ಜೆಪಿ ನಡ್ಡಾ ಪತ್ನಿ ಮಲ್ಲಿಕಾ ಅವರ ಕಳುವಾಗಿದ್ದ ಕಾರು ವಾರಾಣಸಿಯಲ್ಲಿ ಪತ್ತೆ, ಇಬ್ಬರ ಬಂಧನ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಳುವಾಗಿದ್ದ ಕಾರು ವಾರಾಣಸಿಯಲ್ಲಿ ಪತ್ತೆಯಾಗಿದೆ. ದೆಹಲಿಯ ಗೋವಿಂದಪುರಿ ಪ್ರದೇಶದಲ್ಲಿನ ಸರ್ವೀಸ್ ಸೆಂಟರ್ನಿಂದ ಕಾರು ಕಳುವಾಗಿತ್ತು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿಳಿ ಬಣ್ಣದ ಫಾರ್ಚುನರ್ ಎಸ್‌ಯುವಿಯನ್ನು ಮಾರ್ಚ್ 19 ರಂದು ಸರ್ವೀಸ್ ಸೆಂಟರ್‌ಗೆ ತೆಗೆದುಕೊಂಡು ಹೋದಾಗ ಕಳ್ಳತನವಾಗಿತ್ತು.

ಮಾರ್ಚ್ 19 ರಂದು, ಕಾರು ಚಾಲಕ ಜೋಗಿಂದರ್ ಸಿಂಗ್ ಅವರು ದೂರು ನೀಡಿದ್ದರು, ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನದ ಪತ್ತೆಗೆ ತನಿಖೆ ಆರಂಭಿಸಿದರು. ಇಬ್ಬರು ಬಂಧಿತ ವ್ಯಕ್ತಿಗಳನ್ನು ಶಾಹಿದ್ ಮತ್ತು ಶಿವಾಂಗ್ ತ್ರಿಪಾಠಿ ಎಂದು ಗುರುತಿಸಲಾಗಿದ್ದು, ಫರಿದಾಬಾದ್ ಬಳಿಯ ಬಧಕಲ್ ನಿವಾಸಿಗಳು.
ಈ ಇಬ್ಬರು ಕ್ರೆಟಾ ಕಾರಿನಲ್ಲಿ ಗೋವಿಂದಪುರಿಗೆ ಬಂದಿದ್ದರು, ಬಳಿಕ ಅವರು ಬಧಕಲ್ಗೆ ಕೊಂಡೊಯ್ದು ನಂತರ ಕದ್ದ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ್ದರು.
ಮತ್ತಷ್ಟು ಓದಿ: Lok Sabha Election: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರು ಕಳ್ಳತನ
ವಾಹನವು ಅಲಿಗಢ, ಲಖಿಂಪುರ ಖೇರಿ, ಬರೇಲಿ, ಸೀತಾಪುರ್ ಮತ್ತು ಲಖನೌ ಮೂಲಕ ವಾರಾಣಸಿ ತಲುಪಿತು. ಆರೋಪಿಗಳು ಫಾರ್ಚೂನರ್ ಅನ್ನು ನಾಗಾಲ್ಯಾಂಡ್‌ಗೆ ಕಳುಹಿಸಲು ಯೋಜಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:39 am, Sun, 7 April 24