ಮಹಿಳೆಯರು ಕೇಸರಿ ದುಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಬನ್ನಿ, ನನ್ನ ಜತೆ ಪ್ರಮಾಣ ವಚನ ಸ್ವೀಕರಿಸಿ: ಭಗವಂತ್ ಮಾನ್ ಕರೆ

Bhagwant Mann ಎಪಿ ನಾಯಕ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮಾರ್ಚ್ 16 ರಂದು ಖಟ್ಕರ್ ಕಲಾನ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ನಾನಷ್ಟೇ ಅಲ್ಲ, ರಾಜ್ಯದ 3 ಕೋಟಿಗೂ ಅಧಿಕ ಜನಸಂಖ್ಯೆ ನನ್ನೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದೆ.

ಮಹಿಳೆಯರು ಕೇಸರಿ ದುಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಬನ್ನಿ, ನನ್ನ ಜತೆ ಪ್ರಮಾಣ ವಚನ ಸ್ವೀಕರಿಸಿ: ಭಗವಂತ್ ಮಾನ್ ಕರೆ
ಭಗವಂತ್ ಮಾನ್- ಅರವಿಂದ ಕೇಜ್ರಿವಾಲ್
Edited By:

Updated on: Mar 14, 2022 | 3:33 PM

ಚಂಡೀಗಢ: ಬುಧವಾರ ಪಂಜಾಬ್‌ನಲ್ಲಿ (Punjab) ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮುನ್ನ, ಆಪ್‌ನ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಸೋಮವಾರ “ರಾಜ್ಯದ ಮೂರು ಕೋಟಿ ಜನರಿಗೆ” ವಿಡಿಯೊ ಮೂಲಕ ಮನವಿಯೊಂದನ್ನು ಮಾಡಿದ್ದಾರೆ. ಮುಖ್ಯಮಂತ್ರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ತಮ್ಮೊಂದಿಗೆ ಕೈಜೋಡಿಸಬೇಕೆಂದು ಅವರು ಅವರು ಆ ವಿಡಿಯೊದಲ್ಲಿ ಕೇಳಿಕೊಂಡಿದ್ದಾರೆ. 48 ವರ್ಷದ ನಾಯಕ ಮತ್ತು ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಅಮೃತಸರದಲ್ಲಿ ರಾಜ್ಯ ಚುನಾವಣೆಯಲ್ಲಿ ಗೆದ್ದ ಇತರ ಅಭ್ಯರ್ಥಿಗಳೊಂದಿಗೆ ಭವ್ಯವಾದ ರೋಡ್‌ಶೋ ನೇತೃತ್ವ ವಹಿಸಿದ ಒಂದು ದಿನದ ನಂತರ ವಿಡಿಯೊ ಮನವಿ ಬಂದಿದೆ. ಎಎಪಿ ನಾಯಕ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮಾರ್ಚ್ 16 ರಂದು ಖಟ್ಕರ್ ಕಲಾನ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ನಾನಷ್ಟೇ ಅಲ್ಲ, ರಾಜ್ಯದ 3 ಕೋಟಿಗೂ ಅಧಿಕ ಜನರು ನನ್ನೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪರಂಪರೆಯನ್ನು ಒಟ್ಟಾಗಿ ಮುನ್ನಡೆಸುತ್ತೇವೆ, ನಾನು ಒಬ್ಬಂಟಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ, ನೀವೆಲ್ಲರೂ ಸಿಎಂ ಪ್ರಮಾಣ ವಚನ ಸ್ವೀಕರಿಸುತ್ತೀರಿ, ಇದು ನಿಮ್ಮ ಸರ್ಕಾರವಾಗಲಿದೆ ಎಂದು ಮಾನ್ ಹೇಳಿದ್ದಾರೆ. ಖಟ್ಕರ್ ಕಲಾನ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾಗಿದೆ.


“ನಿಮ್ಮ ಸಹೋದರನನ್ನು ಪ್ರೋತ್ಸಾಹಿಸಲು, ದಯವಿಟ್ಟು ಬೆಳಿಗ್ಗೆ 10 ಗಂಟೆಗೆ ಖಟ್ಕರ್ ಕಲಾನ್‌ಗೆ ಬನ್ನಿ” ಎಂದು ಎಎಪಿ ನಾಯಕ ವಿನಂತಿಸಿದ್ದಾರೆ. ಮಹಿಳೆಯರು ಕೇಸರಿ ದುಪಟ್ಟಾ ಮತ್ತು ಪುರುಷರು ಕೇಸರಿ ಪೇಟ ಧರಿಸುವಂತೆ ಹೇಳಿದರು. ಸಿಖ್ ಧರ್ಮದಲ್ಲಿ ಕೇಸರಿ ಪ್ರಾಮುಖ್ಯತೆಯನ್ನು ಹೊಂದಿದೆ. ‘‘ಅಂದು ಖಟ್ಕರ್ ಕಲಾನ್ ಗೆ ಕೇಸರಿ ಬಣ್ಣ ಹಚ್ಚುತ್ತೇವೆ’ ಎಂದು ಅವರು ಹೇಳಿದ್ದಾರೆ.

ಈ ವಿಡಿಯೊವನ್ನು ಅರವಿಂದ ಕೇಜ್ರಿವಾಲ್ ಕೂಡ ಶೇರ್ ಮಾಡಿದ್ದಾರೆ. “ಪಂಜಾಬ್ ಮತ್ತೆ ರಂಗ್​​ಲಾ ಪಂಜಾಬ್ ಆಗಲಿದೆ. ಭಗತ್ ಸಿಂಗ್ ಅವರ ಕನಸುಗಳು ನನಸಾಗುತ್ತವೆ. ಇಡೀ ಪಂಜಾಬ್ ನನ್ನ ಕಿರಿಯ ಸಹೋದರನೊಂದಿಗೆ ಪ್ರಮಾಣವಚನ ಸ್ವೀಕರಿಸುತ್ತದೆ. ನಾನು ಭಾಗವಹಿಸುತ್ತಿದ್ದೇನೆ … ದಯವಿಟ್ಟು ನೀವೂ ಬನ್ನಿ.” ಎಂದು ದೆಹಲಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.


ಎಎಪಿ ರಾಜ್ಯ ಚುನಾವಣೆಯಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 92 ಸ್ಥಾನಗಳೊಂದಿಗೆ ಅದ್ಭುತ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಅಧಿಕಾರದಿಂದ ಹೊರಗುಳಿದಿದ್ದು, ಕೇವಲ 18 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ:Covid Vaccination ದೇಶದಲ್ಲಿ 12-14 ವಯಸ್ಸಿನ ಎಲ್ಲಾ ಮಕ್ಕಳಿಗೆ ಕೊವಿಡ್ ಲಸಿಕೆ ನೀಡಿಕೆ ಬುಧವಾರ ಆರಂಭ

Published On - 3:28 pm, Mon, 14 March 22