K Kavitha: ದೆಹಲಿ ಅಬಕಾರಿ ನೀತಿ ಪ್ರಕರಣ: ಕವಿತಾಗೆ ಸುಪ್ರೀಂಕೋರ್ಟ್ ಜಾಮೀನು

ಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಜಾಮೀನು ಕೋರಿದ್ದು, ಆಕೆಯ ವಿರುದ್ಧದ ತನಿಖೆಯನ್ನು ಎರಡು ಸಂಸ್ಥೆಗಳು ಪೂರ್ಣಗೊಳಿಸಿವೆ ಎಂದು ಹೇಳಿದರು. ಸಹ ಆರೋಪಿಯಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದ್ದಾರೆ.

K Kavitha: ದೆಹಲಿ ಅಬಕಾರಿ ನೀತಿ ಪ್ರಕರಣ: ಕವಿತಾಗೆ ಸುಪ್ರೀಂಕೋರ್ಟ್ ಜಾಮೀನು
ಕೆ ಕವಿತಾ
Follow us
ರಶ್ಮಿ ಕಲ್ಲಕಟ್ಟ
|

Updated on:Aug 27, 2024 | 2:25 PM

ದೆಹಲಿ ಆಗಸ್ಟ್ 27: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ (Delhi excise policy case ) ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ(K Kavitha)  ಅವರಿಗೆ ಸುಪ್ರೀಂಕೋರ್ಟ್ (Supreme Court) ಮಂಗಳವಾರ ಜಾಮೀನು ಮಂಜೂರು ಮಾಡಿದೆ. ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ಅವರ ಪುತ್ರಿ ಕೆ.ಕವಿತಾ ಮಾರ್ಚ್ 15ರಿಂದ ಬಂಧನದಲ್ಲಿದ್ದರು. ವಿಚಾರಣೆಯ ವೇಳೆ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ಸುಪ್ರೀಂಕೋರ್ಟ್ ಪೀಠವು, ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಕೆ ಕವಿತಾ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವ ಸಾಕ್ಷ್ಯ ಇದೆ ಎಂಬುದನ್ನು ತೋರಿಸಲು ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಕೇಳಿದೆ.

ಕವಿತಾ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಜಾಮೀನು ಕೋರಿದ್ದು, ಆಕೆಯ ವಿರುದ್ಧದ ತನಿಖೆಯನ್ನು ಎರಡು ಸಂಸ್ಥೆಗಳು ಪೂರ್ಣಗೊಳಿಸಿವೆ ಎಂದು ಹೇಳಿದರು. ಸಹ ಆರೋಪಿಯಾಗಿರುವ ಆಪ್ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಅವರು ಉಲ್ಲೇಖಿಸಿದ್ದಾರೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ತನಿಖಾ ಸಂಸ್ಥೆಗಳ ಪರವಾಗಿ ವಾದ ಮಂಡಿಸಿದ್ದು, ಕೆ ಕವಿತಾ ಅವರು ತಮ್ಮ ಮೊಬೈಲ್ ಫೋನ್ ಫಾರ್ಮ್ಯಾಟ್ ಮಾಡಿದ್ದಾರೆ. ಆಕೆಯ ನಡವಳಿಕೆಯು ಸಾಕ್ಷ್ಯವನ್ನು ಹಾಳುಮಾಡುವಂತಿದೆ ಎಂದು ಅವರು ಆರೋಪಿಸಿದ್ದಾರೆ. ಈ ಆರೋಪವನ್ನು ಕವಿತಾ ಅವರ ವಕೀಲರು “ಬೋಗಸ್” ಎಂದಿದ್ದಾರೆ. ನಂತರ, ಪೀಠವು ಸಿಬಿಐ ಪರ ವಾದ ಮಂಡಿಸಿದ ವಕೀಲರಲ್ಲಿ “ಕವಿತಾ ಅವರು ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ತೋರಿಸಲು ಸಾಕ್ಷ್ಯ ಯಾವುದಿದೆ ಎಂದು ಕೇಳಿದ್ದಾರೆ.

ಕೆ ಕವಿತಾ ವಿರುದ್ಧವಿರುವ ಆರೋಪ ಏನು?

ಕವಿತಾ ಅವರ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜಕಾರಣಿಯ ಮನವಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಆಗಸ್ಟ್ 12 ರಂದು ಸುಪ್ರೀಂಕೋರ್ಟ್ ಏಜೆನ್ಸಿಗಳನ್ನು ಕೇಳಿತ್ತು. ಎರಡೂ ಪ್ರಕರಣಗಳಲ್ಲಿ ಕವಿತಾ ಅವರ ಜಾಮೀನು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದ್ದು, ಕ್ರಿಮಿನಲ್ ಪಿತೂರಿಯ ಪ್ರಮುಖ ಸಂಚುಕೋರರಲ್ಲಿ ಅವರು ಪ್ರಾಥಮಿಕವಾಗಿ ಒಬ್ಬರು ಎಂದು ಹೇಳಿದ್ದಾರೆ. ಕೆ ಕವಿತಾ ಅವರು ಸೌತ್ ಗ್ರೂಪ್ ಎಂದು ಕರೆಯಲ್ಪಡುವ ಭಾಗವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಆಮ್ ಆದ್ಮಿ ಪಕ್ಷಕ್ಕೆ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಒಲವು ತೋರಿದ್ದಕ್ಕಾಗಿ ಪ್ರತಿಯಾಗಿ ₹ 100 ಕೋಟಿ ಮೌಲ್ಯದ ಕಿಕ್‌ಬ್ಯಾಕ್‌ಗಳನ್ನು ಪಾವತಿಸಿದ ಉದ್ಯಮಿಗಳು ಮತ್ತು ರಾಜಕಾರಣಿಗಳ ಗುಂಪು ಎಂದು ಸಿಬಿಐ ಹೇಳಿದೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ಚಿತ್ರ ನಿರ್ಮಾಪಕ ರಂಜಿತ್ ವಿರುದ್ಧ ಎಫ್ಐಆರ್ ದಾಖಲಿಸಿದ ಕೇರಳ ಪೊಲೀಸ್

ಎಎಪಿ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಇದೇ ಆರೋಪದಲ್ಲಿ ಜೈಲು ಸೇರಿದ್ದರು. ಆಪಾದಿತ ಹಗರಣದ ಕಿಂಗ್‌ಪಿನ್ ಎಂದು ಏಜೆನ್ಸಿಗಳು ಕರೆಯುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾರ್ಚ್ 21 ರಿಂದ ಜೈಲಿನಲ್ಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Tue, 27 August 24