.
A historic day for J&K UT! Inaugurated Multipurpose Cinema Halls at Pulwama and Shopian. It offers facilities ranging from movie screening, infotainment and skilling of youth. pic.twitter.com/QraMhHXSuN
— Office of LG J&K (@OfficeOfLGJandK) September 18, 2022
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಭಾನುವಾರ ದಕ್ಷಿಣ ಕಾಶ್ಮೀರದ ಜಿಲ್ಲೆಗಳಾದ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಸಿನಿಮಾ ಹಾಲ್‌ಗಳನ್ನು ಉದ್ಘಾಟಿಸಿದರು. ಅನಂತನಾಗ್, ಶ್ರೀನಗರ, ಬಂಡಿಪೋರಾ, ಗಂದರ್‌ಬಾಲ್, ದೋಡಾ, ರಾಜೌರಿ, ಪೂಂಚ್, ಕಿಶ್ತ್ವಾರ್ ಮತ್ತು ರಿಯಾಸಿಗಳಲ್ಲಿ ಕೂಡ ಚಿತ್ರಮಂದಿರಗಳು ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ನಾವು ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದ ಪ್ರತಿಯೊಂದು ಜಿಲ್ಲೆಗಳಲ್ಲಿ ಇಂತಹ ಬಹುಪಯೋಗಿ ಚಿತ್ರಮಂದಿರಗಳನ್ನು ನಿರ್ಮಿಸುತ್ತೇವೆ. ಇಂದು ಉದ್ಘಾಟಿಸಲಾದ ಚಿತ್ರಮಂದಿರಗಳನ್ನು ಪುಲ್ವಾಮಾ ಮತ್ತು ಶೋಪಿಯಾನ್‌ನ ಯುವಕರಿಗೆ ಅರ್ಪಿಸುತ್ತೇನೆ” ಎಂದು ತಿಳಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:22 pm, Sun, 18 September 22