ಬೀದಿ ನಾಯಿಗಳ ವಿಚಾರದಲ್ಲೂ ರಾಹುಲ್, ಚಿದಂಬರಂ ಭಿನ್ನ ರಾಗ

ಬೀದಿ ನಾಯಿ(Stray Dog)ಗಳ ವಿಚಾರದಲ್ಲೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕ ಪಿ ಚಿದಂಬರಂ ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮನುಷ್ಯರ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗಿ ರೇಬಿಸ್​ಗೆ ಬಲಿಯಾಗುತ್ತಿದ್ದಾರೆ. ಈ ಸಂಬಂಧ ದೆಹಲಿ ಹಾಗೂ ಎನ್​ಸಿಆರ್​ನಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅವುಗಳ ಆಶ್ರಯ ತಾಣಗಳಿಗೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶ ಹೊರಡಿಸಿದೆ. ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸಾಗಿಸಲು ಪ್ರಾಣಿ ದಯಾ ಸಂಸ್ಥೆಗಳು, ಎನ್‌ಜಿಒಗಳು ಅಡ್ಡಿಪಡಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ.

ಬೀದಿ ನಾಯಿಗಳ ವಿಚಾರದಲ್ಲೂ ರಾಹುಲ್, ಚಿದಂಬರಂ ಭಿನ್ನ ರಾಗ
ರಾಹುಲ್ ಗಾಂಧಿ

Updated on: Aug 12, 2025 | 12:34 PM

ನವದೆಹಲಿ, ಆಗಸ್ಟ್​ 12: ಬೀದಿ ನಾಯಿ(Stray Dog)ಗಳ ವಿಚಾರದಲ್ಲೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಹಿರಿಯ ನಾಯಕ ಪಿ ಚಿದಂಬರಂ ಭಿನ್ನ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮನುಷ್ಯರ ಮೇಲೆ ಬೀದಿ ನಾಯಿಗಳ ದಾಳಿ ಹೆಚ್ಚಾಗಿ ರೇಬಿಸ್​ಗೆ ಬಲಿಯಾಗುತ್ತಿದ್ದಾರೆ. ಈ ಸಂಬಂಧ ದೆಹಲಿ ಹಾಗೂ ಎನ್​ಸಿಆರ್​ನಲ್ಲಿನ ಬೀದಿ ನಾಯಿಗಳನ್ನು ಹಿಡಿದು ಅವುಗಳ ಆಶ್ರಯ ತಾಣಗಳಿಗೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶ ಹೊರಡಿಸಿದೆ.

ಬೀದಿ ನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸಾಗಿಸಲು ಪ್ರಾಣಿ ದಯಾ ಸಂಸ್ಥೆಗಳು, ಎನ್‌ಜಿಒಗಳು ಅಡ್ಡಿಪಡಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ. ಈ ಕುರಿತು ರಾಹುಲ್ ಗಾಂಧಿ ಹಾಗೂ ಪಿ ಚಿದಂಬರಂ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ, ಮೂಕ ಪ್ರಾಣಿಗಳು ಎಂದೂ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಪೋಸ್ಟ್​

ಬೀದಿನಾಯಿಗಳಿಗೆ ಆಶ್ರಯ, ಚುಚ್ಚುಮದ್ದುಗಳು, ಆಹಾರವನ್ನು ನೀಡಿ ಯಾವುದೇ ಕ್ರೌರ್ಯವಿಲ್ಲದೆ ಬೀದಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದು ಹೇಳಿದ್ದಾರೆ. ಹಾಗೆಯೇ ಪಿ ಚಿದಂಬರಂ ಕೂಡ ಈ ವಿಚಾರದ ಕುರಿತು ಪೋಸ್ಟ್​ ಮಾಡಿದ್ದು, ಬೀದಿ ನಾಯಿಗಳ ಕುರಿತ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಪ್ರತಿ ನಗರ ಮತ್ತು ಪಟ್ಟಣದಲ್ಲಿ ಜಾರಿಗೆ ತರಬೇಕು. ಬೀದಿ ನಾಯಿಗಳನ್ನು ಒಟ್ಟುಗೂಡಿಸಿ ಅವುಗಳನ್ನು ಆಶ್ರಯ ತಾಣಗಳಲ್ಲಿ ಇರಿಸುವುದು ಕಷ್ಟವೇನಲ್ಲ.

ಮತ್ತಷ್ಟು ಓದಿ: ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ

ಒಂದು ಪಟ್ಟಣಕ್ಕೆ ಬೇಕಾಗಿರುವುದು ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಅಥವಾ ಪುರಸಭೆಯ ಭೂಮಿ ಭೂಮಿಯನ್ನು ಸಮತಟ್ಟು ಮಾಡುವುದು ಮತ್ತು ಅದಕ್ಕೆ ಬೇಲಿ ಹಾಕುವುದು, ಮತ್ತು ನಾಯಿಗಳನ್ನು ಅಲ್ಲಿ ಬಿಡಬಹುದು ಎಂದು ಹೇಳಿದ್ದಾರೆ. ಬೀದಿ ನಾಯಿಗಳಿಂದ ಮಕ್ಕಳು ಹಾಗೂ ವೃದ್ಧರನ್ನು ಕಾಪಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಚಿದಂಬರಂ ಪೋಸ್ಟ್​

ಇತ್ತೀಚೆಗಷ್ಟೇ ಪಹಲ್ಗಾಮ್​ ಉಗ್ರರು ಪಾಕಿಸ್ತಾನದಿಂದ ಬಂದವರು ಎನ್ನುವ ವಿಚಾರ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿತ್ತು. ಚಿದಂಬರಂ ಪ್ರಧಾನಿ ಮೋದಿ ಬಳಿ ಉಗ್ರರು ಪಾಕಿಸ್ತಾನದವರು ಎಂಬುದಕ್ಕೆ ಸಾಕ್ಷಿ ಏನಿದೆ?, ಅವರು ದೇಶದ ಒಳಗಿನವರೂ ಆಗಿರಬಹುದಲ್ಲವೇ ಎಂದು ಪ್ರಶ್ನೆ ಕೇಳಿದ್ದರೆ, ಅತ್ತ ರಾಹುಲ್ ಗಾಂಧಿ ಹೌದು ಉಗ್ರರು ಪಾಕಿಸ್ತಾನದಿಂದಲೇ ಬಂದವರು ಎಂದು ಹೇಳಿದ್ದರು. ಆಗಲೇ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಆಚೆ ಬಂದಿತ್ತು.

ಸಂಬಂಧ ಪಟ್ಟ ಕಚೇರಿಗಳು, ಅಧಿಕಾರಿಗಳು 8 ವಾರದ ಒಳಗಾಗಿ ದೆಹಲಿ ಹಾಗೂ ಎನ್​ಸಿಆರ್​ ಪ್ರದೇಶದ ಬೀದಿಗಳಲ್ಲಿರುವ ನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್​ಗೆ ಹಾಕಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಂಡು ಬರುವ ನಾಯಿಗಳನ್ನು ಹಿಡಿಯಬೇಕು. ಅವುಗಳಿಗೆ ಆಶ್ರಯ ಸೌಲಭ್ಯ ಒದಗಿಸಲು ಮುನ್ಸಿಪಾಲ್ ಮತ್ತು ಇತರೆ ಏಜೆನ್ಸಿಗಳು ಕೂಡಿ ಕೆಲಸ ಮಾಡಬೇಕು. ನ್ಯಾಯಾಲಯ ನೀಡಿದ ಗಡುವಿನ ಒಳಗೆ ಕೆಲಸ ಪೂರ್ಣಗೊಳಿಸಬೇಕು ಎಂದು ಸುಪ್ರೀಂಕೋರ್ಟ್​ ಆದೇಶ ನೀಡಿದೆ.

ಒಮ್ಮೆ ನಾಯಿಯನ್ನು ಆಶ್ರಯ ತಾಣಕ್ಕೆ ಎತ್ತಿಕೊಂಡು ಹೋದ ಮೇಲೆ ಮತ್ತೆ ಬೀದಿಗೆ ತಂದು ಬಿಡಬಾರದು. ಕಾಲೋನಿಗೆ, ಬೀದಿಗೆ ಅಥವಾ ಸಾರ್ವಜನಿಕ ಸ್ಥಳಗಳಿಗೆ ನಾಯಿಗಳನ್ನು ಬಿಡಲೇಬಾರದು ಎಂದು ದೆಹಲಿ ಸರ್ಕಾರ, ಎಂಸಿಡಿ ಹಾಗೂ ಎನ್​ಡಿಎಂಸಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಒಂದು ವೇಳೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬಂದು ನಾಯಿ ವಾಪಸ್​ ತೆಗೆದುಕೊಂಡು ಹೋಗಲು ಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ಕೂಡ ನೀಡಿದೆ. ನಾಯಿಗಳ ಹಾವಾಳಿ ಹೆಚ್ಚಾಗಿ ರೇಬಿಸ್​ ಹರಡುತ್ತಿರುವುದನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್​ ಸುಮೋಟೋ ಕೇಸ್ ದಾಖಲು ಮಾಡಿಕೊಂಡಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ