AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮ್ಮು ಮತ್ತು ಕಾಶ್ಮೀರದ ಬಳಿ 3 ಡ್ರೋನ್​ಗಳ ಅನುಮಾನಾಸ್ಪದ ಹಾರಾಟ; ದಾಳಿ ಮಾಡುತ್ತಿದ್ದಂತೆಯೇ ಪಾಕಿಸ್ತಾನದತ್ತ ಪಯಣ

ಬರಿ ಬ್ರಾಹ್ಮಣ, ಚಿಲಾದ್ಯ ಹಾಗೂ ಗಾಗ್ವಾಲ್ ಪ್ರದೇಶಗಳಲ್ಲಿ ಏಕಕಾಲಕ್ಕೆ ಡ್ರೋನ್​ ಕಾಣಿಸಿಕೊಂಡಿದ್ದು, ಕಳೆದ ವಾರವಷ್ಟೇ ಸ್ಫೋಟಕಗಳನ್ನು ಹೊತ್ತು ಬಂದಿದ್ದ ಪಾಕಿಸ್ತಾನಿ ಡ್ರೋನ್​ ಒಂದನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ ಬೆನ್ನಲ್ಲೇ ಇದು ಕಾಣಿಸಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಬಳಿ 3 ಡ್ರೋನ್​ಗಳ ಅನುಮಾನಾಸ್ಪದ ಹಾರಾಟ; ದಾಳಿ ಮಾಡುತ್ತಿದ್ದಂತೆಯೇ ಪಾಕಿಸ್ತಾನದತ್ತ ಪಯಣ
ಡ್ರೋನ್ (ಸಾಂಕೇತಿಕ ಚಿತ್ರ)
TV9 Web
| Edited By: |

Updated on: Jul 30, 2021 | 7:57 AM

Share

ಶ್ರೀನಗರ: ಭಾರತದ ಗಡಿ ಪ್ರದೇಶದಲ್ಲಿ ಇತ್ತೀಚೆಗೆ ಅನುಮಾನಾಸ್ಪದವಾಗಿ ಡ್ರೋನ್​ಗಳ (Suspected Drones) ಹಾರಾಟ ಜಾಸ್ತಿಯಾಗಿದ್ದು, ನಿನ್ನೆ (ಜುಲೈ 29) ರಾತ್ರಿ 8.30ರಿಂದ 9.30ರ ಸಮಯದಲ್ಲಿ ಸಾಂಬಾ (Samba) ಅಂತಾರಾಷ್ಟ್ರೀಯ ಗಡಿಯಲ್ಲಿ (International Border) 1 ಡ್ರೋನ್ ಪತ್ತೆಯಾಗಿದೆ. ಅಲ್ಲದೇ, ಸಾಂಬಾದ ಐಟಿಬಿಪಿ ಕ್ಯಾಂಪ್ ಬಳಿ ಮತ್ತೊಂದು ಡ್ರೋನ್ ಹಾಗೂ ಸಾಂಬಾದ ಆರ್ಮಿ ಕ್ಯಾಂಪ್ ಬಳಿ 3ನೇ ಡ್ರೋನ್ ಕಾಣಿಸಿಕೊಂಡಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಡ್ರೋನ್​ಗಳು ಪಾಕಿಸ್ತಾನಕ್ಕೆ (Pakistan) ಸೇರಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಬರಿ ಬ್ರಾಹ್ಮಣ, ಚಿಲಾದ್ಯ ಹಾಗೂ ಗಾಗ್ವಾಲ್ ಪ್ರದೇಶಗಳಲ್ಲಿ ಏಕಕಾಲಕ್ಕೆ ಡ್ರೋನ್​ ಕಾಣಿಸಿಕೊಂಡಿದ್ದು, ಕಳೆದ ವಾರವಷ್ಟೇ ಸ್ಫೋಟಕಗಳನ್ನು ಹೊತ್ತು ಬಂದಿದ್ದ ಪಾಕಿಸ್ತಾನಿ ಡ್ರೋನ್​ ಒಂದನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ ಬೆನ್ನಲ್ಲೇ ಇದು ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ಚಿಲಾದ್ಯ ಬಳಿ ಕಾಣಿಸಿಕೊಂಡ ಡ್ರೋನ್​ನತ್ತ ಫೈರಿಂಗ್​ ಮಾಡುತ್ತಿದ್ದಂತೆಯೇ ಅದು ಪಾಕಿಸ್ತಾನದತ್ತ ಹಾರಿ ಹೋಗಿದೆ. ಆದರೆ, ಬರಿ ಬ್ರಾಹ್ಮಣ ಮತ್ತು ಜಮ್ಮು ಪಠಾಣ್​ಕೋಟ್ ಹೆದ್ದಾರಿಯ ಗಾಗ್ವಾಲ್ ಬಳಿ ಕಾಣಿಸಿಕೊಂಡಿದ್ದ ಎರಡು ಡ್ರೋನ್​ಗಳು ಕೆಲವೇ ಕ್ಷಣಗಳಲ್ಲಿ ಆಗಸದಿಂದ ನಾಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಡ್ರೋನ್​ ಒಂದನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಅದರಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿಗಳಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು. ಆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದಾಗಲೇ ಗಡಿ ಪ್ರದೇಶದಲ್ಲಿ 3 ಡ್ರೋನ್​ಗಳು ಕಾಣಿಸಿಕೊಂಡಿವೆ.

ಕಳೆದ ವಾರ ಪತ್ತೆಯಾಗಿದ್ದ ಡ್ರೋನ್ ಹೆಕ್ಸಾಕಾಪ್ಟರ್ ಮಾದರಿಯಲ್ಲಿದ್ದು, ಗಡಿಯಿಂದ ಆರು ಕಿಲೋಮೀಟರ್ ಒಳಗೆ ಪತ್ತೆಯಾಗಿತ್ತು. ಅಂದಾಜು 5ಕೆಜಿಯಷ್ಟು ಸುಧಾರಿತ ಸ್ಫೋಟಕವನ್ನು ಅದರಿಂದ ವಶಪಡಿಸಿಕೊಳ್ಳಲಾಗಿತ್ತು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಖಚಿತಪಡಿಸಿದ್ದ ಹೆಚ್ಚುವರಿ ಪೊಲೀಸ್ ನಿರ್ದೇಶಕ ಮುಕೇಶ್ ಸಿಂಗ್, ವಶಪಡಿಸಿಕೊಂಡ ಸುಧಾರಿತ ಸ್ಫೋಟಕಗಳನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದ್ದರು. ಕೃತ್ಯದ ಹಿಂದೆ ಲಷ್ಕರ್-ಎ-ತಯ್ಬಾ ಸಂಘಟನೆಯ ಕೈವಾಡವಿರಬಹುದು ಎಂದು ಅಂದಾಜಿಸಲಾಗಿದ್ದು, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಭಾಗದಲ್ಲಿ ಹೆಚ್ಚಾಗಿ ಡ್ರೋನ್​ಗಳಲ್ಲಿ ಸ್ಫೋಟಕ ಪತ್ತೆಯಾಗುತ್ತಿದೆ. ಇತ್ತೀಚೆಗೆ ಭಾರತೀಯ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದ ನಂತರ ಕಾಶ್ಮೀರದಲ್ಲಿ ಡ್ರೋನ್​ಗಳ ಹಾರಾಟವನ್ನು ನಿಷೇಧಿಸಲಾಗಿದೆ.

(Suspected Pakistani drones noticed at 3 locations in near Jammu and Kashmir Samba)

ಇದನ್ನೂ ಓದಿ: ಭಯೊತ್ಪಾದಕರ ಡ್ರೋನ್​ಗಳನ್ನು ಕೌಂಟರ್ ಮಾಡಲು ದೇಶೀಯ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ: ಅಮಿತ್ ಶಾ 

ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಸ್ಫೋಟಕ ಹೊತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ ಪೊಲೀಸರು

ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಸ್ಯಾಂಡಲ್​ವುಡ್​ ನಟಿ, ಉದ್ಯಮಿ ನಂಟಿನ ಕೇಸ್​ಗೆ ಬಿಗ್​​ ಟ್ವಿಸ್ಟ್
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ
ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ