ಅಯೋಧ್ಯಾ ರಾಮಮಂದಿರ ವಿವಾದಕ್ಕೆ ಇಂದಾದರೂ ಬೀಳುತ್ತಾ ತೆರೆ?
ನವದೆಹಲಿ: ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಸಂವಿಧಾನ ಪೀಠದಲ್ಲಿ ಇಂದು ಕೊನೆಯ ದಿನದ ವಿಚಾರಣೆ ನಡೆದಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಮೊಕದ್ದಮೆಯ ವಿಚಾರಣೆ 39 ದಿನಗಳಿಂದ ನಡೆಸುತ್ತಿದೆ. ಈ ಮೊದಲು ಅಕ್ಟೋಬರ್ 18 ರಂದು ವಾದ-ಪ್ರತಿವಾದ ಮುಗಿಸಲು ಗಡುವನ್ನು ನಿಗದಿಪಡಿಸಿತ್ತು. ನಂತರ ಅದನ್ನು ಅಕ್ಟೋಬರ್ 17 ಕ್ಕೆ ತರಲಾಯಿತು, ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ […]
ನವದೆಹಲಿ: ಅಯೋಧ್ಯಾ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನ ಸಂವಿಧಾನ ಪೀಠದಲ್ಲಿ ಇಂದು ಕೊನೆಯ ದಿನದ ವಿಚಾರಣೆ ನಡೆದಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ರಾಮ ಜನ್ಮಭೂಮಿ-ಬಾಬರಿ ಮಸೀದಿ ಮೊಕದ್ದಮೆಯ ವಿಚಾರಣೆ 39 ದಿನಗಳಿಂದ ನಡೆಸುತ್ತಿದೆ. ಈ ಮೊದಲು ಅಕ್ಟೋಬರ್ 18 ರಂದು ವಾದ-ಪ್ರತಿವಾದ ಮುಗಿಸಲು ಗಡುವನ್ನು ನಿಗದಿಪಡಿಸಿತ್ತು. ನಂತರ ಅದನ್ನು ಅಕ್ಟೋಬರ್ 17 ಕ್ಕೆ ತರಲಾಯಿತು, ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಇನ್ನೂ ಹೆಚ್ಚಿನ ಸಮಯವನ್ನು ನೀಡುವುದಿಲ್ಲ, ಇಂದು ಸಂಜೆ 5ರೊಳಗೆ ವಿಚಾರಣೆ ಪೂರ್ಣಗೊಳ್ಳಲಿದೆ. ಎಲ್ಲಾ ವಾದಗಳನ್ನು ಮುಕ್ತಾಯಗೊಳಿಸಲೇಬೇಕು ಎಂದು ಖಡಕ್ಕಾಗಿ ಸೂಚಿಸಿದೆ.
ವಾದಗಳು ಮುಕ್ತಾಯವಾದರೆ ತೀರ್ಪನ್ನು ನ್ಯಾಯಪೀಠ ಕಾಯ್ದಿರಿಸುತ್ತದೆ. ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್‌ಎ ನಜೀರ್ ಅವರನ್ನು ಒಳಗೊಂಡ ನ್ಯಾಯಪೀಠವು ನವೆಂಬರ್ 17 ರೊಳಗೆ ತೀರ್ಪನ್ನು ಪ್ರಕಟಿಸಬೇಕಾಗಿದೆ. ಏಕೆಂದರೆ ಆ ದಿನಾಂಕ ದಂದು ಸಿಜೆಐ ನಿವೃತ್ತಿ ಹೊಂದಲಿದ್ದಾರೆ. ಅವರ ನಿವೃತ್ತಿಯ ಮೊದಲು ತೀರ್ಪು ನೀಡದಿದ್ದರೆ, ಇಡೀ ವಿಷಯವನ್ನು ಹೊಸದಾಗಿ ಆಲಿಸಬೇಕಾಗುತ್ತದೆ. ಆದ್ದರಿಂದ ಇಂದೇ ವಾದ-ಪ್ರತಿವಾದ ಮುಗಿಯಬೇಕಿದೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಸೆಪ್ಟೆಂಬರ್ 2010 ರ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ನ್ಯಾಯಮೂರ್ತಿ ಗೊಗೊಯ್ ನೇತೃತ್ವದ ಪಂಚ ಸದಸ್ಯರ ಪೀಠವು ನಡೆಸುತ್ತಿದೆ. ಸದರಿ ಹೈಕೋರ್ಟ್ ಈ ಹಿಂದೆ, ಅಯೋಧ್ಯೆಯಲ್ಲಿನ 2.77 ಎಕರೆ ವಿವಾದಿತ ಭೂಮಿಯನ್ನು ನಿರ್ಮೋಹಿ ಅಖರಾ, ಸುನ್ನಿ ವಕ್ಫ್ ಬೋರ್ಡ್, ಯುಪಿ ಸರ್ಕಾರ ಮತ್ತು ರಾಮ್‌ಲಲ್ಲಾ ವಿರಾಜ್ಮಾನ್ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಆದೇಶಿಸಿದೆ. 16 ನೇ ಶತಮಾನದ ಬಾಬರಿ ಮಸೀದಿಯನ್ನು 1992 ರ ಡಿಸೆಂಬರ್ 6 ರಂದು ಕೆಡವಲಾಯಿತು.
Published On - 1:53 pm, Wed, 16 October 19