ಪಕ್ಷಕ್ಕೆ ಬೀಗ ಹಾಕಿ, ರಾಜಕೀಯಕ್ಕೆ ಸಂಪೂರ್ಣ ವಿದಾಯ ಹೇಳಿದ ರಜನೀಕಾಂತ್; ಇನ್ನೇನಿದ್ದರೂ ಕೇವಲ ಅಭಿಮಾನಿಗಳ ಸಂಘ!

| Updated By: Skanda

Updated on: Jul 12, 2021 | 12:01 PM

ರಾಜಕೀಯ ಪಕ್ಷಕ್ಕೆ ಬೀಗ ಹಾಕಿದ ರಜನೀಕಾಂತ್, ‘ರಜಿನಿ ಮಕ್ಕಳ್ ಮನ್ರಂ’ ಪಕ್ಷದ ನಿರ್ವಾಹಕರ ಜತೆ ಸಭೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸಿದ್ದಾರೆ.

ಪಕ್ಷಕ್ಕೆ ಬೀಗ ಹಾಕಿ, ರಾಜಕೀಯಕ್ಕೆ ಸಂಪೂರ್ಣ ವಿದಾಯ ಹೇಳಿದ ರಜನೀಕಾಂತ್; ಇನ್ನೇನಿದ್ದರೂ ಕೇವಲ ಅಭಿಮಾನಿಗಳ ಸಂಘ!
ರಜನೀಕಾಂತ್
Follow us on

ಅನಾರೋಗ್ಯ ಕಾರಣಕ್ಕಾಗಿ ಸೂಪರ್​ಸ್ಟಾರ್​ ರಜನೀಕಾಂತ್​ ರಾಜಕೀಯಕ್ಕೆ ಸಂಪೂರ್ಣವಾಗಿ ವಿದಾಯ ಘೋಷಿಸಿದ್ದಾರೆ. ತಮ್ಮ ರಾಜಕೀಯ ಪಕ್ಷಕ್ಕೆ ಬೀಗ ಹಾಕಿದ ರಜನೀಕಾಂತ್, ‘ರಜಿನಿ ಮಕ್ಕಳ್ ಮನ್ರಂ’ ಪಕ್ಷದ ನಿರ್ವಾಹಕರ ಜತೆ ಸಭೆ ನಡೆಸಿದ ಬಳಿಕ ನಿರ್ಧಾರ ಪ್ರಕಟಿಸಿದ್ದಾರೆ. ಕೇವಲ ಅಭಿಮಾನಿಗಳ ಸಂಘ ಉಳಿಸಿಕೊಂಡ ರಜಿನಿಕಾಂತ್​, ಅನಾರೋಗ್ಯದ ಕಾರಣದಿಂದ ರಾಜಕೀಯದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಚೆನ್ನೈನ ಪೋಯಸ್​ಗಾರ್ಡನ್​ ನಿವಾಸದ ಬಳಿ ಘೋಷಣೆ ಮಾಡಿದ್ದಾರೆ.

‘ಅಣ್ಣತ್ತೆ’ ಚಿತ್ರದ ಶೂಟಿಂಗ್ ಮುಗಿದ ನಂತರ ರಜಿನಿ ತಮ್ಮ ರೂಟೀನ್ ಮೆಡಿಕಲ್ ಚೆಕಪ್​ಗೋಸ್ಕರ ಅಮೆರಿಕಾಗೆ ತೆರಳಿದ್ದರು. ಅಲ್ಲಿ ಅವರ ದೇಹದ ಸಂಪೂರ್ಣ ತಪಾಸಣೆ ನಡೆದಿದ್ದು ರಿಪೋರ್ಟ್​ಗಳೆಲ್ಲ ನಾರ್ಮಲ್ ಅಗಿವೆಯೆಂದು ನಟನ ಕೌಟುಂಬಿಕ ಮೂಲಗಳು ತಿಳಿಸಿದ್ದವು. ಹಾಗಾಗಿ, ಅವರು ತಮ್ಮ ಮಗಳು ಐಶ್ವರ್ಯ ಜತೆಗೆ ಕಳೆದ ವಾರವಷ್ಟೇ ಅಮೆರಿಕಾದಿಂದ ಹಿಂತಿರುಗಿದ್ದರು.

ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ರಜನಿಕಾಂತ್, ರಜಿನಿ ಮಕ್ಕಳ್ ಮಂದ್ರಂ ಸದಸ್ಯರನ್ನು ಭೇಟಿಯಾಗಿ ಸ್ವಲ್ಪ ಸಮಯವಾಗಿದೆ. ಕೊವಿಡ್ -19 ಸಾಂಕ್ರಾಮಿಕ, ಚಲನಚಿತ್ರ ನಿರ್ಮಾಣದ ವೇಳಾಪಟ್ಟಿ ಮತ್ತು ಅಮೆರಿಕ ಪ್ರವಾಸದಿಂದಾಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲಿಲ್ಲ. ಭವಿಷ್ಯದಲ್ಲಿ ಅವರು ರಾಜಕೀಯಕ್ಕೆ ಪ್ರವೇಶಿಸುವ ವಿಚಾರದಲ್ಲಿ ಅಭಿಮಾನಿಗಳೆಲ್ಲರನ್ನೂ ಭೇಟಿಯಾಗುತ್ತೇನೆ ಮತ್ತು ಮಕ್ಕಳ್ ಮಂದ್ರಂ ಭವಿಷ್ಯದ ಬಗ್ಗೆ ಚರ್ಚಿಸುತ್ತೇನೆ ಎಂದು ಹೇಳಿದ್ದರು.

ರಜನಿಕಾಂತ್ ಅವರು ಡಿಸೆಂಬರ್ 29, 2020 ರಂದು ರಾಜಕೀಯಕ್ಕೆ ಬರುವುದಿಲ್ಲ ಮತ್ತು ಈ ಮೊದಲೇ ಘೋಷಿಸಿದಂತೆ ಪಕ್ಷವನ್ನು ಪ್ರಾರಂಭಿಸುವುದಿಲ್ಲ ಎಂದು ಘೋಷಿಸಿದ್ದರು. ಆದಾಗ್ಯೂ,ರಜನಿಕಾಂತ್ ಅವರ ಸಹವರ್ತಿ ಮತ್ತು ಗಾಂಧಿಯಾ ಮಕ್ಕಳ್ ಐಕ್ಯಂ ಸಂಸ್ಥಾಪಕ ತಮಿಳರುವಿ ಮಣಿಯನ್ ಅವರು ಎಂದಿಗೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ನಟ ಹೇಳಲಿಲ್ಲ, ಅವರು ಈಗ ಮತದಾನದ ಕಣಕ್ಕೆ ಇಳಿಯುವುದಿಲ್ಲ ಎಂದು ಹೇಳಿದರು ಮತ್ತು ಅವರು ರಜನಿ ಮಕ್ಕಳ್ ಮಂದ್ರವನ್ನು (ಆರ್ಎಂಎಂ) ವಿಸರ್ಜಿಸಿಲ್ಲ ಎಂದು ಹೇಳಿದ್ದರು.

ನಾಳೆ ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುತ್ತಿದ್ದಾರೆಂದು ಹೇಳಿದರೆ, ಗಾಂಧಿಯಾ ಮಕ್ಕಳ್ ಐಕ್ಯಂ ತಮ್ಮ ಪ್ರಯಾಣದಲ್ಲಿ ಅವರೊಂದಿಗೆ ಸಹವಾಸ ಮಾಡುತ್ತಾರೆ. ರಜನಿಕಾಂತ್ ರಾಜಕೀಯಕ್ಕೂ ಪ್ರವೇಶಿಸದಿದ್ದರೆ, ಅದು ಸಹೋದರಿ ಸಂಘಟನೆಯಾಗಿ ಮುಂದುವರಿಯುತ್ತದೆ ಎಂದು ಮಣಿಯನ್ ಹೇಳಿದ್ದಾರೆ.

ಹಿರಿಯ ನಟ ರಾಜಕೀಯಕ್ಕೆ ಬರಬೇಕು ಎಂದು ಒತ್ತಾಯಿಸಿ ಸೂಪರ್‌ಸ್ಟಾರ್‌ನ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದರು. “ವಾ ತಲೈವಾ ವಾ” (ಕಮ್ ಲೀಡರ್ ಕಮ್) ಎಂಬ ಘೋಷಣೆಗಳನ್ನು ಕೂಗುತ್ತಿದ್ದ ಅವರು, ತಮ್ಮ ರಾಜಕೀಯ ಪ್ರಯಾಣವನ್ನು ಕೈಗೊಳ್ಳಲು ಮತ್ತು ತಮಿಳುನಾಡು ರಾಜಕೀಯದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಬೇಕೆಂದು ಅವರು ಒತ್ತಾಯಿಸಿದ್ದರು. ಆದರೆ, ಅನಾರೋಗ್ಯದ ಕಾರಣ ರಜನೀಕಾಂತ್ ರಾಜಕೀಯಕ್ಕೆ ಬೆನ್ನು ಹಾಕಿದ್ದಾರೆ.

ಇದನ್ನೂ ಓದಿ:
ರಾಜಕೀಯದಿಂದ ದೂರವಿರುವ ನಿರ್ಧಾರವನ್ನು ಮರುಪರಿಶೀಲಿಸುತ್ತೇನೆ: ರಜನಿಕಾಂತ್

Published On - 11:34 am, Mon, 12 July 21