ಸಿಜೆಐ ಚಂದ್ರಚೂಡ್ ಹೇಳಿಕೆ ಎಂದು ಉಲ್ಲೇಖಿಸಿ ‘ತಪ್ಪು’ ಸಂದೇಶ ನೀಡಿದ ವೈರಲ್ ಪೋಸ್ಟ್ ರದ್ದು ಮಾಡಿದ ಸುಪ್ರೀಂಕೋರ್ಟ್

ಭಾರತದ ಸಂವಿಧಾನವನ್ನು, ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ನಿಮ್ಮ ಸಹಕಾರವೂ ಬಹಳ ಮುಖ್ಯ, ಜನರೆಲ್ಲರೂ ಒಗ್ಗೂಡಿ ಬೀದಿಗಿಳಿದು ತಮ್ಮ ಹಕ್ಕುಗಳನ್ನು ಸರ್ಕಾರಕ್ಕೆ ಕೇಳಬೇಕು, ಈ ಸರ್ವಾಧಿಕಾರಿ ಸರ್ಕಾರವು ಜನರನ್ನು ಹೆದರಿಸುತ್ತದೆ ಮತ್ತು ಬೆದರಿಕೆ ಹಾಕುತ್ತದೆ ಎಂದು ಸಿಜೆಐ ಚಂದ್ರಚೂಡ್ ಹೇಳಿದ್ದಾರೆ ಎನ್ನಲಾಗುವ ಫೇಕ್ ಪೋಸ್ಟ್ ವೈರಲ್ ಆಗಿತ್ತು

ಸಿಜೆಐ ಚಂದ್ರಚೂಡ್ ಹೇಳಿಕೆ ಎಂದು ಉಲ್ಲೇಖಿಸಿ ‘ತಪ್ಪು’ ಸಂದೇಶ ನೀಡಿದ ವೈರಲ್ ಪೋಸ್ಟ್ ರದ್ದು ಮಾಡಿದ ಸುಪ್ರೀಂಕೋರ್ಟ್
ಸಿಜೆಐ ಚಂದ್ರಚೂಡ್
Follow us
|

Updated on:Aug 14, 2023 | 8:58 PM

ದೆಹಲಿ ಆಗಸ್ಟ್ 14: ಸುಪ್ರೀಂಕೋರ್ಟ್ (Supreme Court) ಸೋಮವಾರ ಸಾಮಾಜಿಕ ಮಾಧ್ಯಮವೊಂದರಲ್ಲಿ ವೈರಲ್ ಆಗಿದ್ದ ಪೋಸ್ಟ್ ಒಂದನ್ನು ರದ್ದು ಮಾಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (CJI) ಚಂದ್ರಚೂಡ್ (DY Chandrachud) ಹೇಳಿದ್ದಾರೆ ಎಂದು ಬಿಂಬಿಸುವ ಪೋಸ್ಟ್ ಅದಾಗಿದ್ದು, ಅದು “ನಕಲಿ ಮತ್ತು ಚೇಷ್ಟೆಯಿಂದ ಕೂಡಿದ್ದು ಎಂದು ಸುಪ್ರೀಂಕೋರ್ಟ್ ಹೇಳಿದೆ. ವರದಿಯ ಪ್ರಕಾರ, ಸಿಜೆಐ ಅವರ ಚಿತ್ರವನ್ನು ನಕಲಿ ಪೋಸ್ಟ್‌ನಲ್ಲಿ ಬಳಸಲಾಗಿದ್ದು, ಇದು ದೇಶದ ಜನರನ್ನು ಆಡಳಿತಾರೂಢ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಬರುವಂತೆ ಒತ್ತಾಯಿಸಿದೆ. “ಭಾರತೀಯ ಪ್ರಜಾಪ್ರಭುತ್ವ ಸುಪ್ರೀಂಕೋರ್ಟ್ ಜಿಂದಾಬಾದ್” ಎಂದು ಇದರಲ್ಲಿ ಹೇಳಲಾಗಿದೆ.

ಭಾರತದ ಸಂವಿಧಾನವನ್ನು, ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ನಿಮ್ಮ ಸಹಕಾರವೂ ಬಹಳ ಮುಖ್ಯ, ಜನರೆಲ್ಲರೂ ಒಗ್ಗೂಡಿ ಬೀದಿಗಿಳಿದು ತಮ್ಮ ಹಕ್ಕುಗಳನ್ನು ಸರ್ಕಾರಕ್ಕೆ ಕೇಳಬೇಕು. ಈ ಸರ್ವಾಧಿಕಾರಿ ಸರ್ಕಾರವು ಜನರನ್ನು ಹೆದರಿಸುತ್ತದೆ ಮತ್ತು ಬೆದರಿಕೆ ಹಾಕುತ್ತದೆ, ಆದರೆ ನೀವು ಭಯಪಡಬೇಕಾಗಿಲ್ಲ, ಇಟ್ಟುಕೊಳ್ಳಿ ಧೈರ್ಯ ಮಾಡಿ ಮತ್ತು ಸರ್ಕಾರವನ್ನು ಕೇಳಿ, ನಾನು ನಿಮ್ಮೊಂದಿಗಿದ್ದೇನೆ ಎಂದು ಚಂದ್ರಚೂಡ್ ಹೇಳಿದ್ದಾರೆ ಎಂದು ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಹೇಳಿಕೆ ನೀಡಿದ ಉನ್ನತ ನ್ಯಾಯಾಲಯದ ಸಾರ್ವಜನಿಕ ಸಂಪರ್ಕ ಕಚೇರಿ (ಪಿಆರ್‌ಒ), “ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ (ಅಧಿಕಾರಿಗಳ ವಿರುದ್ಧ ಪ್ರತಿಭಟಿಸಲು ಸಾರ್ವಜನಿಕರನ್ನು ಆಹ್ವಾನಿಸುವುದು) ಸಿಜೆಐ ಛಾಯಾಚಿತ್ರವನ್ನು ಬಳಸಿಕೊಂಡಿದ್ದು ಸುಪ್ರೀಂಕೋರ್ಟ್‌ನ ಗಮನಕ್ಕೆ ಬಂದಿದೆ. ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ ಎಂದು ತಪ್ಪಾಗಿ ಉಲ್ಲೇಖಿಸಿ ಇದನ್ನು ಶೇರ್ ಮಾಡಲಾಗುತ್ತಿದೆ.

ಇದನ್ನೂ ಓದಿ: ವಿಐಪಿ ವಾಹನಗಳಲ್ಲಿರುವ ಸೈರನ್‌ ಸದ್ದು ಬದಲು ಕೊಳಲು, ತಬಲಾ, ಶಂಖನಾದ ಅಳವಡಿಕೆಗೆ ಚಿಂತನೆ: ನಿತಿನ್ ಗಡ್ಕರಿ

ಆ ಪೋಸ್ಟ್ ನಕಲಿ, ದುರುದ್ದೇಶಪೂರಿತ ಮತ್ತು ಚೇಷ್ಟೆಯಿಂದ ಕೂಡಿದೆ. ಅಂತಹ ಯಾವುದೇ ಕರೆಯನ್ನು ಭಾರತದ ಮುಖ್ಯ ನ್ಯಾಯಾಧೀಶರು ನೀಡಿಲ್ಲ ಅಥವಾ ಹೇಳಿಕೆ ನೀಡಿಲ್ಲ. ಈ ನಿಟ್ಟಿನಲ್ಲಿ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:56 pm, Mon, 14 August 23