ನೆಲದ ಮೇಲೆ ಮೂತ್ರ ನೆಕ್ಕುವಂತೆ ಮಾಡಿ ಮನೆ ಕೆಲಸದ ಸಹಾಯಕಿಗೆ ಕಿರುಕುಳ ನೀಡಿದ್ದ ಜಾರ್ಖಂಡ್ ಬಿಜೆಪಿ ನಾಯಕಿ ಅಮಾನತು
ದಲಿತ್ ವಾಯ್ಸ್ ಹಂಚಿಕೊಂಡ ಪೋಸ್ಟ್ ಪ್ರಕಾರ, ಮನೆಗೆಲಸದವರನ್ನು ಪತ್ರಾ ಮನೆಯಲ್ಲಿ ಇರಿಸಿಎಂಟು ವರ್ಷಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ಬಿಸಿಯಾದ ‘ತವಾ’ (ಪಾನ್) ಮತ್ತು ಲೋಹದ ರಾಡ್‌ಗಳಿಂದ ಆಕೆಯನ್ನು ಥಳಿಸಲಾಯಿತು..
ಪಕ್ಷದಿಂದ ಅಮಾನತುಗೊಂಡಿರುವ ಜಾರ್ಖಂಡ್ ಬಿಜೆಪಿ (Jharkhand BJP) ನಾಯಕಿ ಸೀಮಾ ಪತ್ರಾ (Seema Patra) ಅವರ ಮನೆಕೆಲಸದ ಸಹಾಯಕಿಗೆ ಕ್ರೂರವಾಗಿ ಹಲ್ಲೆ ನಡೆಸಿ ಕಿರುಕುಳ ನೀಡಿದ ಮಾಧ್ಯಮ ವರದಿಗಳನ್ನು ಗಮನಿಸಿದ ರಾಷ್ಟ್ರೀಯ ಮಹಿಳಾ ಆಯೋಗ (NCW)ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಪತ್ರಾ ಅವರು ಬಿಜೆಪಿಯ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಪತಿ ಮಹೇಶ್ವರ್ ಪಾತ್ರಾ ಅವರು ನಿವೃತ್ತ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿ. ಅವರ ಫೇಸ್‌ಬುಕ್ ಪ್ರೊಫೈಲ್ ಪ್ರಕಾರ, ಪತ್ರಾ ಅವರು ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನದ ರಾಜ್ಯ ಸಂಚಾಲಕರಾಗಿದ್ದಾರೆ. ನ್ಯಾಯಯುತ ತನಿಖೆಗಾಗಿ ಜಾರ್ಖಂಡ್ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವುದಾಗಿ ಎನ್‌ಸಿಡಬ್ಲ್ಯು ಹೇಳಿದೆ. ಆರೋಪ ನಿಜವಾಗಿದ್ದರೆ ಮಹಿಳೆಯನ್ನು ಬಂಧಿಸುವಂತೆ ಕೋರಿದೆ.ನಿನ್ನೆ ಬಿಜೆಪಿಯ ಪತ್ರಾ ಅವರನ್ನು ಅಮಾನತುಗೊಳಿಸಿತು. ಮನೆ ಕೆಲಸದ ಸಹಾಯಕಿಗೆ ಕಿರುಕುಳ ನೀಡುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಆಕ್ರೋಶವನ್ನುಂಟು ಮಾಡಿದ್ದು ಪತ್ರಾ ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಜಾರ್ಖಂಡ್ ಬಿಜೆಪಿ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಅಮಾನತು ಆದೇಶ ಹೊರಡಿಸಿದ್ದಾರೆ.
#Terrible The brutality that happened to this tribal woman in Jharkhand is extremely painful, for eight consecutive years she was imprisoned and tortured, her teeth were blown out, she was given urine, she was burnt with iron rods several times. The accused must be hanged… pic.twitter.com/wk9NLG2tUB
— The Dalit Voice (@ambedkariteIND) August 30, 2022
ದಲಿತ್ ವಾಯ್ಸ್ ಹಂಚಿಕೊಂಡ ಪೋಸ್ಟ್ ಪ್ರಕಾರ, ಮನೆಗೆಲಸದವರನ್ನು ಪತ್ರಾ ಮನೆಯಲ್ಲಿ ಇರಿಸಿ ಎಂಟು ವರ್ಷಗಳ ಕಾಲ ಚಿತ್ರಹಿಂಸೆ ನೀಡಲಾಯಿತು. ಬಿಸಿಯಾದ ‘ತವಾ’ (ಪಾನ್) ಮತ್ತು ಲೋಹದ ರಾಡ್‌ಗಳಿಂದ ಆಕೆಯನ್ನು ಥಳಿಸಲಾಯಿತು. ನೆಲದಲ್ಲಿ ಬಿದ್ದ ಮೂತ್ರವನ್ನು ನೆಕ್ಕುವಂತೆ ಒತ್ತಾಯಿಸಲಾಯಿತು. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ, ಮಹಿಳೆಯು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು, ತನ್ನೊಂದಿಗೆ ಮಾತನಾಡುತ್ತಿರುವ ವ್ಯಕ್ತಿಗೆ ಏನೋ ಹೇಳಲು ಪ್ರಯತ್ನವನ್ನು ಮಾಡುತ್ತಿರುವುದು ಕಾಣುತ್ತದೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ ಆಕೆಯ ಹಲ್ಲುಗಳು ಮುರಿದುಹೋಗಿವೆ ಮತ್ತು ಆಕೆಯ ದೇಹದ ಮೇಲೆರುವ ಗಾಯಗಳು ಆಕೆ ಮೇಲೆ ಪದೇ ಪದೇ ಹಲ್ಲೆ ನಡೆದಿತ್ತು ಎಂಬುದನ್ನು ತೋರಿಸುತ್ತದೆ ಎಂದಿವೆ.
ಲೈವ್ ಹಿಂದೂಸ್ತಾನ್ ಪ್ರಕಾರ, ಜಾರ್ಖಂಡ್‌ನ ಗುಮ್ಲಾ ನಿವಾಸಿ ಸುನೀತಾ ಸುಮಾರು 10 ವರ್ಷಗಳ ಹಿಂದೆ ಪತ್ರಾ ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆಕೆ ಮನೆಗೆಲಸದವಳಾಗಿ ಕೆಲಸ ಮಾಡಲು ಪತ್ರಾ ಅವರ ಮಗಳು ವತ್ಸಲಾಳೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿದಳು. ಸುಮಾರು ನಾಲ್ಕು ವರ್ಷಗಳ ಹಿಂದೆ ವತ್ಸಲಾ ಮತ್ತು ಸುನೀತಾ ಇಬ್ಬರೂ ರಾಂಚಿಗೆ ಮರಳಿದ್ದರು.
ಬುಡಕಟ್ಟು ಮಹಿಳೆಯ ಪ್ರಕಾರ, ಪತ್ರಾ ಆಕೆಗೆ ಕಿರುಕುಳ ನೀಡಿದ್ದು ಆರು ವರ್ಷಗಳ ಕಾಲ ಶಿಕ್ಷೆ ನೀಡಿದ್ದಾರೆ. ಅವರು ಯಾಕೆ ಹಾಗೆ ಮಾಡುತ್ತಿದ್ದರು ಮತ್ತು ತಾನೇನು ತಪ್ಪು ಮಾಡಿದ್ದೇನೆ ಎಂದು ಆಕೆಗೂ ತಿಳಿದಿಲ್ಲ. ಪತ್ರಾಳ ಮಗ ಆಯುಷ್ಮಾನ್ ಸುನೀತಾಳನ್ನು ರಕ್ಷಿಸಿದ್ದಾನೆ.
Published On - 9:52 pm, Tue, 30 August 22