ದೆಹಲಿ: ಸುಪ್ರೀಂಕೋರ್ಟ್‌ನ ಆಮ್ಲಜನಕ ಲೆಕ್ಕಪರಿಶೋಧನಾ ಸಮಿತಿಯ ಸದಸ್ಯರು ಮಧ್ಯಂತರ ವರದಿಗೆ “ಸಹಿ ಮಾಡಿಲ್ಲ ಅಥವಾ ಅನುಮೋದಿಸಿಲ್ಲ” ಎಂದು ದೆಹಲಿ ಸರ್ಕಾರ ಶುಕ್ರವಾರ ಹೇಳಿದೆ. ದೇಶದಲ್ಲಿ ಕೊವಿಡ್ ಎರಡನೇ ಅಲೆಯ ಉತ್ತುಂಗದಲ್ಲಿದ್ದಾಗ ದೆಹಲಿ ವೈದ್ಯಕೀಯ ಆಮ್ಲಜನಕವನ್ನು ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಬಳಸಿಕೊಂಡಿದೆ ಎಂದು ಮಧ್ಯಂತರ ವರದಿಯಲ್ಲಿ ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಜೆಪಿ ಪಕ್ಷ ಶೇರ್ ಮಾಡಿರುವ ವರದಿ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಿದ್ಧಪಡಿಸಿರುವುದು. ಸುಪ್ರೀಂಕೋರ್ಟ್ ಸಮಿತಿ ಸಿದ್ಧಪಡಿಸಿದ ಮಧ್ಯಂತರ ವರದಿಯನ್ನು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದಿದ್ದಾರೆ.
“ದೆಹಲಿಯಲ್ಲಿ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸಲಾಗಿದೆ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಯಾವುದೇ ವರದಿ ಇಲ್ಲ. ಬಿಜೆಪಿ ಹಂಚಿಕೊಳ್ಳುತ್ತಿರುವ ವರದಿ ಎಲ್ಲೂ ಅಸ್ತಿತ್ವದಲ್ಲಿಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ. ನಾವು ಮಾತನಾಡಿದ ಸಮಿತಿಯ ಸದಸ್ಯರು ಯಾವುದೇ ವರದಿಗೆ ಸಹಿ ಮಾಡಿಲ್ಲ ಅಥವಾ ಅನುಮೋದಿಸಿಲ್ಲ ಎಂದು ಹೇಳುತ್ತಿದ್ದಾರೆ. ಈ ವಿಷಯವು ನ್ಯಾಯಾಲಯಕ್ಕೆ ಸಂಬಂಧಪಟ್ಟಿದ್ದು ನ್ಯಾಯಾಲಯದಲ್ಲಿರುವ ವಿಷಯಗಳ ಬಗ್ಗೆ ರಾಜಕೀಯ ಮಾಡಬಾರದು ಎಂದು ಸಿಸೋಡಿಯಾ ಹೇಳಿದರು.
BJP leaders have been talking about a so-called report which states that there was no O2 shortage in Delhi during COVID peak & Delhi exaggerated its O2 requirement by 4 times. Let me tell you that the report BJP has been quoting doesn’t even exist: Delhi Dy CM Manish Sisodia pic.twitter.com/yG17AiO9f2
— ANI (@ANI) June 25, 2021
“ದೆಹಲಿಯು ಏಪ್ರಿಲ್‌ನಲ್ಲಿ ಕೊವಿಡ್ ಎರಡನೇ ಅಲೆಯ ಉತ್ತುಂಗದಲ್ಲಿ ತೀವ್ರ ಆಮ್ಲಜನಕದ ಕೊರತೆಯನ್ನು ಎದುರಿಸಿತು. ಆಮ್ಲಜನಕದ ನಿರ್ವಹಣೆ ಕೇಂದ್ರದ ಜವಾಬ್ದಾರಿಯಾಗಿದೆ. ಅವರು ನಿಜವಾಗಿ ಕೇಜ್ರಿವಾಲ್ ಅವರನ್ನು ನಿಂದಿಸುತ್ತಿಲ್ಲ. ಕೇಂದ್ರ ಈ ವಾದಗಳ ಮೂಲಕ, ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಸಿಸೊಡಿಯಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ರೋಗಿಗಳು, ಅವರ ಸಂಬಂಧಿಗಳು ಮತ್ತು ವೈದ್ಯರು ಸುಳ್ಳು ಹೇಳಿದ್ದಾರೆಯೇ? ಅಂತಹ ಸಾವುಗಳ ಬಗ್ಗೆ ನ್ಯಾಯಾಲಯಕ್ಕೆ ತೆರಳಿದವರ ಬಗ್ಗೆ ಏನಂತೀರಿ ಎಂದು ಸಿಸೋಡಿಯಾ ಪ್ರಶ್ನಿಸಿದ್ದಾರೆ.
It is unbelievable to see that Arvind Kejriwal & Delhi govt politicised oxygen supply when #COVID was at its peak. This is such petty politics. The data presented by Oxygen Audit Committee in the report is shocking: BJP leader Sambit Patra pic.twitter.com/2YunmAczzO
— ANI (@ANI) June 25, 2021
ಕೊವಿಡ್ ಉತ್ತುಂಗದಲ್ಲಿದ್ದಾಗ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಸರ್ಕಾರ ಆಮ್ಲಜನಕ ಪೂರೈಕೆಯನ್ನು ರಾಜಕೀಯಗೊಳಿಸಿದ್ದನ್ನು ನಂಬಲಾಗದು. ಇದು ಅಂತಹ ಸಣ್ಣ ರಾಜಕೀಯ. ವರದಿಯಲ್ಲಿ ಆಕ್ಸಿಜನ್ ಆಡಿಟ್ ಸಮಿತಿ ಮಂಡಿಸಿದ ಅಂಕಿ ಅಂಶಗಳು ಆಘಾತಕಾರಿ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರ ಪ್ರತಿಕ್ರಿಯಿಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಇದನ್ನೂ ಓದಿ: ದೆಹಲಿ ಸರ್ಕಾರ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕವನ್ನು ಕೇಳಿತ್ತು: ಸುಪ್ರೀಂಕೋರ್ಟ್ ಸಮಿತಿ
(Supreme Court’s oxygen audit committee have not signed or approved the interim report says Delhi Deputy CM Manish Sisodia )